Showing 71 Result(s)
Kannada ಉಪಹಾರ

AVALAKKI PONGAL ಅವಲಕ್ಕಿ ಪೊಂಗಲ್

ಈಗ ನಿಮಗೆಲ್ಲಾ ಗೊತ್ತಿರುವ ಹಾಗೆ ಧನುರ್ಮಾಸ! ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ, ಪೊಂಗಲ್ ನೈವೇದ್ಯ! ಆರೋಗ್ಯಕರವಾದ, ರುಚಿಕರವಾದ ಪೊಂಗಲ್ ಎಲ್ಲರಿಗೂ ಗೊತ್ತಿರುವ ಹಾಗೆ ಅಕ್ಕಿ ಮತ್ತು ಹೆಸರು ಬೇಳೆಯಿಂದ ಮಾಡುವುದು. ಅಕ್ಕಿಯ ಬದಲು ಅವಲಕ್ಕಿಯಿಂದ ರುಚಿಯಾದ ಪೊಂಗಲ್ ಮಾಡುವ ವಿಧಾನ ಇಲ್ಲಿದೆ! ಅವಲಕ್ಕಿ ಪೊಂಗಲ್ ಮಾಡುವ ವಿಧಾನ:- 1/2 ಅಳತೆ ಹೆಸರು ಬೇಳೆಯನ್ನು ಸ್ವಲ್ಪ ಹುರಿದು, 1 ಅಳತೆ ಬಿಡಿಸಿದ ಅವರೆ ಕಾಳಿನ ಜೊತೆಗೆ 3 ಅಳತೆ ನೀರು ಹಾಕಿ ಮೂರು ವಿಷಲ್ ಕೂಗಿಸಿಡಿ. 4 ಚಮಚ ಕಾಯಿ …

Kannada Oota ಸಾಂಬಾರು ಮತ್ತು ಪಲ್ಯಗಳು

EERULLI GOJJU ಈರುಳ್ಳಿ ಗೊಜ್ಜು

ಪ್ರತಿ ದಿನ ಬೇಳೆ ಸಾರು, ಸಾಂಬಾರ್ ತಿಂದು ಬೇಸರವಾಗಿದ್ದರೆ ಹೀಗೆ ಮಾಡಿ ನೋಡಿ! ತುಂಬಾ ಜನರಿಗೆ ಗೊತ್ತಿರಬಹುದು! ಹೊಸಬರಿಗೆ ಗೊತ್ತಾಗಲಿ ಅಂತ ಈ ರೆಸಿಪಿ ಹಾಕಿದ್ದೇನೆ! 4 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಚಮಚ ಹುಣಿಸೆ ರಸ ತೆಗೆದಿಡಿ. ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಚಿಟಿಕೆ ಅರಿಷಿಣ, ಚಿಟಿಕೆ ಇಂಗು ಹಾಕಿ ಬಾಡಿಸಿ, ಹೆಚ್ಚಿದ ಈರುಳ್ಳಿ, ಉಪ್ಪುಹಾಕಿ ಸ್ವಲ್ಪ ಹೊತ್ತು ಬೇಯಿಸಬೇಕು. ನಂತರ ಹುಣಿಸೆ ರಸ, 2 …

Kannada Tindi Tinisu ಖಾರ ತಿನಿಸುಗಳು

CAPSICUM BAJJI ಕ್ಯಾಪ್ಸಿಕಮ್ ಬಜ್ಜಿ

ಸಂಜೆ ವೇಳೆಗೆ ಕಾಫಿ, ಟೀ ಜೊತೆಗೆ ಖಾರಾ ಖಾರಾ ಕ್ಯಾಪ್ಸಿಕಮ್ ಬಜ್ಜಿ ಇದ್ದರೆ ಎಷ್ಟು ಚೆನ್ನ ಅಲ್ಲವೇ!? ಚಿಕ್ಕ ಚಿಕ್ಕ ಕ್ಯಾಪ್ಸಿಕಮ್ ಗಳನ್ನು ಆಯ್ದುಕೊಳ್ಳಿ! ಸುತ್ತಲೂ ತಿರುಗಿಸಿ ಎಚ್ಚರಿಕೆಯಿಂದ ಗಮನಿಸಿ. ತೂತು ಆಗಿದ್ದರೆ ಹಾಕಬೇಡಿ. 1 ಲೋಟ ಕಡಲೇ ಹಿಟ್ಟು, 1 ಚಮಚ ಅಕ್ಕಿ ಹಿಟ್ಟು, 1 ಚಮಚ ಖಾರದ ಪುಡಿ, ಸ್ವಲ್ಪ ಓಂ ಕಾಳು, ಜೀರಿಗೆ, ಚಿಟಿಕೆ ಇಂಗು, ಉಪ್ಪು, 1 ಚಮಚ ಕಾದ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ …

Kannada Oota

RUMALI ROTI & KADAK MASALA ROTTI ರುಮಾಲಿ ರೊಟ್ಟಿ & ಕಡಕ್ ಮಸಾಲ ರೊಟ್ಟಿ

ರುಮಾಲಿ ರೋಟಿ ಬಹು ಜನಪ್ರಿಯ ಆಹಾರ! ಹಿಂದಿಯಲ್ಲಿ ರುಮಾಲ್ ಅಂದರೆ ಕರ್ಚೀಫ್ ಎಂದು ಅರ್ಥ! ಅಂದರೆ ಕರ್ಚೀಫ್ ಹಾಗೆ ತೆಳ್ಳಗೆ, ಅಗಲವಾಗಿರುವ ರೋಟಿ ಎಂದು ಅರ್ಥ! ಮಾಡುವ ವಿಧಾನ:- 1 ಕಪ್ ಮೈದಾ, ಉಪ್ಪು, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ. ನೀರು ಸ್ವಲ್ಪ ಸ್ವಲ್ಪವೇ ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿ ಸ್ವಲ್ಪ ಎಣ್ಣೆ ಸವರಿ 15 ನಿಮಿಷ ಮುಚ್ಚಿಡಿ.      ಮತ್ತೊಂದು ಬಾರಿ ಚೆನ್ನಾಗಿ ನಾದಿ, ಚಪಾತಿ ಹಿಟ್ಟಿನ ಉಂಡೆಗಿಂತ ಸ್ವಲ್ಪ …

Kannada Tindi Tinisu ಚಾಟ್ಸ್

MOLAKE KALUGALA PAV BHAJI ಮೊಳಕೆ ಕಾಳುಗಳ ಪಾವ್ ಭಾಜಿ

ಪಾವ್ ಭಾಜಿ ಎಲ್ಲರ ಪ್ರಿಯವಾದ ತಿಂಡಿ! ಮಕ್ಕಳಿಗಂತೂ ಬಹಳ ಪ್ರಿಯವಾದದ್ದು! ಸಾಧಾರಣವಾಗಿ ಭಾಜಿ ಎಲ್ಲರೂ ತರಕಾರಿಗಳನ್ನು ಹಾಕಿ ಮಾಡುತ್ತಾರೆ. ಮೊಳಕೆ ಕಾಳುಗಳನ್ನು ಹಾಕಿ ಮಾಡಿರುವದೇ ಈ ರೆಸಿಪಿಯ ವಿಶೇಷತೆ! ಮಾಡುವ ವಿಧಾನ:- ಭಾಜಿ ಮಾಡಲು:- 1/2 ಲೋಟ ಕಡಲೇ ಕಾಳು, 1/2 ಲೋಟ ಹೆಸರು ಕಾಳು ನೆನೆಸಿ ಸೋರಿ ಹಾಕಿ ಬಟ್ಟೆಯಲ್ಲಿ ಕಟ್ಟಿ ಮೊಳಕೆ ಬರಲು ಬಿಡಿ.    ಮರುದಿನ 1 ಆಲೂಗೆಡ್ಡೆ ಸಿಪ್ಪೆ ತೆಗೆದು ದೊಡ್ಡ ದೊಡ್ಡದಾಗಿ ಕತ್ತರಿಸಿ, ಮೊಳಕೆ ಕಾಳುಗಳು, ಒಂದು ಹಿಡಿ ಹಸಿ …

Kannada Oota ಸಾಂಬಾರು ಮತ್ತು ಪಲ್ಯಗಳು

TOMATO MORABBA ಟೋಮೇಟೋ ಮೊರಬ್ಬ

ಈಗ ಟೋಮೇಟೋ ಬೆಲೆ ತುಂಬಾ ಕಡಿಮೆ ಆಗಿದೆ! ಈಗ ಟೋಮೇಟೋ ಮೊರಬ್ಬ ಮಾಡಿಟ್ಟರೆ ಯಾವಾಗ ಬೇಕಾದರೂ ಉಪಯೋಗಿಸಬಹುದು. ಮಾಡುವ ವಿಧಾನ:- 2 ಕೇಜಿ ಟೋಮೇಟೋ ತೊಳೆದಿಡಿ.   ಬಾಣಲೆಯಲ್ಲಿ 4 ಲೀಟರ್ ನೀರು ಹಾಕಿ ಕುದಿಯಲು ಇಡಿ. ನೀರು ದೊಡ್ಡದಾಗಿ ಕುದಿ ಬರಲು ಪ್ರಾರಂಭವಾದಾಗ ಟೋಮೇಟೋಗಳನ್ನು ನೀರಿಗೆ ಹಾಕಿ. 2 ನಿಮಿಷದ ನಂತರ ಒಲೆಯಿಂದ ಇಳಿಸಿ, ತಟ್ಟೆ ಮುಚ್ಚಿ 15 ನಿಮಿಷ ಬಿಡಿ. ನಂತರ ಟೋಮೇಟೋ ಹೊರ ತೆಗೆದು ತಣ್ಣಗಾದ ನಂತರ ಟೋಮೇಟೋ ಸಿಪ್ಪೆ, ತೊಟ್ಟಿನ ಭಾಗ …

Kannada Tindi Tinisu ಖಾರ ತಿನಿಸುಗಳು

BENNE AVARE HUSALI ಬೆಣ್ಣೆ ಅವರೆ ಉಸಲಿ

ಅವರೆಯ ಇನ್ನೊಂದು ರುಚಿಯಾದ ರೆಸಿಪಿ! ಮಾಡುವ ವಿಧಾನ:- ಎಳೆಯದಾದ ಅವರೆ ಕಾಳು 1 ಪಾವು ತೊಳೆದು ನೀರು ಸೋರಿ ಹಾಕಿಡಿ. 1 ಟೇಬಲ್ ಚಮಚ ಬಿಳಿ ಎಳ್ಳು, 1 ಟೀ ಚಮಚ ಜೀರಿಗೆ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ. 4 ಚಮಚ ಕಾಯಿ ತುರಿದಿಡಿ. 4 ಹಸಿ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಹೆಚ್ಚಿಡಿ.    ಕುಕ್ಕರಿನಲ್ಲಿ 4 ಚಮಚ ಬೆಣ್ಣೆ ಹಾಕಿ , ಸಾಸಿವೆ, ಕರಿಬೇವು, ಅವರೆ ಕಾಳು, ಹೆಚ್ಚಿದ ಹಸಿ …

Kannada ಉಪಹಾರ

BELEGALA PADDU ಬೇಳೆಗಳ ಪಡ್ಡು

ಪಡ್ಡು ಬೆಳಿಗ್ಗೆ ತಿಂಡಿಗಳಲ್ಲಿ ಬಹಳ ಜನಪ್ರಿಯವಾದದ್ದು. ಬೇಳೆಗಳ ಪಡ್ಡು ಆರೋಗ್ಯಕರ ಮತ್ತು ರುಚಿಕರ! ಮಾಡುವ ವಿಧಾನ:- ದೋಸೆ ಅಕ್ಕಿ – 1/2 ಲೋಟ ತೊಗರಿ ಬೇಳೆ – 1/2 ಲೋಟ ಕಡಲೇ ಬೇಳೆ – 1/2 ಲೋಟ ಹೆಸರು ಬೇಳೆ – 1/2 ಲೋಟ ಉದ್ದಿನ ಬೇಳೆ – 1/2 ಲೋಟ ಗಟ್ಟಿ ಅವಲಕ್ಕಿ – 2 ಚಮಚ ಮೆಂತ್ಯ – 1/2 ಚಮಚ ಮೇಲಿನ ಸಾಮಗ್ರಿಗಳನ್ನು ತೊಳೆದು 2 ಗಂಟೆ ನೆನೆಸಿಡಿ. ಎರಡು ಹಸಿ ಮೆಣಸಿನಕಾಯಿ …

Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

BATHASU ಬತಾಸು

ನಾವು ಚಿಕ್ಕವರಿದ್ದಾಗ ಊರ ಜಾತ್ರೆಗಳಲ್ಲಿ, ರಥೋತ್ಸವಗಳಲ್ಲಿ ಬೀದಿ ಬದಿಯ ಅಂಗಡಿಗಳಲ್ಲಿ ರಾಶಿ ರಾಶಿಯಾಗಿ ಹಾಕಿ ಮಾರುತ್ತಿದ್ದ ತಿಂಡಿಗಳಲ್ಲಿ ಈ ಬತಾಸು ಕೂಡ ಒಂದು! ಅಪ್ಪ, ಅಮ್ಮನ ಕೈಹಿಡಿದು ಬೊಗಸೆ ತುಂಬಾ ಬತಾಸು ತಿಂದು ಖುಷಿ ಪಡುತ್ತಿದ್ದ ಕಾಲ ಎಷ್ಟು ಚೆನ್ನ! ನನ್ನ ಮಗಳ ಆಸೆಯ ಮೇರೆಗೆ ನಮ್ಮ ಪಕ್ಕದ ಮನೆಯ ನಮ್ಮ ಕುಟುಂಬದ ಆಪ್ತರಾದ ಶ್ರೀಮತಿ ಆಂಡಾಳು ಅವರಿಂದ ಕಲಿತು ನಾನು ಮೊದಲ ಬಾರಿ ಬತಾಸು ಮಾಡಿದ್ದೇನೆ! ತುಂಬಾ ಚೆನ್ನಾಗಿ ಬಂದಿದೆ! ಮಾಡುವ ವಿಧಾನ:- 2 ಚಮಚ …

Kannada Oota ಉಪಹಾರ

TOMATO BATH ಟೋಮೇಟೋ ಬಾತ್

ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ! ಎಲ್ಲರಿಗೂ ಇಷ್ಟವಾಗುವ ಆಹಾರ! ಒಬ್ಬೊಬ್ಬರದು ಒಂದೊಂದು ಶೈಲಿ! ಇದು ನಾನು ಮಾಡುವ ವಿಧಾನ! 5 ಟೋಮೇಟೋ, 1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. 1 ಚಿಕ್ಕ ಬಟ್ಟಲು ಬಟಾಣಿ ಬಿಡಿಸಿಡಿ. 1 ಚಿಕ್ಕ ಬೆಳ್ಳುಳ್ಳಿ, 1 ಇಂಚು 2, 4 ಹಸಿ ಮೆಣಸಿನಕಾಯಿ, 4 ಚಮಚ ಕಾಯಿ ತುರಿ, 1 ಚಮಚ ಪುದೀನಾ, 1 ಚಮಚ ಕೊತ್ತಂಬರಿ ಸೊಪ್ಪು ರುಬ್ಬಿಡಿ. 1 ಲೋಟ ಅಕ್ಕಿ ತೊಳೆದು ನೀರು ಸೋರಿ ಹಾಕಿಡಿ.    ಕುಕ್ಕರಿನಲ್ಲಿ …