ALU GARLIC FRY ಆಲೂ ಗಾರ್ಲಿಕ್ ಫ್ರೈ
ಆಲೂಗೆಡ್ಡೆ ಪ್ರಿಯರೆ ನಿಮಗಾಗಿ ಸುಲಭವಾಗಿ ಮಾಡಬಹುದಾದ ಒಂದು ಸಿಂಪಲ್ ರೆಸಿಪಿ. ಆಲೂಗೆಡ್ಡೆ ಜೊತೆಗೆ ಬೆಳ್ಳುಳ್ಳಿ ಒಳ್ಳೆಯ ಕಾಂಬಿನೇಶನ್. ಒಮ್ಮೆ ಮಾಡಿ ನೋಡಿ. ಖಂಡಿತ ಇಷ್ಟ ಆಗುತ್ತದೆ.
ಮಾಡುವ ವಿಧಾನ :-
ನಿಮಗೆ ಬೇಕಾಗುವಷ್ಟು ಆಲೂಗೆಡ್ಡೆ ಸಣ್ಣಗೆ, ಉದ್ದಕ್ಕೆ ಹೆಚ್ಚಿಡಿ.

ಎರಡು ಬೆಳ್ಳುಳ್ಳಿ ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿ ಜೀರಿಗೆ, ಕರಿಬೇವು, ಹೆಚ್ಚಿದ ಬೆಳ್ಳುಳ್ಳಿ , ಸ್ವಲ್ಪ ಅರಿಷಿಣ ಹಾಕಿ ಸ್ವಲ್ಪ ಬಾಡಿಸಿ ನಂತರ ಹೆಚ್ಚಿದ ಆಲೂಗೆಡ್ಡೆ ಹಾಕಿ ಕಲೆಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ ತಟ್ಟೆ ಮುಚ್ಚಿ ಬೇಯಿಸಿ. ಆಲೂಗೆಡ್ಡೆ ಸ್ವಲ್ಪ ಮೆತ್ತಗಾದ ಮೇಲೆ ಅರ್ಧ ಚಮಚ ಗರಂ ಮಸಾಲ, ಒಂದು ಚಮಚ ಖಾರದ ಪುಡಿ, ಅರ್ಧ ಚಮಚ ಜೀರಿಗೆ ಪುಡಿ, ಸ್ವಲ್ಪ ನಿಂಬೆ ರಸ, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಕಲೆಸಿದರೆ, ಬಾಯಲ್ಲಿ ನೀರೂರಿಸುವ ಆಲೂ ಗಾರ್ಲಿಕ್ ಫ್ರೈ ಸವಿಯಲು ಸಿದ್ಧ!

ಈ ಪಲ್ಯ ಚಪಾತಿ, ದೋಸೆ, ಪೂರಿ, ಅನ್ನ ಸಾರು ಜೊತೆಗೆ ಒಳ್ಳೆಯ Side dish.
ಧನ್ಯವಾದಗಳು 🙏🙏🙏
