MIX VEG CURRY & GARLIC NAAN ಮಿಕ್ಸ್ ವೆಜ್ ಕರ್ರಿ & ಗಾರ್ಲಿಕ್ ನಾನ್
ಉತ್ತರ ಭಾರತದ ಜನಪ್ರಿಯ ಆಹಾರ! ಎಲ್ಲರಿಗೂ ಇಷ್ಟವಾಗುವ ಆಹಾರ! ಮಿಕ್ಸ್ ವೆಜ್ ಕರ್ರಿ ಮಾಡುವ ವಿಧಾನ :- ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ತಲಾ 50 ಗ್ರಾಂ ನಷ್ಟು ತೊಳೆದು ಸಣ್ಣಗೆ ಹೆಚ್ಚಿ ಬೇಯಿಸಿಡಿ. ಬೀನ್ಸ್, ಗೋಭಿ, ಕ್ಯಾರೆಟ್, ಆಲೂಗೆಡ್ಡೆ, ಕ್ಯಾಪ್ಸಿಕಮ್, ಬಟಾಣಿ ಈ ತರಹದ ತರಕಾರಿಗಳನ್ನು ಹಾಕಬಹುದು! 1 ಟೇಬಲ್ ಚಮಚ ಗಸಗಸೆ, 1 ಟೇಬಲ್ ಚಮಚ ಧನಿಯಾ, 10 ರಿಂದ 12 ಗೋಡಂಬಿ ಸ್ವಲ್ಪ ಹುರಿದು ಬಿಸಿಯಾಗಿದ್ದಾಗಲೇ ನುಣ್ಣಗೆ ಪುಡಿ ಮಾಡಿಡಿ. 4 ಟೇಬಲ್ ಚಮಚ …