ಸಿಹಿ ತಿನಿಸುಗಳು

DHARWAD PEDA ( Instant ) ಧಾರವಾಡ ಪೇಡಾ ( ಇನ್ಸ್ಟೆಂಟ್ )

ಧಾರವಾಡ ಪೇಡಾ ಎಷ್ಟು ಜನಪ್ರಿಯ ಅಂತ ಎಲ್ಲರಿಗೂ ಗೊತ್ತು! ಅದನ್ನು ಮಾಡುವುದು ಹಾಲು ಬಿಸಿ ಮಾಡಿ ಹುಳಿ ಹಾಕಿ, ಪನ್ನೀರ್ ಮಾಡಿ.ಆದರೆ ಹೀಗೆ ಮಾಡಲು ಸ್ವಲ್ಪ ಸಮಯ ಬೇಕು! ಸಮಯ ಕಡಿಮೆ ಇದ್ದಾಗ ಫಟಾಫಟ್ಮಾಡಬಹುದಾದ ರೆಸಿಪಿ ಇದು! ರೆಡಿ ಮೇಡ್ ಪನ್ನೀರ್ ಹಾಕಿ ಮಾಡುವುದು!

Preparation Time :- 3 Minutes
Cooking Time :- 20 Minutes

ಬೇಕಾಗುವ ಪದಾರ್ಥಗಳು:-

ಪನ್ನೀರ್ : 100 ಗ್ರಾಂ
ಸಕ್ಕರೆ ಪುಡಿ : 6 ಟೇಬಲ್ ಸ್ಪೂನ್
ಹಾಲು : 4 ಟೇಬಲ್ ಚಮಚ
ತುಪ್ಪ : 2 ಟೇಬಲ್ ಚಮಚ
ಏಲಕ್ಕಿ ಪುಡಿ : 4

ಮಾಡುವ ವಿಧಾನ :-

ಪನ್ನೀರ್ ಅನ್ನು ತುರಿದಿಡಿ.

ಸಕ್ಕರೆ ಪುಡಿ ಮಾಡಿಡಿ.

ಬಾಣಲೆಯಲ್ಲಿ ಪನ್ನೀರ್ ತುರಿ ಹಾಕಿ ಮಧ್ಯಮ ಉರಿಯಲ್ಲಿ ಹುರಿಯುತ್ತಿರಿ. ಆಗಾಗ ಸ್ವಲ್ಪ ತುಪ್ಪ, ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಕೈ ಬಿಡದೆ ಕಲೆಸುತ್ತಿರಿ.

  

ಪನ್ನೀರ್ ಚಿನ್ನದ ಕಂದು ಬಣ್ಣ ( Golden brown ) ಬಂದಾಗ ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಕಲೆಸಿ.

ಸ್ವಲ್ಪಬೆಚ್ಚಗಾದ ಮೇಲೆ Mixie jar ಹಾಕಿ ಸಾಧ್ಯವಾದಷ್ಟೂ ನುಣ್ಣಗೆ ಪುಡಿ ಮಾಡಿ.

ಈ ಪುಡಿಯನ್ನು ಮತ್ತೆ ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಕಲೆಸುತ್ತಾ ಇರಿ. ಉಳಿದ ತುಪ್ಪ ಮತ್ತು ಹಾಲು ಹಾಕಿ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿ.

  

ಸ್ವಲ್ಪ ಬೆಚ್ಚಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಉಂಡೆಗಳನ್ನು ಮಾಡಿ ಸಕ್ಕರೆ ಪುಡಿಯಲ್ಲಿ ಹೊರಳಿಸಿ ಸವಿಯಿರಿ!

ಇದು ಹಾಲಿನಿಂದ ಪದಾರ್ಥವಾಗಿರುವುದರಿಂದ ಎರಡು ಮೂರು ದಿನಗಳಲ್ಲಿ ತಿನ್ನಬೇಕು!

ನಿಮಗೆ ಸಮಯವಿದ್ದರೆ 1 ಲೀಟರ್ ಗಟ್ಟಿಯಾದ ಹಾಲು ಕಾಯಿಸಿ, ಹಾಲು ಒಡೆದು ಪನ್ನೀರ್ ಮಾಡಿ ಇದೇ ಅಳತೆ, ಇದೇ ರೀತಿಯಲ್ಲಿ ಪೇಡಾ ಮಾಡಬಹುದು!

ಧನ್ಯವಾದಗಳು

Leave a Reply

Your email address will not be published.