ಊಟಕ್ಕೆ ಉಪ್ಪಿನಕಾಯಿ ಚೆಂದ! ಅದರಲ್ಲೂ ಮಾವಿನ ಕಾಯಿ ಉಪ್ಪಿನಕಾಯಿ ಇನ್ನೂ ಚೆಂದ! ಇಂತಹ ರುಚಿಯಾದ ಮಾವಿನಕಾಯಿಯ ದಿಢೀರ್ ಉಪ್ಪಿನಕಾಯಿಯ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ:-
1 ದೊಡ್ಡ ಮಾವಿನ ಕಾಯಿಯನ್ನು ತೊಳೆದು ಒರೆಸಿ ಚಿಕ್ಕ ಚಿಕ್ಕದಾಗಿ ಹೆಚ್ಚಿಡಿ.
2 ಟೀ ಚಮಚ ಸಾಸಿವೆ, 1 ಟೀ ಚಮಚ ಮೆಂತ್ಯ ಹುರಿದು ಪುಡಿ ಮಾಡಿಡಿ.

ಬಟ್ಟಲಿನಲ್ಲಿ ಹೆಚ್ಚಿದ ಮಾವಿನ ಕಾಯಿ, ಸಾಸಿವೆ ಪುಡಿ, 1 ಟೇಬಲ್ ಚಮಚ ಉಪ್ಪಿನ ಪುಡಿ, 1 ಟೇಬಲ್ ಚಮಚ ಖಾರದ ಪುಡಿ ಹಾಕಿ ಚೆನ್ನಾಗಿ ಕಲೆಸಿಡಿ.
ಬಾಣಲೆಯಲ್ಲಿ 2 ಟೇಬಲ್ ಚಮಚ ಎಣ್ಣೆ ಹಾಕಿ ಸಾಸಿವೆ, ಇಂಗು, ಕರಿಬೇವು ಹಾಕಿ ಮಾವಿನ ಕಾಯಿ ಹೋಳಿಗೆ ಸೇರಿಸಿ.

ಈ ಮಿಶ್ರಣವನ್ನು ಒಂದು ಗಾಜಿನ ಬಾಟಲಿನಲ್ಲಿ ತುಂಬಿ ಫ್ರಿಡ್ಜ್ ನಲ್ಲಿಟ್ಟು ಆಗಾಗ ಕಲೆಸುತ್ತಿರಿ. 1 ಗಂಟೆಯ ನಂತರ ನಿಮಗೆ ಬೇಕಾದಾಗ ಊಟದಲ್ಲಿ ಹಾಕಿ ಸವಿಯಿರಿ!

ಫ್ರಿಡ್ಜ್ ನಲ್ಲಿಟ್ಟರೆ ವಾರವಾದರೂ ಕೆಡುವುದಿಲ್ಲ!
ಧನ್ಯವಾದಗಳು ![]()
![]()
![]()