Showing 41 Result(s)
Street Food ಚಾಟ್ಸ್

KATORI CHAT ಕಟೋರಿ ಚಾಟ್

KATORI CHAT ಕಟೋರಿ ಚಾಟ್ ಉತ್ತರ ಭಾರತದ ಜನಪ್ರಿಯ ಚಾಟ್ ಕಟೋರಿ ಚಾಟ್. ಕಟೋರಿ ಎಂದರೆ ಹಿಂದಿಯಲ್ಲಿ ಬಟ್ಟಲು (BOWL) ಎಂದು ಅರ್ಥ! ಪೂರಿಯನ್ನು ಬಟ್ಟಲಿನಂತೆ ಮಾಡಿ ತಿನ್ನುವ ಚಾಟ್! ಸಾಧಾರಣವಾಗಿ ಕಟೋರಿಗಳನ್ನು ಹೋಟೆಲ್ ಗಳಲ್ಲಿ ಬೇಕ್ ಮಾಡುತ್ತಾರೆ, ನಾನು ಎಣ್ಣೆಯಲ್ಲಿ ಕರಿದು ಮಾಡಿದ್ದೇನೆ. ಮಾಡುವ ವಿಧಾನ:- ಒಳಗಡೆ ತುಂಬಲು :-ಮೊಳಕೆ ಬಂದ ನಿಮ್ಮ ಇಷ್ಟವಾದ ಕಾಳುಗಳನ್ನು ಬೇಯಿಸಿ ಇಡಿ. ನಾನು ಹೆಸರು ಕಾಳು, ಕಾಬೂಲ್ ಕಡಲೆ ಹಾಕಿದ್ದೇನೆ. ನೀವು ಬೇರೆ ಬೇರೆ ಕಾಳು ಮಿಶ್ರಣ ಮಾಡಿ …

ಚಾಟ್ಸ್

PANI PURI ಪಾನಿ ಪುರಿ

PANI PURI ಪಾನಿ ಪುರಿ ಪಾನಿ ಪೂರಿ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ವಯಸ್ಸಾದವರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ! ಪೂರಿ ಮಾಡುವ ವಿಧಾನ:- 1 ಅಳತೆ ಚಿರೋಟಿ ರವೆ, 1/2 ಲೋಟ ಮೈದಾ, ಉಪ್ಪು, ಕಾದ ಎಣ್ಣೆ 1 ಚಮಚ, ಚೆನ್ನಾಗಿ ಕಲೆಸಿ. ನಂತರ ತಣ್ಣನೆ ನೀರು ಹಾಕಿ ಸ್ವಲ್ಪ ಸ್ವಲ್ಪವೇ ಚಿಮುಕಿಸುತ್ತಾ ಪೂರಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ. 30 ನಿಮಿಷ ನೆನೆಯಲು ಬಿಡಿ. ನಂತರ ಮತ್ತೊಮ್ಮೆ ನಾದಿ ಚಪಾತಿ ಹಿಟ್ಟಿನ …

Starters ಚಾಟ್ಸ್

BABY CORN PEPPER DRY ಬೇಬಿ ಕಾರ್ನ್ ಪೆಪ್ಪರ್ ಡ್ರೈ

BABY CORN PEPPER DRY ಬೇಬಿ ಕಾರ್ನ್ ಪೆಪ್ಪರ್ ಡ್ರೈ ಮಕ್ಕಳ ಅಚ್ಚು ಮೆಚ್ಚಿನ ತರಕಾರಿ ಬೇಬಿ ಕಾರ್ನ್. ಬಹಳ ಇಷ್ಟ ಪಟ್ಟು ತಿನ್ನುತ್ತಾರೆ. ಮಾಡುವ ವಿಧಾನ:- ಬೇಬಿ ಕಾರ್ನ್ ತೊಳೆದು ಸಣ್ಣಗೆ, ತೆಳ್ಳಗೆ ಹೆಚ್ಚಿಡಿ. ಎರಡು ಚಮಚ ಕಾರ್ನ್ ಫ್ಲೋರ್, ಎರಡು ಚಮಚ ಮೈದಾ ಹಿಟ್ಟು, ಉಪ್ಪು, ಕರಿ ಮೆಣಸಿನ ಪುಡಿ ಹಾಕಿ ಕಲೆಸಿ. ಬೇಕಾದರೆ ಸ್ವಲ್ಪ ನೀರು ಚಿಮುಕಿಸಿ. ಬಿಡಿ ಬಿಡಿಯಾಗಿ ಕಾದ ಎಣ್ಣೆಯಲ್ಲಿ ಹಾಕಿ ಗರಿ ಗರಿಯಾಗಿ ಕರಿದು ಹೆಚ್ಚಿನ ಎಣ್ಣೆ ತೆಗೆದಿಡಿ. …

ಚಾಟ್ಸ್

ಮಸಾಲ ಪೂರಿ Masale Puri

ಮಸಾಲ ಪೂರಿ ಮಸಾಲ ಪೂರಿ ಚಾಟ್ ಗಳ ರಾಜ ಎಂದರೆ ತಪ್ಪಾಗಲಾರದು. ಎಲ್ಲರೂ ಇಷ್ಟ ಪಟ್ಟು ತಿನ್ನುವ ಚಾಟ್! ಅದನ್ನು ಮನೆಯಲ್ಲಿಯೇ ರುಚಿಯಾಗಿ, ಶುಚಿಯಾಗಿ ಮಾಡಿ ತಿನ್ನಬಹುದಾದರೆ ಹೊರಗಡೆ ಏಕೆ ತಿನ್ನಬೇಕು? ಈಗ ಹೇಗಿದ್ದರೂ ಮನೆ ಮಂದಿಯೆಲ್ಲಾ ಮನೆಯಲ್ಲೇ ಬಂಧಿಗಳಾಗಿದ್ದಾರೆ. ಈಗ ಮಾಡಿದರೆ ಮನೆಯಲ್ಲಿರುವರೆಲ್ಲಾ ಸಂತೋಷವಾಗಿ ತಿನ್ನಬಹುದು. ಆದರೆ ಮರೆಯದೆ ಮನೆ ಮಂದಿಯ ಸಹಾಯ ಪಡೆಯುವುದು ಮರೆಯಬೇಡಿ! ಹಾಗಾದರೆ ಸರಿ ಬನ್ನಿ ಮೊದಲು ಪೂರಿ ಮಾಡಿ ಇಡೋಣ! ಪೂರಿ ಮಾಡುವ ವಿಧಾನ:- 1 ಲೋಟ ಚಿರೋಟಿ ರವೆ, …

ಚಾಟ್ಸ್

CRISPY PALAK MOONG BITES ಕ್ರಿಸ್ಪಿ ಪಾಲಾಕ್ ಮೂಂಗ್ ಬೈಟ್ಸ್

CRISPY PALAK MOONG BITES ಕ್ರಿಸ್ಪಿ ಪಾಲಾಕ್ ಮೂಂಗ್ ಬೈಟ್ಸ್ ಸಂಜೆ ಕಾಫಿ ಅಥವಾ ಟೀ ಜೊತೆಗೆ ಖಾರಾ ಖಾರಾ ಗರಿ ಗರಿ ಏನಾದರೂ ಬೇಕು ಅಂದರೆ ಇದನ್ನು ಮಾಡಿ ಇಡಿ. ಬೇಕಾದಾಗ ತಿನ್ನಬಹುದು. ಮಾಡುವ ವಿಧಾನ:- ಎರಡು ಕಟ್ಟು ಪಾಲಾಕ್ ಸೊಪ್ಪು , ನಾಲ್ಕು ಹಸಿ ಮೆಣಸಿನಕಾಯಿ ಎರಡು ಮೂರು ನಿಮಿಷ ಕುದಿಯುವ ನೀರಿನಲ್ಲಿ ಬೇಯಿಸಿ ನೀರು ಪೂರ್ತಿ ಸೋರಿ ಹಾಕಿ ರುಬ್ಬಿಡಿ. ಅರ್ಧ ಲೋಟ ಹೆಸರುಬೇಳೆ ಎರಡು ಗಂಟೆ ನೆನೆಸಿ ನೀರು ಸೋರಿ ಹಾಕಿಡಿ. …

ಚಾಟ್ಸ್

RING SAMOSA ರಿಂಗ್ ಸಮೋಸಾ

RING SAMOSA ರಿಂಗ್ ಸಮೋಸಾ ಸಮೋಸಾ ಎಲ್ಲರಿಗೂ ಇಷ್ಟವಾಗುವ ತಿನಿಸು. ಸಾಧಾರಣವಾಗಿ ಮಾಡುವ ಆಕಾರದಲ್ಲಿ ಅಲ್ಲದೆ ಹೊಸ ರೂಪದ ಸಮೋಸ ಮಾಡುವ ರೆಸಿಪಿ ಇಲ್ಲಿದೆ:- ಮಾಡುವ ವಿಧಾನ :- ಮೈದಾ ಹಿಟ್ಟಿಗೆ ಸ್ವಲ್ಪ ಓಂ ಕಾಳು, ಒಂದು ಚಮಚ ಎಣ್ಣೆ, ಸ್ವಲ್ಪ ಉಪ್ಪು ಸೇರಿಸಿ ಗಟ್ಟಿಯಾಗಿ ಹಿಟ್ಟು ಕಲೆಸಿಡಿ. ಆಲೂಗಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ. ಒಂದು ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಎರಡು ಹಸಿ ಮೆಣಸಿನ …

ಖಾರ ತಿನಿಸುಗಳು ಚಾಟ್ಸ್

GARI GARI BATANI ಗರಿ ಗರಿ ಬಟಾಣಿ

GARI GARI BATANI ಗರಿ ಗರಿ ಬಟಾಣಿ ಸಂಜೆ ಕಾಫಿ, ಟೀ ಜೊತೆಗೆ ಖಾರಾ ಖಾರಾ ಗರಿ ಗರಿಯಾಗಿ ತಿನ್ನಲು ಸುಲಭವಾಗಿ ಮಾಡಬಹುದಾದ ಗರಿ ಗರಿ ಬಟಾಣಿ ರೆಸಿಪಿ ಇಲ್ಲಿದೆ. ಮಾಡುವ ವಿಧಾನ:- ನಿಮಗೆ ಬೇಕಾದಷ್ಟು ಒಣಗಿದ ಬಟಾಣಿ ಆರರಿಂದ ಎಂಟು ಗಂಟೆ ನೆನೆಸಿಡಿ. ನಂತರ ದಪ್ಪ ತಳದ ಪಾತ್ರೆಯಲ್ಲಿ ನೀರು ಹಾಕಿ ನೆಂದ ಬಟಾಣಿ ಹಾಕಿ ಬಟಾಣಿ ಸ್ವಲ ಮೆತ್ತಗೆ ಆಗುವವರೆಗೆ ಬೇಯಿಸಿ. ಹೆಚ್ಚು ಬೆಂದರೆ ಸಿಪ್ಪೆ ಕಾಳು ಬೇರೆ ಬೇರೆ ಆಗುತ್ತದೆ. ಹಾಗಾಗಿ ಸ್ವಲ್ಪ …

ಚಾಟ್ಸ್

BENDI KURKURE ಬೆಂಡಿ ಕುರ್ ಕುರೆ

BENDI KURKURE ಬೆಂಡಿ ಕುರ್ ಕುರೆ ಬೆಂಡೆಕಾಯಿ ಪ್ರಿಯರೆ ನಿಮಗಾಗಿ ಒಂದು ರುಚಿಯಾದ, ಗರಿ ಗರಿಯಾದ ರೆಸಿಪಿ ಇಲ್ಲಿದೆ. ಮಾಡುವ ವಿಧಾನ :- ಎಳೆಯದಾದ ಬೆಂಡೆಕಾಯಿ ತೊಳೆದು ಒರೆಸಿ ಕೊನೆಗಳನ್ನು ತೆಗೆದು ಒಂದು ಕಾಯಿಯನ್ನು ನಾಲ್ಕು ಭಾಗಗಳಾಗಿ ಹೆಚ್ಚಿಡಿ. ಹೆಚ್ಚಿದ ಬೆಂಡೆಕಾಯಿಗೆ ಎರಡು ಚಮಚ ಅಕ್ಕಿ ಹಿಟ್ಟು, ಎರಡು ಚಮಚ ಕಡಲೇ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರದ ಪುಡಿ, 1 ಚಿಕ್ಕ ಚಮಚ ಜೀರಿಗೆ, 1 ಚಿಕ್ಕ ಚಮಚ ಚಾಟ್ ಮಸಾಲ, 1 ಚಿಕ್ಕ ಚಮಚ …

ಖಾರ ತಿನಿಸುಗಳು ಚಾಟ್ಸ್

IDLI PALAK MANCHOORIAN ಇಡ್ಲಿ ಪಾಲಾಕ್ ಮಂಚೂರಿಯನ್

  ಮಂಚೂರಿಯನ್ ಬಹಳ ಜನ ಇಷ್ಟ ಪಟ್ಟು ತಿನ್ನುವ ಸ್ಟಾರ್ಟರ್. ಸಾಧಾರಣವಾಗಿ ಮಂಚೂರಿಯನ್ ಗೋಬಿ, ಪನ್ನೀರ್, ಬೇಬಿ ಕಾರ್ನ್, ಮಶ್ ರೂಮ್ ನಲ್ಲಿ ಮಾಡುತ್ತಾರೆ. ಇಡ್ಲಿಯಲ್ಲಿ ಮಾಡುವ ಸುಲಭವಾದ, ರುಚಿಯಾದ ಮಂಚೂರಿಯನ್ ರೆಸಿಪಿ ಇಲ್ಲಿದೆ! ಮಾಡುವ ವಿಧಾನ :- ಇಡ್ಲಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಿಡಿ. ಬಟ್ಟಲಿನಲ್ಲಿ ಕಾರ್ನ್ ಫ್ಲೋರ್, ಮೈದಾ, ಉಪ್ಪು, ಸ್ವಲ್ಪ ಕರಿ ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ನೀರು ಸೇರಿಸಿ ಬಜ್ಜಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ತೆಳ್ಳಗೆ ಗಂಟಿಲ್ಲದ ಹಾಗೆ …

ಖಾರ ತಿನಿಸುಗಳು ಚಾಟ್ಸ್

PANEER BAJJI ಪನ್ನೀರ್ ಬಜ್ಜಿ

PANEER BAJJI/ಪನ್ನೀರ್ ಬಜ್ಜಿ ಪನ್ನೀರ್ ಪ್ರಿಯರೆ ನೀವು ಸಾಮಾನ್ಯವಾಗಿ ಪನ್ನೀರ್ ಅನ್ನು ಗ್ರೇವಿ, ಮಂಚೂರಿಯನ್, ಕೆಲವು ಸಿಹಿ ತಿಂಡಿಗಳಲ್ಲಿ ತಿಂದಿರಬಹುದು. ಅದರ ರುಚಿಯಾದ ಬಜ್ಜಿ ಮಾಡುವ ರೆಸಿಪಿ ಇಲ್ಲಿದೆ! ಒಮ್ಮೆ ಮಾಡಿ ನೋಡಿ! ಖಂಡಿತಾ ಇನ್ನು ಮುಂದೆ ಆಗಾಗ ಮಾಡಿ ಸವಿಯುತ್ತೀರ. ಮಾಡುವ ವಿಧಾನ :- ಪನ್ನೀರ್ ಅನ್ನು ಚಿಕ್ಕದಾಗಿ ಕತ್ತರಿಸಿ ಒಂದೊಂದು ತುಂಡುಗಳನ್ನು ಮಧ್ಯದಲ್ಲಿ ಮುಕ್ಕಾಲು ಭಾಗದವರೆಗೂ ಕತ್ತರಿಸಿಡಿ. ಪನ್ನೀರ್ ತುಂಡುಗಳು ಬೇರೆ ಬೇರೆ ಆಗದ ಹಾಗೆ ಎಚ್ಚರಿಕೆಯಿಂದ ಕತ್ತರಿಸಿಡಿ.   ಎರಡು ಹಿಡಿ ಪುದೀನ, …