RAVE UNDE ರವೆ ಉಂಡೆ

ಎಲ್ಲರಿಗೂ ಇಷ್ಟವಾಗುವ ಸಾಂಪ್ರದಾಯಿಕ ಸಿಹಿ. ಇದನ್ನು ಬೇರೆ ಬೇರೆ ವಿಧಾನದಲ್ಲಿ ಮಾಡುತ್ತಾರೆ.
ನಮ್ಮ ಮನೆಯ ಸುಲಭವಾದ ವಿಧಾನ ಇಲ್ಲಿದೆ :-
ನಾಲ್ಕು ಚಮಚ ತುಪ್ಪ ಹಾಕಿ ಸಣ್ಣದಾಗಿ ಹೆಚ್ಚಿದ ಗೋಡಂಬಿ, ಬಾದಾಮಿ, ದ್ರಾಕ್ಷಿ ಸ್ವಲ್ಪ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಒಂದು ಕಪ್ ಚಿರೋಟಿ ರವೆ ಹಾಕಿ ಕಡಿಮೆ ಉರಿಯಲ್ಲಿ ಸುಮಾರು ಆರರಿಂದ ಎಂಟು ನಿಮಿಷ ಘಮ್ ಎಂದು ವಾಸನೆ ಬರುವವರೆಗೆ ಹುರಿದು, ಅರ್ಧ ಕಪ್ ಒಣ ಕೊಬ್ಬರಿ ತುಡಿ ಹಾಕಿ ಚೆನ್ನಾಗಿ ಕಲೆಸಿ ತೆಗೆದಿಡಿ.
ಇನ್ನೊಂದು ದಪ್ಪ ತಳದ ಬಾಣಲೆಯಲ್ಲಿ ಮುಕ್ಕಾಲು ಕಪ್ ಸಕ್ಕರೆ ಹಾಕಿ ಅದು ಮುಳುಗುವಷ್ಟು ನೀರು ಹಾಕಿ ಮಧ್ಯಮ ಉರಿಯಲ್ಲಿ ಕುದಿಯಲು ಇಡಿ.


ಸಕ್ಕರೆ ಸಂಪೂರ್ಣವಾಗಿ ಕರಗಿ ಒಂದೆಡೆ ಪಾಕ ಬಂದ ತಕ್ಷಣ, ಹುರಿದ ರವೆ ಕೊಬ್ಬರಿ ಮಿಶ್ರಣ, ಗೋಡಂಬಿ ಬಾದಾಮಿ ಹಾಕಿ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿ ತಟ್ಟೆ ಮುಚ್ಚಿ, ಕೈಯಲ್ಲಿ ಮುಟ್ಟುವಷ್ಟು ಬಿಸಿಯಿರುವಾಗಲೇ ನಿಮಗೆ ಬೇಕಾದ ಅಳತೆಯ ಉಂಡೆಗಳನ್ನು ಮಾಡಿದರೆ ಬಾಯಲ್ಲಿಟ್ಟರೆ ಕರುಗುವಷ್ಟು ಮೃದುವಾದ ರವೆ ಉಂಡೆ ಸವಿಯಲು ಸಿದ್ಧ!

ಧನ್ಯವಾದಗಳು ![]()
![]()
![]()
