Tindi Tinisu ಚಾಟ್ಸ್

AKKI HITTINA CUTLET ಅಕ್ಕಿ ಹಿಟ್ಟಿನ ಕಟ್ಲೆಟ್

ಇದು ಮಹಾರಾಷ್ಟ್ರದ ವಿಶೇಷ ತಿನಿಸು! ಬೆಳಿಗ್ಗೆ ತಿಂಡಿಗೆ ಅಥವಾ ಸಂಜೆಯ ಕಾಫಿ ಜೊತೆಗೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ!

ಮಾಡುವ ವಿಧಾನ :-

1 ಅಳತೆ ಅಕ್ಕಿ ಹಿಟ್ಟನ್ನು ಎಣ್ಣೆ ಹಾಕದೆ ಸ್ವಲ್ಪ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ.

4 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 1/2 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ.

2 ಚಮಚ ಬಿಳಿ ಎಳ್ಳು ಹುರಿದಿಡಿ.

1 1/2 ಕಟ್ಟು ಮಜ್ಜಿಗೆ ಕಡೆದಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಚಿಟಿಕೆ ಇಂಗು, ಅರಿಷಿಣ, ಕರಿಬೇವು, ಶುಂಠಿ ತುರಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿ ನಂತರ 1/2 ಚಮಚ ಖಾರದ ಪುಡಿ, ಉಪ್ಪು, 11/2 ಅಳತೆ ಮಜ್ಜಿಗೆ ಹಾಕಿ ಕುದಿಯಲು ಇಡಿ.

ಕುದಿ ಬಂದ ತಕ್ಷಣ ಉರಿ ಕಡಿಮೆ ಮಾಡಿ ಅಕ್ಕಿ ಹಿಟ್ಟು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಚೆನ್ನಾಗಿ ಕಲೆಸಿ ಉರಿ ಕಡಿಮೆ ಮಾಡಿ ನಾಲ್ಕೈದು ನಿಮಿಷ ಬೇಯಿಸಿ, ಬಿಳಿ ಎಳ್ಳು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿ.

ಎಣ್ಣೆ ಸವರಿದ ತಟ್ಟೆಗೆ ಸುರಿದು ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.

ಕಾವಲಿ ಬಿಸಿಯಾಗಲು ಇಡಿ. 2 ಚಮಚ ಎಣ್ಣೆ ಹಾಕಿ ಕತ್ತರಿಸಿದ ತುಂಡುಗಳನ್ನು ಹಾಕಿ ಕಡಿಮೆ ಉರಿಯಲ್ಲಿ ಎರಡೂ ಕಡೆ ಗರಿ ಗರಿಯಾಗುವವರೆಗೆ ಬೇಯಿಸಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಅಕ್ಕಿಯ ಹಿಟ್ಟಿನ ಕಟ್ಲೆಟ್ ಸವಿಯಲು ಸಿದ್ಧ!

ಧನ್ಯವಾದಗಳು

Leave a Reply

Your email address will not be published.