ಗೋಭಿ ಪ್ರಿಯರೆ ಇದೋ ಇಲ್ಲಿದೆ ಒಂದು ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ.
ಮಾಡುವ ವಿಧಾನ :-
1 ಚಿಕ್ಕ ಗೋಭಿಯನ್ನು ಚಿಕ್ಕ ಚಿಕ್ಕದಾಗಿ ಬಿಡಿಸಿ ಬಿಸಿ ನೀರಿನಲ್ಲಿ ಹಾಕಿ ತೊಳೆದಿಡಿ.
1 ದೊಡ್ಡ ಆಲೂಗೆಡ್ಡೆ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿಡಿ.
ಸ್ವಲ್ಪ ಹಸಿ ಬಟಾಣಿ ಬಿಡಿಸಿಡಿ.

1 ಈರುಳ್ಳಿ, 2 ಟೋಮೋಟೋ ಸಣ್ಣಗೆ ಹೆಚ್ಚಿಡಿ.
ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಗೋಭಿ, ಆಲೂಗೆಡ್ಡೆ, ಚಿಟಿಕೆ ಅರಿಷಿಣ ಹಾಕಿ ಸ್ವಲ್ಪ ಹುರಿದು ಬಟಾಣಿ ಸೇರಿಸಿ. ಮತ್ತೊಂದು ಬಾರಿ ಕಲೆಸಿ. ಕಡಿಮೆ ಉರಿಯಲ್ಲಿ ಸ್ವಲ್ಪ ನೀರು ಬೇಕಾದರೆ ಚಿಮುಕಿಸಿ ತಟ್ಟೆ ಮುಚ್ಚಿ ಸಂಪೂರ್ಣವಾಗಿ ಬೇಯಸಿಡಿ.

ಇನ್ನೊಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ ನಂತರ ಟೋಮೇಟೋ, ಚಿಟಿಕೆ ಅರಿಷಿಣ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್ ಹಾಕಿ ಸ್ವಲ್ಪ ಬಾಡಿಸಿ.
ನಂತರ 1 ಚಮಚ ಖಾರದ ಪುಡಿ, 1/2 ಚಮಚ ಧನಿಯ ಪುಡಿ, 1/2 ಚಮಚ ಗರಂ ಮಸಾಲ, ಉಪ್ಪು ಹಾಕಿ ಚೆನ್ನಾಗಿ ಕಲೆಸಿ. ಬೆಂದ ಗೋಭಿ, ಆಲೂಗೆಡ್ಡೆ ಹಾಕಿ ಮೃದುವಾಗಿ ಕಲೆಸಿ ಕಡಿಮೆ ಉರಿಯಲ್ಲಿ ತಟ್ಟೆ ಮುಚ್ಚಿ ಮೂರ್ನಾಲ್ಕು ನಿಮಿಷ ಬಿಸಿ ಮಾಡಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಸ್ವಲ್ಪ ನಿಂಬೆರಸ ಹಾಕಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಆಲೂ ಗೋಭಿ ಕರ್ರಿ ಸವಿಯಲು ಸಿದ್ಧ!
ಧನ್ಯವಾದಗಳು ![]()
![]()
![]()
