MILK PEDA ಮಿಲ್ಕ್ ಪೇಡಾ
ರುಚಿಯಾದ, ಸುಲಭವಾಗಿ ಮಾಡಬಹುದಾದ ಮಿಲ್ಕ್ ಪೇಡಾ ರೆಸಿಪಿ ಇಲ್ಲಿದೆ. ಸಮಯ ಕಡಿಮೆ ಇರುವಾಗ ಕೇವಲ ಹತ್ತು ನಿಮಿಷದಲ್ಲಿ ಮಾಡಬಹುದು.
ಮಾಡುವ ವಿಧಾನ :-
1 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕೇಸರಿ ದಳ ನೆನೆಸಿಡಿ.


ಒಂದು ದಪ್ಪ ತಳದ ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ಒಂದು ಅಳತೆ ಕಂಡೆನ್ಸೆಂಡ್ ಮಿಲ್ಕ್ ಹಾಕಿ, ಕಡಿಮೆ ಉರಿಯಲ್ಲಿ ಸ್ವಲ್ಪ ಗಟ್ಟಿಯಾದ ಮೇಲೆ ಒಂದು ಅಳತೆ ಮಿಲ್ಕ್ ಪೌಡರ್ ಹಾಕಿ, ಕೇಸರಿ ಬೆರೆಸಿ ದ ಹಾಲು, ಚಿಟಿಕೆ ಏಲಕ್ಕಿ ಪುಡಿ, ಒಂದು ಚಮಚ ತುಪ್ಪ ಹಾಕಿ ಚೆನ್ನಾಗಿ ಕಲೆಸಿ.

ಮಿಶ್ರಣ ಗಟ್ಟಿ ಆಗಿ ಒಂದು ಉಂಡೆಯಂತೆ ಆದಾಗ ಒಲೆಯಿಂದ ಇಳಿಸಿ. ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಅಳತೆಯ ಉಂಡೆ ಮಾಡಿ ಸವಿಯಿರಿ.

ಧನ್ಯವಾದಗಳು 🙏🙏🙏
