RAVA KAJJAYA ರವಾ ಕಜ್ಜಾಯ
ಕಜ್ಜಾಯ ಸಾಂಪ್ರಾದಾಯಕ ಸಿಹಿ. ಮಾಡುವುದು ಸ್ವಲ್ಪ ಕಷ್ಟವಾದರೂ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಸಾಧಾರಣವಾಗಿ ಎಲ್ಲರೂ ಕಜ್ಜಾಯ ಮಾಡುವುದು ನೆನೆಸಿದ ಅಕ್ಕಿ ಹಿಟ್ಟು ಮಾಡಿ. ನಮ್ಮ ಅತ್ತೆ ಮಾಡುತ್ತಿದ್ದ ಸುಲಭವಾದ ವಿಧಾನ ಇಲ್ಲಿದೆ ನೋಡಿ! ಈ ಕಜ್ಜಾಯ ಮಾಡುವುದು ಚಿರೋಟಿ ರವೆಯಿಂದ. ಇದನ್ನು ಇನ್ಸ್ಟೆಂಟ್ ಕಜ್ಜಾಯ ಅಂತ ಬೇಕಾದರೂ ಕರೆಯಬಹುದು. ಮಾಡುವುದು ಸುಲಭ! ಗರಿ ಗರಿಯಾಗಿರುತ್ತದೆ. ಮಾಡುವ ವಿಧಾನ:- ಒಂದು ಬೆಲ್ಲ ಪುಡಿ ಮಾಡಿಡಿ. ಅರ್ಧ ಲೋಟ ಕಾಯಿ ತುರಿದಿಡಿ. ಎರಡು ಏಲಕ್ಕಿ ಪುಡಿ ಮಾಡಿಡಿ. …