ಚಾಟ್ಸ್

CRISPY BENDI ಕ್ರಿಸ್ಪಿ ಬೆಂಡಿ

ಬೆಂಡೆಕಾಯಿ ಪ್ರಿಯರೆ ನಿಮಗಾಗಿ ಇನ್ನೊಂದು ಹೊಸ ರೆಸಿಪಿ! ಬೆಂಡೆ ಕಾಯಿ ಸಾಂಬಾರ್, ಗೊಜ್ಜು ತಿಂದು ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ! ಸಂಜೆ ಕಾಫಿ ಜೊತೆಗೆ ತಿನ್ನಲು ಸೊಗಸಾಗಿರುತ್ತದೆ! ಮಕ್ಕಳಿಗೂ ತುಂಬಾ ಇಷ್ಟವಾಗುವುದು!

ಮಾಡುವ ವಿಧಾನ:-

ಎಳೆಯದಾದ ಬೆಂಡೆ ಕಾಯಿಯನ್ನು ಆಯ್ಕೆ ಮಾಡಿ ತೊಳೆದು ಚೆನ್ನಾಗಿ ಒರೆಸಿ ಒಂದು ಬೆಂಡೆ ಕಾಯಿಯನ್ನು ನಾಲ್ಕು ಭಾಗ ಮಾಡಿಡಿ.

  

ಇದಕ್ಕೆ 2 ಚಮಚ ಅಕ್ಕಿ ಹಿಟ್ಟು, 2 ಚಮಚ ಕಾರ್ನ್ ಫ್ಲೋರ್/ ಮೈದಾ ಹಿಟ್ಟು, ಉಪ್ಪು, 1 ಚಮಚ ಖಾರದ ಪುಡಿ, 1/2 ಚಮಚ ಚಾಟ್ ಮಸಾಲ, 1/2 ಚಮಚ ಆಮ್ ಚೂರ್ ಪುಡಿ ಹಾಕಿ ಚೆನ್ನಾಗಿ ಕಲೆಸಿ.

 

ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ.

ಬೆಂಡೆ ಕಾಯಿ ಮಿಶ್ರಣಕ್ಕೆ ಕೆಲವೇ ಹನಿಗಳಷ್ಟು ನೀರು ಚಿಮುಕಿಸಿ ಚೆನ್ನಾಗಿ ಕಲೆಸಿ ಬಿಡಿ ಬಿಡಿಯಾಗಿ ಸ್ವಲ್ಪ ಸ್ವಲ್ಪವೇ ಬೆಂಡೆ ಕಾಯಿಯನ್ನು ಹಾಕುತ್ತಾ, ಕಡಿಮೆ ಉರಿಯಲ್ಲಿ ಗರಿ ಗರಿಯಾಗುವವರೆಗೆ ಕರಿದು ಸವಿಯಿರಿ!

ಧನ್ಯವಾದಗಳು

Leave a Reply

Your email address will not be published.