SANKRANTHI BISCUIT ಸಂಕ್ರಾಂತಿ ಬಿಸ್ಕತ್
ಸಂಕ್ರಾಂತಿ ಹಬ್ಬದ ಸಮಯದಲ್ಲಿ ಎಲ್ಲರ ಮನೆಯಲ್ಲಿ ಎಳ್ಳು ಬೆಲ್ಲ ಬೀರುವ ಸಂಭ್ರಮ ಮುಗಿದ ಮೇಲೆ ಉಳಿದ ಎಳ್ಳಿನಿಂದ ಏನು ಮಾಡಬಹುದು ಎಂಬ ಯೋಚನೆಗೆ ಇಲ್ಲಿದೆ ಉತ್ತರ! ಸುಲಭವಾಗಿ, ಆರೋಗ್ಯಕರವಾಗಿ ಮಾಡುವ ರೆಸಿಪಿ ಇದು.
ಒಂದು ಕಪ್ ಸಂಕ್ರಾಂತಿಯ ಎಳ್ಳು ಆದಷ್ಟೂ ನುಣ್ಣಗೆ ಪುಡಿ ಮಾಡಿಡಿ.


ಎಳ್ಳು, ಬೆಲ್ಲ, ಕಡಲೇ ಬೀಜ, ಹುರಿಗಡಲೆ, ಕೊಬ್ಬರಿ ಎಲ್ಲಾ ಸೇರಿಸಿ ಪುಡಿ ಮಾಡಿದ ನಂತರ ಅಳತೆ ಮಾಡಿ.

ಒಂದು ಕಪ್ ಗೋಧಿ ಹಿಟ್ಟು, ಎಳ್ಳಿನ ಪುಡಿ, ಎರಡು ಚಮಚ ತುಪ್ಪ, ಚಿಟಿಕೆ ಏಲಕ್ಕಿ ಪುಡಿ,ಚಿಟಿಕೆ ಸೋಡಾ ಅರ್ಧ ಕಪ್ ಬೆಲ್ಲದ ಪುಡಿ ಅಥವಾ ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಕಲೆಸಿ, ನಂತರ ಸ್ವಲ್ಪ ಸ್ವಲ್ಪವೇ ಹಾಲು ಸೇರಿಸುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿ ಹತ್ತು ನಿಮಿಷ ಮುಚ್ಚಿಡಿ.

ಸಿಹಿ ನಿಮ್ಮ ಅಭಿರುಚಿಗೆ ತಕ್ಕಷ್ಟು ಹಾಕಬಹುದು.ಕುಕರ್ ನಲ್ಲಿ ತಳಕ್ಕೆ ಉಪ್ಪಿನ ಪುಡಿ ಹರಡಿ ಮೇಲೆ ಒಂದು ವೈರ್ ಮೆಷ್ ಇಟ್ಟು, ಮುಚ್ಚಳದ ಗ್ಯಾಸ್ಕೆಟ್, ವೇಟ್ ತೆಗೆದು ಕಡಿಮೆ ಉರಿಯಲ್ಲಿ ಹತ್ತು ನಿಮಿಷ ಪ್ರಿ ಹೀಟ್ ಮಾಡಿ.



ನಂತರ ಇಡ್ಲಿ ತಟ್ಟೆಗೆ ತುಪ್ಪ ಸವರಿ, ಕಲೆಸಿದ ಮಿಶ್ರಣದಿಂದ ಪುಟ್ಟ ಪುಟ್ಟ ಉಂಡೆ ಮಾಡಿ , ತಟ್ಟಿ ಮೇಲೆ ಗೋಡಂಬಿಯ ತುಂಡುಗಳನ್ನು ಹಾಕಿ ಸ್ವಲ್ಪ ಒತ್ತಿ, ಕುಕ್ಕರಿನಲ್ಲಿಟ್ಪು ಮುಚ್ಚಿ ಹಾಕಿ ಕಡಿಮೆ ಉರಿಯಲ್ಲಿ 20 – 25 ನಿಮಿಷ ಬೇಯಿಸಿದರೆ ರುಚಿಯಾದ ಆರೋಗ್ಯಕರವಾದ ಸಂಕ್ರಾಂತಿ ಬಿಸ್ಕತ್ ಸವಿಯಲು ಸಿದ್ಧ!
ನಾನು ಕುಕ್ಕರಿನಲ್ಲಿ ಮಾಡಿರೋದು. ಓವನ್ ನಲ್ಲಿ ಇನ್ನೂ ಚೆನ್ನಾಗಿ ಬರಬಹುದು ಅನ್ನಿಸುತ್ತದೆ.

ಧನ್ಯವಾದಗಳು ![]()
![]()
![]()
