ಖಾರ ತಿನಿಸುಗಳು ಚಾಟ್ಸ್

GARI GARI BATANI ಗರಿ ಗರಿ ಬಟಾಣಿ

GARI GARI BATANI ಗರಿ ಗರಿ ಬಟಾಣಿ

ಸಂಜೆ ಕಾಫಿ, ಟೀ ಜೊತೆಗೆ ಖಾರಾ ಖಾರಾ ಗರಿ ಗರಿಯಾಗಿ ತಿನ್ನಲು ಸುಲಭವಾಗಿ ಮಾಡಬಹುದಾದ ಗರಿ ಗರಿ ಬಟಾಣಿ ರೆಸಿಪಿ ಇಲ್ಲಿದೆ.

ಮಾಡುವ ವಿಧಾನ:-

ನಿಮಗೆ ಬೇಕಾದಷ್ಟು ಒಣಗಿದ ಬಟಾಣಿ ಆರರಿಂದ ಎಂಟು ಗಂಟೆ ನೆನೆಸಿಡಿ. ನಂತರ ದಪ್ಪ ತಳದ ಪಾತ್ರೆಯಲ್ಲಿ ನೀರು ಹಾಕಿ ನೆಂದ ಬಟಾಣಿ ಹಾಕಿ ಬಟಾಣಿ ಸ್ವಲ ಮೆತ್ತಗೆ ಆಗುವವರೆಗೆ ಬೇಯಿಸಿ. ಹೆಚ್ಚು ಬೆಂದರೆ ಸಿಪ್ಪೆ ಕಾಳು ಬೇರೆ ಬೇರೆ ಆಗುತ್ತದೆ. ಹಾಗಾಗಿ ಸ್ವಲ್ಪ ಮೆತ್ತಗೆ ಆದ ತಕ್ಷಣ ಒಲೆಯಿಂದ ಇಳಿಸಿ ನೀರು ಸಂಪೂರ್ಣವಾಗಿ ಸೋರಿ ಹಾಕಿ ನೆರಳಿನಲ್ಲಿ ಕಾಟನ್ ಬಟ್ಟೆಯ ಮೇಲೆ ಹರಡಿ ಒಂದು ಗಂಟೆ ಕಾಲ ಒಣಗಲು ಬಿಡಿ.

ನಂತರ ಕಾದ ಎಣ್ಣೆಯಲ್ಲಿ ಸ್ವಲ್ಪ ಸ್ವಲ್ಪವೇ ಒಂದು ಜಾಲರಿಯಲ್ಲಿ ಹಾಕಿ ( ಚಿತ್ರ ನೋಡಿ ), ಬಟಾಣಿ ಗರಿ ಗರಿಯಾಗಿ ಮೇಲೆ ತೇಲುವವರೆಗೆ ಕರೆದು, ಬಿಸಿಯಿದ್ದಾಗಲೇ ಉಪ್ಪು, ಖಾರದ ಪುಡಿ, ಇಂಗು, ಚಾಟ್ ಮಸಾಲಾ ಸೇರಿಸಿ ಚೆನ್ನಾಗಿ ಕಲೆಸಿ ಗಾಳಿಯಾಡದ ಡಬ್ಬದಲ್ಲಿ ಹಾಕಿ ಬೇಕಾದಾಗ ಸವಿಯಿರಿ.

ಈ ವಿಧಾನದಲ್ಲಿ ಮಾಡಿದ ಬಟಾಣಿ ತುಂಬಾ ಗರಿ ಗರಿಯಾಗಿರುತ್ತದೆ.
ಕುಕ್ಕರ್ ನಲ್ಲಿ ಮುಚ್ಚಳ ಮುಚ್ಚಿ ಬೇಯಿಸಿದರೆ ಬಟಾಣಿ ಹೆಚ್ಚು ಬೆಂದು ಹೋಗುವ ಸಾಧ್ಯತೆ ಇದೆ. ಹಾಗಾಗಿ ಪಾತ್ರೆಯಲ್ಲಿ ಆಗಾಗ ನೋಡುತ್ತಾ ಬೇಯಿಸಿದರೆ ಒಳ್ಳೆಯದು.

ಧನ್ಯವಾದಗಳು 🙏🙏🙏

Leave a Reply

Your email address will not be published.