ಮೆಂತ್ಯ ಆರೋಗ್ಯಕ್ಕೆ ಬಹಳ ಒಳ್ಳೆಯದು! ಇದರಿಂದ ರುಚಿಯಾದ, ಸುಲಭವಾಗಿ ಮಾಡಬಹುದಾದ ಗೊಜ್ಜಿನ ರೆಸಿಪಿ ಇಲ್ಲಿದೆ! ಇದು ಬಹಳ ಹಳೆಯ ವಿಧಾನ! ನನ್ನ ಪತಿಯ ಅಜ್ಜಿಯ ಕೈರುಚಿ!
ಮಾಡುವ ವಿಧಾನ:-
ಪುಡಿ ಮಾಡಲು:
ಮೆಂತ್ಯ : 2 ಟೇಬಲ್ ಚಮಚ
ಕರಿ ಮೆಣಸು : 1 ಟೇಬಲ್ ಚಮಚ
ಕಡಲೇ ಬೇಳೆ : 1 ಟೇಬಲ್ ಚಮಚ
ಉದ್ದಿನ ಬೇಳೆ : 1 ಟೇಬಲ್ ಚಮಚ
ಧನಿಯಾ : 1 ಟೇಬಲ್ ಚಮಚ
ಅಕ್ಕಿ : 1 ಟೇಬಲ್ ಚಮಚ
ಬ್ಯಾಡಗಿ ಮೆಣಸಿನಕಾಯಿ : 4

ಇಷ್ಟು ಸಾಮಗ್ರಿಗಳನ್ನು ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.

1 ದೊಡ್ಡ ನಿಂಬೆ ಗಾತ್ರದ ಹುಣಿಸೆ ಹಣ್ಣು ತೊಳೆದು ರಸ ತೆಗೆದು ಚೂರು ಬೆಲ್ಲ ಹಾಕಿಡಿ.

ಬಾಣಲೆಯಲ್ಲಿ 8 ಟೇಬಲ್ ಚಮಚ ಎಣ್ಣೆ ಹಾಕಿ. ( ಎಣ್ಣೆ ತುಸು ಹೆಚ್ಚೇ ಬೇಕು. ಇದು ಪುಳಿಯೋಗರೆ ಗೊಜ್ಜಿನ ಹಾಗೆ ) ಒಗ್ಗರಣೆಗೆ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಇಂಗು, ಅರಿಷಿಣ ಹಾಕಿ ಸ್ವಲ್ಪ ಹುರಿದು ಹುಣಿಸೆ ರಸ, ಸ್ಪಲ್ಪ ನೀರು ಹಾಕಿ ಕುದಿಸಿ, ನಂತರ ಪುಡಿ ಮಾಡಿದ ಮಿಶ್ರಣ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲೆಸಿ, ಕಡಿಮೆ ಉರಿಯಲ್ಲಿ ಎಣ್ಣೆ ಗೊಜ್ಜಿನಿಂದ ಹೊರ ಬರುವವರೆಗೆ ಕುದಿಸಿ ಒಲೆಯಿಂದ ಇಳಿಸಿ.
ತಣ್ಣಗಾದ ಮೇಲೆ ಗಾಜಿನ ಬಾಟಲಿನಲ್ಲಿ ತುಂಬಿ ಫ್ರಿಡ್ಜ್ ನಲ್ಲಿಟ್ಟು, ನಿಮಗೆ ಬೇಕಾದಾಗ ಸ್ವಲ್ಪ ತೆಗೆದು ಚಪಾತಿ, ಅನ್ನದೊಡನೆ ತಿನ್ನಬಹುದು!
ಈ ಗೊಜ್ಜು ತಿಂಗಳಾದರೂ ಕೆಡುವುದಿಲ್ಲ! ಆರೋಗ್ಯಕ್ಕೆ ಒಳ್ಳೆಯದು! ರುಚಿಕರ ಕೂಡ!

ನಾನು ಒಣಗಿದ ಗಣಿಕೆ ಬೀಜ ಸ್ವಲ್ಪ ಒಗ್ಗರಣೆಗೆ ಹಾಕಿದ್ದೇನೆ. ಅಂಗಡಿಯಲ್ಲಿ ರೆಡಿ ಮೇಡ್ ಸಿಗುತ್ತದೆ! ಮಧು ಮೇಹಿಗಳಿಗೆ ಬಹಳ ಒಳ್ಳೆಯದು!
ಧನ್ಯವಾದಗಳು ![]()
![]()
![]()