Showing 134 Result(s)
ಸಾಂಬಾರು ಮತ್ತು ಪಲ್ಯಗಳು

HURULI KALU CHUTNEY ಹುರುಳಿ ಕಾಳು ಚಟ್ನಿ

ಹುರುಳಿ ಕಾಳು ಆರೋಗ್ಯಕರವಾದ ಕಾಳು. ಇದರ ರುಚಿಯಾದ ಚಟ್ನಿ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ :- 2 ಚಮಚ ಹುರುಳಿ ಕಾಳು ಪಟ ಪಟನೆ ಸಿಡಿಯುವವರೆಗೆ ಹುರಿದಿಡಿ.   4 ಚಮಚ ಕಾಯಿ ತುರಿದಿಡಿ. 6 ಬ್ಯಾಡಗಿ ಮೆಣಸಿನಕಾಯಿ ಹುರಿದು ಪುಡಿ ಮಾಡಿಡಿ. 1 ಚಮಚ ಹುಣಿಸೆ ರಸ ತೆಗೆದಿಡಿ. ಮಿಕ್ಸಿ ಜಾರಿಗೆ ಎಲ್ಲಾ ಸಾಮಗ್ರಿಗಳನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ …

Oota ಸಾಂಬಾರು ಮತ್ತು ಪಲ್ಯಗಳು

HUNISE SAARU ಹುಣಿಸೆ ಸಾರು

ಪ್ರತಿ ದಿನ ಬೇಳೆ ಸಾರು, ಟೋಮೇಟೋ ಸಾರು ತಿಂದು ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ. ಸುಲಭವಾಗಿ ಐದೇ ನಿಮಿಷದಲ್ಲಿ ಮಾಡಬಹುದು. ಅಥವಾ ಯಾವುದಾದರೂ ಸಮಾರಂಭಕ್ಕೆ ಹೋಗಿ ಬಂದಾಗ ಒಂದು ಹೊತ್ತಿಗೆ ಬೇಳೆ ಬೇಯಿಸಿ ಮಾಡಲು ಬೇಸರವಾಗಿದ್ದರೆ ಹೀಗೆ ಮಾಡಬಹುದು. ಮಾಡುವ ವಿಧಾನ :- ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ಬಿಸಿ ನೀರಿನಲ್ಲಿ ನೆನೆಸಿ ರಸ ತೆಗೆದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ. ಕರಿಬೇವು ಸ್ವಲ್ಪ ತೊಳೆದಿಡಿ. ಒಂದು ಚಮಚ ಕರಿ ಮೆಣಸು, ಜೀರಿಗೆ …

ಸಾಂಬಾರು ಮತ್ತು ಪಲ್ಯಗಳು

GOBHI ALU CURRY ( DRY ) ಗೋಭಿ ಆಲೂ ಕರ್ರಿ ( ಡ್ರೈ )

ಗೋಭಿ ಪ್ರಿಯರೆ ಇದೋ ಇಲ್ಲಿದೆ ಒಂದು ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ. ಮಾಡುವ ವಿಧಾನ :- 1 ಚಿಕ್ಕ ಗೋಭಿಯನ್ನು ಚಿಕ್ಕ ಚಿಕ್ಕದಾಗಿ ಬಿಡಿಸಿ ಬಿಸಿ ನೀರಿನಲ್ಲಿ ಹಾಕಿ ತೊಳೆದಿಡಿ. 1 ದೊಡ್ಡ ಆಲೂಗೆಡ್ಡೆ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿಡಿ. ಸ್ವಲ್ಪ ಹಸಿ ಬಟಾಣಿ ಬಿಡಿಸಿಡಿ. 1 ಈರುಳ್ಳಿ, 2 ಟೋಮೋಟೋ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಗೋಭಿ, ಆಲೂಗೆಡ್ಡೆ, ಚಿಟಿಕೆ ಅರಿಷಿಣ ಹಾಕಿ ಸ್ವಲ್ಪ ಹುರಿದು ಬಟಾಣಿ ಸೇರಿಸಿ. …

Oota ಸಾಂಬಾರು ಮತ್ತು ಪಲ್ಯಗಳು

PEPPER RASAM ಪೆಪ್ಪರ್ ರಸಂ ( ಮದುವೆ ಮನೆ ಶೈಲಿ )

ಕರಿ ಮೆಣಸು ಮಳೆಗಾಲಕ್ಕೆ, ಛಳಿಗೆ ಒಳ್ಳೆಯದು. ಗಂಟಲಿಗೆ ಹಿತವಾಗಿರುತ್ತದೆ. ಸಾಧಾರಣವಾಗಿ ಮದುವೆ ಮನೆಯಲ್ಲಿ ಈ ತರಹ ರಸಂ ಮಾಡುತ್ತಾರೆ! ಒಂದು ಚಿಕ್ಕ ಲೋಟ ಬೇಳೆಯನ್ನು ತೊಳೆದು ಚಿಟಿಕೆ ಅರಿಷಿಣ, ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ ಕಟ್ಟು ಸೋರಿ ಹಾಕಿಡಿ. ಈ ರೆಸಿಪಿಯಲ್ಲಿ ನಮಗೆ ಕಟ್ಟು ಮಾತ್ರ ಬೇಕು. ಬೆಂದ ಬೇಳೆಯನ್ನು ಪಲ್ಯ, ಸಾಂಬಾರ್, ದಾಲ್ ಮಾಡಲು ಬಳಸಬಹುದು. 4 ಚಮಚ ಗಟ್ಟಿಯಾದ ಕಾಯಿ ಹಾಲು ತೆಗೆದಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ, ಸ್ವಲ್ಪ ಕೊತ್ತಂಬರಿ …

ಸಾಂಬಾರು ಮತ್ತು ಪಲ್ಯಗಳು

MIX VEG HANDI ಮಿಕ್ಸ್ ವೆಜ್ ಹಂಡಿ

ನಿಮಗೆ ಇಷ್ಟವಾದ ತರಕಾರಿಗಳನ್ನು ಹಾಕಿ ಮಾಡಬಹುದಾದ ರುಚಿಯಾದ ರೆಸಿಪಿ. ಮಾಡುವ ವಿಧಾನ :- ಮೂರು ಟೋಮೇಟೋ ಬಿಸಿ ನೀರಿನಲ್ಲಿ ಹಾಕಿ ಸಿಪ್ಪೆ ತೆಗೆದಿಡಿ. 8 ಗೋಡಂಬಿ ಬಿಸಿ ನೀರಿನಲ್ಲಿ ಹಾಕಿ ನೆನೆಸಿ ಟೋಮೇಟೋ ಜೊತೆಗೆ ರುಬ್ಬಿಡಿ. ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ, ಬಟಾಣಿ, ಆಲೂಗೆಡ್ಡೆ, ಗೋಭಿ, ಕ್ಯಾಪ್ಸಿಕಮ್ ತೊಳೆದು ಸಣ್ಣಗೆ ಹೆಚ್ಚಿಡಿ. ದಪ್ಪ ತಳದ ಬಾಣಲೆಯಲ್ಲಿ 4 ಚಮಚ ಬೆಣ್ಣೆ/ ಎಣ್ಣೆ ಹಾಕಿ ಜೀರಿಗೆ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಚಿಟಿಕೆ ಅರಿಷಿಣ ಹಾಕಿ ಸ್ವಲ್ಪ ಬಾಡಿಸಿ. …

ಸಾಂಬಾರು ಮತ್ತು ಪಲ್ಯಗಳು

PANEER MATTAR ಪನ್ನೀರ್ ಮಟ್ಟರ್

ಪನ್ನೀರ್ ಪ್ರಿಯರೆ ನಿಮಗಾಗಿ ಇಲ್ಲಿದೆ ಇನ್ನೊಂದು ರುಚಿಯಾದ, ಬೇಗನೆ ಮಾಡಬಹುದಾದ ರೆಸಿಪಿ! ಮಾಡುವ ವಿಧಾನ :- 2 ಟೋಮೋಟೋ, 1 ಈರುಳ್ಳಿ, 6 ಬೆಳ್ಳುಳ್ಳಿ ಎಸಳು, 1/2 ಇಂಚು ಶುಂಠಿ ಸಿಪ್ಪೆ ತೆಗೆದು 2 ಚಮಚ ಎಣ್ಣೆ ಹಾಕಿ ಹುರಿದಿಡಿ. ತಣ್ಣಗಾದ ನಂತರ ರುಬ್ಬಿಡಿ. 100 ಗ್ರಾಂನಷ್ಟು ಪನ್ನೀರ್ ಸಣ್ಣಗೆ ಹೆಚ್ಚಿಡಿ. 1 ಚಿಕ್ಕ ಈರುಳ್ಳಿ, 2 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ …

ಸಾಂಬಾರು ಮತ್ತು ಪಲ್ಯಗಳು

BOONDI RAITA ಬೂಂದಿ ರಾಯ್ತ

ಸಾಮಾನ್ಯವಾಗಿ ಎಲ್ಲರೂ ಸೌತೆಕಾಯಿ ರಾಯ್ತ ಮಾಡುತ್ತಾರೆ. ಸ್ವಲ್ಪ ವಿಭಿನ್ನವಾದ ರಾಯ್ತ ಬೇಕಾದರೆ ಈ ರೆಸಿಪಿ ಮಾಡಿ ನೋಡಿ! ಮಾಡುವುದು ಸುಲಭ! ರುಚಿಕರ!ಎಲ್ಲಾ ತರಹದ Rice items ಜೊತೆಗೆ ಸೂಪರ್ ಕಾಂಬಿನೇಶನ್! ಮಾಡುವ ವಿಧಾನ:- 1/4 ಲೀಟರ್ ತಾಜಾ ಮೊಸರನ್ನು ಕಡೆದು, 1/2 ಚಮಚ ಖಾರದ ಪುಡಿ, 1/4 ಚಮಚ ಚಾಟ್ ಮಸಾಲ, 1/4 ಚಮಚ ಹುರಿದು ಪುಡಿ ಮಾಡಿದ ಜೀರಿಗೆ ಪುಡಿ, 1/4 ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಕಾಯಿ ತುರಿ, ಸ್ವಲ್ಪ …

ಸಾಂಬಾರು ಮತ್ತು ಪಲ್ಯಗಳು

BETTADA NELLIKAYI CHUTNEY ಬೆಟ್ಟದ ನೆಲ್ಲಿಕಾಯಿ ಚಟ್ನಿ

ಹೆಸರೇ ಹೇಳುವಂತೆ ಈ ಪುಟ್ಟ ಪುಟ್ಟ ಕಾಯಿ ತನ್ನಲ್ಲಿ ಬೆಟ್ಟದಷ್ಟು ಒಳ್ಳೆಯ ಅಂಶಗಳನ್ನು ತುಂಬಿಕೊಂಡಿದೆ. ಮಧುಮೇಹಿಗಳು ತಪ್ಪದೆ ತಿನ್ನಬೇಕಾದ ಈ ಕಾಯಿ ವಿಟಮಿನ್ ಸಿಯ ಆಗರ. ಇದರ ರುಚಿಯಾದ ಚಟ್ನಿ ಮಾಡುವ ವಿಧಾನ ಇಲ್ಲಿದೆ ನೋಡಿ! ಹನ್ನೆರಡು ಬೆಟ್ಟದ ನೆಲ್ಲಿಕಾಯಿಯನ್ನು ತೊಳೆದು 8 ಹಸಿ ಮೆಣಸಿನಕಾಯಿ ಹಾಕಿ ಕುಕ್ಕರಿನಲ್ಲಿಟ್ಟು ಒಂದು ವಿಷಲ್ ಕೂಗಿಸಿಡಿ. ತಣ್ಣಗಾದ ನಂತರ ಅದರ ಬೀಜ ತೆಗೆದು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ತರಿ ತರಿಯಾಗಿ ರುಬ್ಬಿಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಇಂಗು …

Tindi Tinisu ಸಾಂಬಾರು ಮತ್ತು ಪಲ್ಯಗಳು

SOUTHEKAYI PALYA ಸೌತೇಕಾಯಿ ಪಲ್ಯ

ಸೌತೇಕಾಯಿ ಎಲ್ಲರ ಮೆಚ್ಚಿನ ತರಕಾರಿ. ಇದರ ರುಚಿಯಾದ ಪಲ್ಯ ಮಾಡುವ ರೆಸಿಪಿ ಇಲ್ಲಿದೆ! ಸಾಧಾರಣವಾಗಿ ಉತ್ತರ ಕರ್ನಾಟಕದ ಹೋಟೆಲ್ ಗಳಲ್ಲಿ ಈ ಪಲ್ಯ ಬಡಿಸುತ್ತಾರೆ. ಮಾಡುವ ವಿಧಾನ :- ಒಂದು ಸೌತೆಕಾಯಿ ತೊಳೆದು ಕಹಿ, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಒಂದು ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ, ಕರಿಬೇವು ಸಣ್ಣಗೆ ಹೆಚ್ಚಿಡಿ. 2 ಚಮಚ ಹುಚ್ಚೆಳ್ಳು ಹುರಿದು ಪುಡಿ ಮಾಡಿಡಿ. 4 ಹಸ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, …

Tindi Tinisu ಸಾಂಬಾರು ಮತ್ತು ಪಲ್ಯಗಳು

HEALTHY CUPS ಹೆಲ್ದಿ ಕಪ್ಸ್

ಕೆಲವು ತರಕಾರಿಗಳನ್ನು ಹಸಿಯಾಗೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು! ಹಾಗೆ ಮೊಳಕೆ ಕಾಳು ಸಹ! ಇದರೆಡನ್ನು ಸೇರಿಸಿ ಮಾಡುವ ಆರೋಗ್ಯಕರವಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- 1 ಲೋಟ ಹೆಸರು ಕಾಳು ತೊಳೆದು ನೆನೆಸಿ ನೀರು ಸೋರಿ ಹಾಕಿ ಬಟ್ಟೆಯಲ್ಲಿ ಕಟ್ಟಿ ಮೊಳಕೆ ಬರಲು ಬಿಡಿ. 1 ಸೌತೇ ಕಾಯಿ ಕಹಿ, ಸಿಪ್ಪೆ ತೆಗೆದು ಎರಡು ಇಂಚು ಉದ್ದದ ತುಂಡುಗಳನ್ನಾಗಿ ಕತ್ತರಿಸಿ ಒಳಗಿನ ಭಾಗವನ್ನು ಎಚ್ಚರಿಕೆಯಿಂದ ತೆಗೆದಿಡಿ. ಅಂದರೆ ಅದು ಲೋಟದ ಆಕಾರದಲ್ಲಿ ಇರುವಂತೆ ನೋಡಿಕೊಳ್ಳಿ. ಇದೇ …