Showing 7 Result(s)
ಉಪಹಾರ

SPECIAL VANGIBATH ಸ್ಪೆಷಲ್ ವಾಂಗೀಭಾತ್

SPECIAL VANGIBATH ಸ್ಪೆಷಲ್ ವಾಂಗೀಭಾತ್ ವಾಂಗೀಭಾತ್ ಬದನೆ ಕಾಯಿ ಪ್ರಿಯರ ಇಷ್ಟವಾದ ತಿಂಡಿ. ಅದನ್ನು ಮತ್ತಷ್ಟು ರುಚಿಯಾಗಿ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ :- ಒಂದು ದೊಡ್ಡ ಹೋಳು ತೆಂಗಿನ ಕಾಯಿ ತುರಿದು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ತೆಂಗಿನ ಹಾಲು ತೆಗೆದಿಡಿ. ಒಂದು ಲೋಟ ಸೋನಾ ಮಸೂರಿ ಅಕ್ಕಿಯನ್ನು ತೊಳೆದು ನೀರು ಸೋರಿ ಹಾಕಿಡಿ. 1/4 ಕೇಜಿ ಹಸಿರು ಬದನೇಕಾಯಿ ಸಣ್ಣಗೆ ಉದ್ದಕೆ ಹೆಚ್ಚಿ ನೀರಿನಲ್ಲಿ ಹಾಕಿಡಿ. ಒಂದು ಆಲೂಗೆಡ್ಡೆ ಸಿಪ್ಪೆ ತೆಗೆದು …

ಸಾಂಬಾರು ಮತ್ತು ಪಲ್ಯಗಳು

VEGETABLE HYDERABADI ವೆಜಿಟೇಬಲ್ ಹೈದರಾಬಾದಿ

VEGETABLE HYDERABADI ವೆಜಿಟೇಬಲ್ ಹೈದರಾಬಾದಿ ಮಿಶ್ರ ತರಕಾರಿಗಳನ್ನು ಹಾಕಿ ಮಾಡುವ ರುಚಿಯಾದ ಗ್ರೇವಿ! ಮಾಡುವ ವಿಧಾನ :- ನಿಮ್ಮ ಇಷ್ಟವಾದ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಆವಿಯಲ್ಲಿ ಬೇಯಿಸಿಡಿ. ಈರುಳ್ಳಿ, ಕ್ಯಾಪ್ಸಿಕಮ್ ಹಾಕುವುದಾದರೆ ಒಗ್ಗರಣೆಯಲ್ಲಿ ಬೇಯಿಸಬಹುದು. ಒಂದು ಈರುಳ್ಳಿ, ಒಂದು ಇಂಚು ಶುಂಠಿ, 6 ಎಸಳು ಬೆಳ್ಳುಳ್ಳಿ, ನಾಲ್ಕು ಹಸಿರು ಮೆಣಸಿನಕಾಯಿ, ಒಂದು ಹಿಡಿ ಕೊತ್ತಂಬರಿಸೊಪ್ಪು, ಒಂದು ಹಿಡಿ ಪಾಲಾಕ್ ಸೊಪ್ಪು ಇಷ್ಟು ಒಂದು ಚಮಚ ಎಣ್ಣೆ ಹಾಕಿ ಹುರಿದು, ರುಬ್ಬಿಡಿ. ಬಾಣಲೆಯಲ್ಲಿ ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಮ್, ಜೀರಿಗೆ, …

ಸಾಂಬಾರು ಮತ್ತು ಪಲ್ಯಗಳು

GORIKAYI MATODI PALYA ಗೋರಿಕಾಯಿ ಮಾಟೋಡಿ ಪಲ್ಯ

GORIKAYI MATODI PALYA ಗೋರಿಕಾಯಿ ಮಾಟೋಡಿ ಪಲ್ಯ ಗೋರಿಕಾಯಿ ಆರೋಗ್ಯಕರ ತರಕಾರಿ. ಮಧುಮೇಹವನ್ನು ಹತೋಟಿಯಲ್ಲಿಡುತ್ತದೆ. ಇದರ ಸ್ವಲ್ಪ ಒಗರು ರುಚಿಯಿಂದ ಕೆಲವರು ಅದನ್ನು ತಿನ್ನಲು ಇಷ್ಟ ಪಡುವುದಿಲ್ಲ. ಈ ವಿಧಾನದಲ್ಲಿ ಮಾಡುವುದರಿಂದ ಖಂಡಿತ ಅದನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಇದು ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ! ಮಾಡುವ ವಿಧಾನ :- 1/4 ಕೇಜಿ ಗೋರಿಕಾಯಿ ಸಣ್ಣಗೆ ಹೆಚ್ಚಿ ಬೇಯಿಸಿಡಿ. ಎರಡು ಟೇಬಲ್ ಚಮಚ ಕಡಲೇ ಬೇಳೆ ಎರಡು ಗಂಟೆ ನೆನೆಸಿಡಿ. ಎರಡು ದೊಡ್ಡ ಚಮಚ ಕಾಯಿ ತುರಿದಿಡಿ. …

ಸಿಹಿ ತಿನಿಸುಗಳು

GULGULE ಗುಲ್ ಗುಲೆ

GULGULE ಗುಲ್ ಗುಲೆ ಉತ್ತರ ಭಾರತದ ಒಂದು ಸುಲಭವಾಗಿ ಮಾಡಬಹುದಾದ ರುಚಿಯಾದ ಸಿಹಿ ತಿಂಡಿ. ಮಾಡುವ ವಿಧಾನ :- ಒಂದು ಅಳತೆ ಬೆಲ್ಲ ಪುಡಿ ಮಾಡಿ ಸ್ವಲ್ಪ ನೀರಿನಲ್ಲಿ ನೆನೆಸಿ ಸೋಸಿಡಿ. ನಾಲ್ಕು ಚಮಚ ಕಾಯಿ/ ಒಣ ಕೊಬ್ಬರಿ ತುರಿದಿಡಿ. ಎರಡು ಏಲಕ್ಕಿ ಪುಡಿ ಮಾಡಿಡಿ. ಸ್ವಲ್ಪ ಬಾದಾಮಿ ಗೋಡಂಬಿ ಚಿಕ್ಕ ಚಿಕ್ಕದಾಗಿ ಕತ್ತರಿಸಿಡಿ. ಒಂದು ದೊಡ್ಡ ಬಟ್ಟಲಿನಲ್ಲಿ ಒಂದೂವರೆ ಅಳತೆ ಗೋಧಿ ಹಿಟ್ಟು, ಕರಗಿಸಿದ ಬೆಲ್ಲ, ಕಾಯಿ ತುರಿ, ಏಲಕ್ಕಿ ಪುಡಿ, ಗೋಡಂಬಿ ಬಾದಾಮಿ, ಒಂದು …

ಖಾರ ತಿನಿಸುಗಳು

HARA BARA CUTLET ಹರ ಬರಾ ಕಟ್ಲೆಟ್

HARA BARA CUTLET ಹರ ಬರಾ ಕಟ್ಲೆಟ್ ಸೊಪ್ಪು ಮತ್ತು ಹಸಿರು ಬಣ್ಣದ ತರಕಾರಿಗಳನ್ನು ಹೆಚ್ಚಾಗಿ ಬಳಸಿ ಮಾಡುವುದರಿಂದ ಈ ಕಟ್ಲೆಟ್ ಗೆ ಈ ಹೆಸರು ಬಂದಿರಬಹುದು! ರುಚಿಯಾದ ಈ ಕಟ್ಲೆಟ್ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ:- ಎರಡು ದೊಡ್ಡ ಕಟ್ಟು ಪಾಲಾಕ್ ಸೊಪ್ಪು ತೊಳೆದು ಕುದಿಯುವ ನೀರಿನಲ್ಲಿ ಹಾಕಿ ಎರಡು ನಿಮಿಷ ಕುದಿಸಿ ನೀರಿನಿಂದ ತೆಗೆದು ತಣ್ಣನೆ ನೀರಿನಲ್ಲಿ ಹಾಕಿ, ನೀರು ಸಂಪೂರ್ಣವಾಗಿ ಹೋದ ಮೇಲೆ ಗಟ್ಟಿಯಾಗಿ ಒಂದು ಸಲ ಹಿಂಡಿ ರುಬ್ಬಿಡಿ. ಎರಡು …

ಸಾಂಬಾರು ಮತ್ತು ಪಲ್ಯಗಳು

MASALA GADDE SAMBAR ಮಸಾಲ ಗಡ್ಡೆ ಸಾಂಬಾರ್

MASALA GADDE SAMBAR ಮಸಾಲ ಗಡ್ಡೆ ಸಾಂಬಾರ್ ಸಾಧಾರಣವಾಗಿ ಪ್ರತಿ ದಿನ ಬೇಳೆ ಸಾಂಬಾರ್ ಮಾಡಿ ಬೇಜಾರಾಗಿದ್ದರೆ ಒಂದು ಬದಲಾವಣೆಗಾಗಿ ಈ ಆಲೂಗೆಡ್ಡೆ ಸಾಂಬಾರ್ ಮಾಡಿ ನೋಡಿ. ಖಂಡಿತ ಇಷ್ಟ ಆಗುತ್ತದೆ. ಇದು ನಮ್ಮ ಅಮ್ಮ ಮಾಡುತ್ತಿದ್ದ ವಿಧಾನ! ಅವರು ಒರಳು ಕಲ್ಲಿನಲ್ಲಿ ರುಬ್ಬಿ ಮಾಡುತ್ತಿದ್ದರು. ಮಾಡುವ ವಿಧಾನ :- ನಾಲ್ಕು ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಹೆಚ್ಚಿಡಿ / ಪುಡಿ ಮಾಡಿಡಿ. ಒಂದು ಈರುಳ್ಳಿ ಸಣ್ಣಗೆ ಹೆಚ್ಚಿ, ಒಂದು ಚಮಚ ಎಣ್ಣೆ ಹಾಕಿ …

ಸಾಂಬಾರು ಮತ್ತು ಪಲ್ಯಗಳು

ALU GARLIC FRY ಆಲೂ ಗಾರ್ಲಿಕ್ ಫ್ರೈ

ALU GARLIC FRY ಆಲೂ ಗಾರ್ಲಿಕ್ ಫ್ರೈ ಆಲೂಗೆಡ್ಡೆ ಪ್ರಿಯರೆ ನಿಮಗಾಗಿ ಸುಲಭವಾಗಿ ಮಾಡಬಹುದಾದ ಒಂದು ಸಿಂಪಲ್ ರೆಸಿಪಿ. ಆಲೂಗೆಡ್ಡೆ ಜೊತೆಗೆ ಬೆಳ್ಳುಳ್ಳಿ ಒಳ್ಳೆಯ ಕಾಂಬಿನೇಶನ್. ಒಮ್ಮೆ ಮಾಡಿ ನೋಡಿ. ಖಂಡಿತ ಇಷ್ಟ ಆಗುತ್ತದೆ. ಮಾಡುವ ವಿಧಾನ :- ನಿಮಗೆ ಬೇಕಾಗುವಷ್ಟು ಆಲೂಗೆಡ್ಡೆ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ. ಎರಡು ಬೆಳ್ಳುಳ್ಳಿ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಜೀರಿಗೆ, ಕರಿಬೇವು, ಹೆಚ್ಚಿದ ಬೆಳ್ಳುಳ್ಳಿ , ಸ್ವಲ್ಪ ಅರಿಷಿಣ ಹಾಕಿ ಸ್ವಲ್ಪ ಬಾಡಿಸಿ ನಂತರ ಹೆಚ್ಚಿದ …