MASALA RAVE ROTTI ಮಸಾಲ ರವೆ ರೊಟ್ಟಿ
ಚಿರೋಟಿ ರವೆಯಿಂದ ಮಾಡುವ ಈ ರೊಟ್ಟಿ ತುಂಬಾ ಮೃದುವಾಗಿ, ರುಚಿಯಾಗಿ ಇರುತ್ತದೆ. ಲಂಚ್ ಬಾಕ್ಸ್ ಗೆ ಬೇಕಾದರೆ ಹಾಕಬಹುದು. ತಣ್ಣಗಾದರೂ ಮೆತ್ತಗೆ ಇರುತ್ತದೆ. ಕೆಲವರಿಗೆ ಹೀಗೆ ಮಾಡುವುದು ಗೊತ್ತಿರಬಹುದು! ಹೊಸಬರಿಗೆ ಗೊತ್ತಾಗಲಿ ಎಂದು ಈ ರೆಸಿಪಿ ಹಾಕಿದ್ದೇನೆ! ಮಾಡುವ ವಿಧಾನ:- 2 ಕಟ್ಟು ಸಬ್ಬಾಕ್ಷಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಬೇಕಾದರೆ ಮೆಂತ್ಯ ಸೊಪ್ಪು ಕೂಡ ಹಾಕಬಹುದು. 1 ಈರುಳ್ಳಿ ಬೇಕಾದಲ್ಲಿ ಸಣ್ಣಗೆ ಹೆಚ್ಚಿಡಿ. 4 ಚಮಚ ಕಾಯಿ ತುರಿದಿಡಿ. 1 ಕ್ಯಾರೆಟ್ ತುರಿದಿಡಿ. ಬಾಣಲೆಯಲ್ಲಿ 1 1/4 …





