ಕರಿ ಮೆಣಸು ಮಳೆಗಾಲಕ್ಕೆ, ಛಳಿಗೆ ಒಳ್ಳೆಯದು. ಗಂಟಲಿಗೆ ಹಿತವಾಗಿರುತ್ತದೆ. ಸಾಧಾರಣವಾಗಿ ಮದುವೆ ಮನೆಯಲ್ಲಿ ಈ ತರಹ ರಸಂ ಮಾಡುತ್ತಾರೆ!
ಒಂದು ಚಿಕ್ಕ ಲೋಟ ಬೇಳೆಯನ್ನು ತೊಳೆದು ಚಿಟಿಕೆ ಅರಿಷಿಣ, ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ ಕಟ್ಟು ಸೋರಿ ಹಾಕಿಡಿ. ಈ ರೆಸಿಪಿಯಲ್ಲಿ ನಮಗೆ ಕಟ್ಟು ಮಾತ್ರ ಬೇಕು. ಬೆಂದ ಬೇಳೆಯನ್ನು ಪಲ್ಯ, ಸಾಂಬಾರ್, ದಾಲ್ ಮಾಡಲು ಬಳಸಬಹುದು.
4 ಚಮಚ ಗಟ್ಟಿಯಾದ ಕಾಯಿ ಹಾಲು ತೆಗೆದಿಡಿ.

4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಕರಿಬೇವು 2 ಎಸಳು ತೊಳೆದಿಡಿ.
1 ಚಿಕ್ಕ ಚಮಚ ಮೆಣಸು, 1 ಚಮಚ ಜೀರಿಗೆ ಹುರಿದು ತರಿ ತರಿಯಾಗಿ ಕುಟ್ಟಿಡಿ.

1 ಚಿಕ್ಕ ಬೆಳ್ಳುಳ್ಳಿ ಸಿಪ್ಪೆ ತೆಗೆದು ಜಜ್ಜಿಡಿ.
ಬಾಣಲೆಯಲ್ಲಿ ಒಗ್ಗರಣೆಗೆ ತುಪ್ಪ/ ಎಣ್ಣೆ ಸಾಸಿವೆ ಹಾಕಿ, ನಂತರ ಚಿಟಿಕೆ ಅರಿಷಿಣ, ಕರಿಬೇವು, ಜಜ್ಜಿದ ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಹುರಿದು, ನಂತರ ಮೆಣಸು, ಜೀರಿಗೆ ಪುಡಿ, ಬೇಳೆ ಕಟ್ಟು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ.
ಕಾಯಿ ಹಾಲು, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಒಲೆಯಿಂದ ಇಳಿಸಿ. ಕೊನೆಯಲ್ಲಿ ನಿಂಬೆ ರಸ ಸೇರಿಸಿದರೆ ರುಚಿಯಾದ, ಆರೋಗ್ಯಕರವಾದ ಪೆಪ್ಪರ್ ರಸಂ ಸವಿಯಲು ಸಿದ್ಧ!
ಈ ರಸಂಗೆ ಟೋಮೇಟೋ, ಹುಣಿಸೆ ಹಣ್ಣು ಹಾಕಬಾರದು. ನಿಂಬೆ ರಸ ಮಾತ್ರ ಹಾಕಬೇಕು.
ಬೆಳ್ಳುಳ್ಳಿ ಇಷ್ಟವಿಲ್ಲದವರು ಒಗ್ಗರಣೆಗೆ ಇಂಗು ಹಾಕಿ, ಮಿಕ್ಕಿದ್ದಲ್ಲಾ ಇದೇ ರೀತಿ ಮಾಡಬಹುದು.
ಕಾಯಿ ಹಾಲು ( Optional ) ಹಾಕಿದರೆ ರುಚಿ ಚೆನ್ನಾಗಿರುತ್ತದೆ!
ಧನ್ಯವಾದಗಳು ![]()
![]()
![]()
