Showing 4 Result(s)
ಸಿಹಿ ತಿನಿಸುಗಳು

PEANUT KATLI ಪೀನಟ್ ಕಟ್ಲಿ

PEANUT KATLI ಪೀನಟ್ ಕಟ್ಲಿ ಬಡವರ ಬಾದಾಮಿ ಕಡಲೆ ಬೀಜದ ರುಚಿಯಾದ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ:- ಒಂದು ಅಳತೆ ಕಡಲೆ ಬೀಜದ ಮೇಲಿನ ಸಿಪ್ಪೆ ಮಾತ್ರ ಹೋಗುವಷ್ಟು ಮಾತ್ರ ಹುರಿದು ಸಿಪ್ಪೆ ಬೇರೆ ಮಾಡಿಡಿ. Mixie jar ನಲ್ಲಿ ಹಾಕಿ Pulse mode ನಲ್ಲಿ ಪುಡಿ ಮಾಡಿಡಿ . ಒಟ್ಟಿಗೆ ಪುಡಿ ಮಾಡದೆ ಮಧ್ಯೆ ಮಧ್ಯೆ ಗ್ಯಾಪ್ ಕೊಟ್ಟು ಪುಡಿ ಮಾಡಿ. ಏಲಕ್ಕಿ ಎರಡು ಪುಡಿ ಮಾಡಿಡಿ. ದಪ್ಪ ತಳದ ಬಾಣಲೆಯಲ್ಲಿ ಮುಕ್ಕಾಲು ಅಳತೆ ಸಕ್ಕರೆಗೆ …

ಸೂಪ್ ಇತ್ಯಾದಿ

TOMATO SOUP ಟೋಮೆಟೋ ಸೂಪ್

TOMATO SOUP ಟೋಮೆಟೋ ಸೂಪ್ ಚುಮು ಚುಮು ಚಳಿಗೆ ಬಿಸಿ ಬಿಸಿ ಸೂಪ್ ಇದ್ದರೆ ಎಷ್ಟು ಚೆನ್ನ ಅಲ್ಲವೇ? ಅದರಲ್ಲೂ ಟೋಮೆಟೋ ಸೂಪ್ ಎಲ್ಲರ ಫೇವರೈಟ್! ಮಾಡುವುದು ಸುಲಭ ಕೂಡ ! ರುಬ್ಬುವ ಗೋಜು ಕೂಡ ಇಲ್ಲ! ಮಾಡುವ ವಿಧಾನ:- 4 ಟೋಮೆಟೋ ಸಣ್ಣಗೆ ಹೆಚ್ಚಿಡಿ. ಒಂದು ಇಂಚು ಶುಂಠಿ, ನಾಲ್ಕು ಎಸಳು ಬೆಳ್ಳುಳ್ಳಿ ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ ಒಂದು ಚಮಚ ಬೆಣ್ಣೆ/ ಎಣ್ಣೆ ಹಾಕಿ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಟೋಮೆಟೋ ಪೂರ್ತಿಯಾಗಿ ಮೆತ್ತಗೆ …

ಸಿಹಿ ತಿನಿಸುಗಳು

KAMARKUT / KALKONA ಕಮರ್ ಕಟ್ / ಕಲ್ಕೋನ

KAMARKUT / KALKONA ಕಮರ್ ಕಟ್ / ಕಲ್ಕೋನ ಬೆಲ್ಲ ಮತ್ತು ಕಾಯಿತುರಿಯ ಸವಿಯಾದ ರೆಸಿಪಿ. ಇದು ನಮ್ಮ ಅತ್ತೆಯ ತಾಯಿ ಅಂದರೆ ನನ್ನ ಪತಿಯ ಅಜ್ಜಿ ಮಾಡುತ್ತಿದ್ದ ಸಿಹಿ ರೆಸಿಪಿ! ಮಾಡುವ ವಿಧಾನ :- ಒಂದು ಅಳತೆ ಬೆಲ್ಲ ಪುಡಿ ಮಾಡಿಡಿ. ಒಂದು ಅಳತೆ ಕಾಯಿ ತುರಿದಿಡಿ. ಎರಡು ಏಲಕ್ಕಿ ಬೇಕಾದರೆ ಪುಡಿ ಮಾಡಿಡಿ. ದಪ್ಪ ತಳದ ಬಾಣಲೆಯಲ್ಲಿ ಬೆಲ್ಲದ ಪುಡಿ ಹಾಕಿ ಅದು ಮುಳುಗುವಷ್ಟು ನೀರು ಹಾಕಿ ಕಡಿಮೆ ಉರಿಯಲ್ಲಿ ಕಲೆಸುತ್ತಿರಿ. ಬೆಲ್ಲದ ಪಾಕ …

ಸಿಹಿ ತಿನಿಸುಗಳು

KOBBARI MITAYI ಕೊಬ್ಬರಿ ಮಿಠಾಯಿ

KOBBARI MITAYI ಕೊಬ್ಬರಿ ಮಿಠಾಯಿ ತೆಂಗಿನ ಕಾಯಿಯಿಂದ ಮಾಡಬಹುದಾ ರುಚಿಯಾದ ರೆಸಿಪಿ ಇಲ್ಲಿದೆ! ಇದು ನಮ್ಮ ಅತ್ತೆ ಮಾಡುತ್ತಿದ್ದ ವಿಧಾನ :- ತೆಂಗಿನ ಕಾಯಿಯ ಹಿಂದೆ ಇರುವ ಕಪ್ಪು ಭಾಗವನ್ನು Scraper ಅಥವಾ ಚಾಕುವಿನಿಂದ ತೆಗೆದು Mixie jar ನಲ್ಲಿ Pulse mode ನಲ್ಲಿ ಎರಡು ಅಳತೆ ಪುಡಿ ಮಾಡಿಡಿ. ಅಥವಾ ತೆಂಗಿನ ಕಾಯಿ ಹೋಳನ್ನು ಎಚ್ಚರಿಕೆಯಿಂದ ತಿರುಗಿಸುತ್ತಾ ಬಿಳಿ ಭಾಗ ಮಾತ್ರ ತುರಿಯಬಹುದು. ಆಯ್ಕೆ ನಿಮ್ಮದು! ದಪ್ಪ ತಳದ ಬಾಣಲೆಯಲ್ಲಿ ಎರಡು ಅಳತೆ ಕಾಯಿ ತುರಿ, …