Showing 14 Result(s)
ತಂಪು ಪಾನೀಯಗಳು

CARROT N BADAM MILKSHAKE

CARROT N BADAM MILKSHAKE ಕ್ಯಾರೆಟ್ & ಬಾದಾಮ್ ಮಿಲ್ಕ್ ಶೇಕ್ ಕ್ಯಾರೆಟ್ ಮತ್ತು ಬಾದಾಮಿ ಎರಡೂ ಆರೋಗ್ಯಕ್ಕೆ ಒಳ್ಳೆಯದು. ಈ ಎರಡು ಆರೋಗ್ಯಕರ ಸಾಮಗ್ರಿಗಳನ್ನು ಹಾಕಿ ಮಾಡುವ ಮಿಲ್ಕ್ ಶೇಕ್ ಮತ್ತೂ ಆರೋಗ್ಯಕರ, ರುಚಿ ಕರ! ಮಾಡುವ ವಿಧಾನ:- ಒಂದು ಕ್ಯಾರೆಟ್ ಬೇಯಿಸಿ, ಸಿಪ್ಪೆ ತೆಗೆದ ಇಪ್ಪತ್ತು ಬಾದಾಮಿ ಜೊತೆಗೆ ಸ್ವಲ್ಪ ಹಾಲು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇನ್ನೂ ಸ್ವಲ್ಪ ತಣ್ಣಗಿರುವ ಹಾಲು, ಚಿಕ್ಕ ಚಮಚ ಸಕ್ಕರೆ, ಒಂದು ಚಮಚ ಐಸ್ ಕ್ರೀಮ್ ಹಾಕಿ …

ತಂಪು ಪಾನೀಯಗಳು

RAW MANGO JUICE ರಾ ಮ್ಯಾಂಗೋ ಜ್ಯೂಸ್

RAW MANGO JUICE ರಾ ಮ್ಯಾಂಗೋ ಜ್ಯೂಸ್ ಮಾವಿನ ಕಾಯಿ ಸೀಸನ್ ನಲ್ಲಿ ಮಾಡಬಹುದಾದ ರುಚಿಯಾದ ಜ್ಯೂಸ್ ವಿಧಾನ ಇಲ್ಲಿದೆ. ಮಾಡುವ ವಿಧಾನ :- ಸ್ವಲ್ಪ ಮಾಗಿದ ತೋತಾಪುರಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಶೋಧಿಸಿಡಿ. ಅರ್ಧ ಚಮಚ ಕರಿ ಮೆಣಸು ಪುಡಿ ಮಾಡಿಡಿ. ನಾಲ್ಕು ಏಲಕ್ಕಿ ಪುಡಿ ಮಾಡಿಡಿ. ಬಟ್ಟಲಿನಲ್ಲಿ ಮಾವಿನ ಕಾಯಿಯ ರಸ, ಮೆಣಸಿನ ಪುಡಿ, ಏಲಕ್ಕಿ ಪುಡಿ, ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಅಥವಾ …

ತಂಪು ಪಾನೀಯಗಳು

AMLA JUICE ಆಮ್ಲಾ ಜ್ಯೂಸ್

ಆಮ್ಲಾ ಅಂದರೆ ಬೆಟ್ಟದ ನೆಲ್ಲಿಕಾಯಿ ಆರೋಗ್ಯಕ್ಕೆ ಒಳ್ಳೆಯದು! ವಿಟಮಿನ್ ‘ಸಿ’ ಬೆಟ್ಟದಷ್ಟು ತುಂಬಿದೆ. ಇದರ ರುಚಿಯಾದ ಜ್ಯೂಸ್ ಮಾಡುವ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 2 ಅಥವಾ 3 ಬೆಟ್ಟದ ನೆಲ್ಲಿಕಾಯಿ ತೊಳೆದು ಸಣ್ಣಗೆ ಹೆಚ್ಚಿ ಬೀಜ ತೆಗೆದು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಶೋಧಿಸಿ. ಚಿಟಿಕೆ ಉಪ್ಪು, 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲೆಸಿ ತಕ್ಷಣ ಕುಡಿಯಿರಿ.   ಅಥವಾ ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಬೇಕಾದರೂ ಹಾಕಿಕೊಳ್ಳಬಹುದು. ಧನ್ಯವಾದಗಳು

ಉಪಹಾರ ತಂಪು ಪಾನೀಯಗಳು

RAGI AMBALI ರಾಗಿ ಅಂಬಲಿ

“ರಾಗಿ ತಿಂದವ ನಿರೋಗಿ” ಅನ್ನುವ ಮಾತಿನಂತೆ ರಾಗಿ ಆರೋಗ್ಯಕರವಾದ ಧಾನ್ಯ! ಪುಟ್ಟ ಕಾಳಿನಲ್ಲಿ ಬೆಟ್ಟದಷ್ಟು ಒಳ್ಳೆಯ ಅಂಶಗಳನ್ನು ತುಂಬಿಕೊಂಡಿದೆ. ಈ ಅಂಬಲಿ ಮಾಡುವುದು ಸುಲಭ! ಆರೋಗ್ಯಕರ!! ದೇಹಕ್ಕೆ ತಂಪು!!! ಬೇಕಾಗುವ ಸಾಮಗ್ರಿಗಳು :- ರಾಗಿ ಹಿಟ್ಟು – 1/4 ಲೋಟಕ್ಕಿಂತ ಸ್ವಲ್ಪ ಕಡಿಮೆ ನೀರು – 1 ಲೋಟ ಮಜ್ಜಿಗೆ – 1/2 ಲೋಟ ಉಪ್ಪು – ರುಚಿಗೆ ತಕ್ಕಷ್ಟು ಕೊತ್ತಂಬರಿ ಸೊಪ್ಪು – ಸ್ವಲ್ಪ ಸಣ್ಣಗೆ ಹೆಚ್ಚಿದ ಈರುಳ್ಳಿ – 1 ಚಮಚ ( ಬೇಕಾದರೆ …

ತಂಪು ಪಾನೀಯಗಳು

BOODU KUMBALA JUICE (White gourd juice) ಬೂದು ಕುಂಬಳದ ಜ್ಯೂಸ್

ಬೂದು ಕುಂಬಳಕಾಯಿ ತನ್ನ ಗಾತ್ರಕ್ಕೆ ತಕ್ಕಂತೆ ತನ್ನಲ್ಲಿ ಆರೋಗ್ಯಕರವಾದ ಅಂಶಗಳನ್ನು ತುಂಬಿಕೊಂಡಿದೆ. ಪ್ರತಿದಿನ ಈ ತರಕಾರಿಯನ್ನು ತಿನ್ನುತ್ತಾ ಬಂದರೆ ಮಕ್ಕಳಿಗೆ ಙಾಪಕ ಶಕ್ತಿ ಹೆಚ್ಚಾಗುತ್ತದೆ! ಬೊಜ್ಜು ದೇಹ ಕರಗುತ್ತದೆ. ಸಾಧಾರಣವಾಗಿ SSY YOGA ಕ್ಲಾಸ್ ಗಳಿಗೆ ಹೋದವರಿಗೆ ಇದರ ಮಹತ್ವ ಗೊತ್ತಿರುತ್ತದೆ. ಈ ಕಾಯಿಯನ್ನು ಹಸಿಯಾಗಿ ಬಳಸಿದರೆ ಆರೋಗ್ಯ ಮತ್ತಷ್ಟು ವೃದ್ಧಿಸುತ್ತದೆ. ಇದರ ಜ್ಯೂಸ್ ಬೆಳಿಗ್ಗೆ ಎದ್ದೊಡನೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಕ್ರಮೇಣ ದೇಹದ ತೂಕ ಕಡಿಮೆಯಾಗುತ್ತದೆ. ಇದರ ಜ್ಯೂಸ್ ಕುಡಿದ ಎರಡು ಗಂಟೆ ಕಾಲ ಬೇರೆ …

ತಂಪು ಪಾನೀಯಗಳು

MASALA BUTTERMILK ಮಸಾಲ ಬಟರ್ ಮಿಲ್ಕ್

ಬೇಸಿಗೆಯಲ್ಲಿ ಎಷ್ಟು ಮಜ್ಜಿಗೆ ಕುಡಿದರೂ ಸಾಲದು! ಆರೋಗ್ಯಕರವಾದ ಮಜ್ಜಿಗೆಯನ್ನು ರುಚಿಕರವಾಗಿ ಮಾಡುವ ಸುಲಭವಾದ ರೆಸಿಪಿ ಇಲ್ಲಿದೆ! ಮಸಾಲ ಬಟ್ಟರ್ ಮಿಲ್ಕ್ ಮಾಡುವ ವಿಧಾನ :- 1 ಟೇಬಲ್ ಚಮಚ ತೋತಾಪುರಿ ಮಾವಿನ ಕಾಯಿ ತುರಿದಿಡಿ. 1 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ, ಪುದೀನಾ ಸಣ್ಣಗೆ ಹೆಚ್ಚಿಡಿ. ಒಂದು ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನುಣ್ಣಗೆ ರುಬ್ಬಿ. ನಂತರ 1/2 ಲೀಟರ್ ಗಟ್ಟಿಯಾದ …

ತಂಪು ಪಾನೀಯಗಳು

BADAM MILK ಬಾದಾಮ್ ಮಿಲ್ಕ್

ಬಾದಾಮಿ ತನ್ನಲ್ಲಿ ಅಪಾರವಾದ ಆರೋಗ್ಯಕರವಾದ ಅಂಶಗಳನ್ನು ತುಂಬಿಕೊಂಡಿದೆ. ಮಕ್ಕಳಿಗೆ ಬಾದಾಮಿ ತಿನ್ನಲು ಕೊಟ್ಟರೆ ಅವರು ತಿನ್ನುವುದಿಲ್ಲ! ಹೀಗೆ ಮಾಡಿ ನೋಡಿ! ಬಾದಾಮಿ ತಿಂದ ಹಾಗಾಯಿತು! ಹಾಲೂ ಕುಡಿದ ಹಾಗಾಯಿತು! ಬೇಸಿಗೆಯಲ್ಲಿ ತಂಪಾದ ಪಾನೀಯ! ಮಾಡುವ ವಿಧಾನ:- 20 ರಿಂದ 25 ಬಾದಾಮಿ ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿಡಿ.    2 ಚಮಚ ಬಿಸಿ ಹಾಲಿನಲ್ಲಿ ಸ್ವಲ್ಪ ಕೇಸರಿ ದಳಗಳನ್ನು ನೆನೆಸಿಡಿ. ರುಬ್ಬಿದ ಮಿಶ್ರಣಕ್ಕೆ ಕೇಸರಿ ನೆನೆಸಿದ ಹಾಲು, ಚಿಟಿಕೆ ಏಲಕ್ಕಿ ಪುಡಿ, 1/2 ಲೀಟರ್ …

Kannada ತಂಪು ಪಾನೀಯಗಳು

WATERMELON MILK SHAKE ವಾಟರ್ ಮೆಲನ್ ಮಿಲ್ಕ್ ಷೇಕ್

ಬೇಸಿಗೆಯ ದಿನಗಳಲ್ಲಿ ಕುಡಿಯಲು ತುಂಬಾ ಚೆನ್ನಾಗಿರುವ ಪಾನೀಯಗಳಲ್ಲಿ ಒಂದು! ಮಾಡುವುದು ಸುಲಭ! ರುಚಿಕರ! ಆರೋಗ್ಯಕರ! ಮಾಡುವ ವಿಧಾನ:- ನಿಮಗೆ ಬೇಕಾಗುವಷ್ಟು ಕಲ್ಲಂಗಡಿ ಹಣ್ಣು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಡ್ರೈ ಫ್ರೂಟ್ಸ್ ಹೆಚ್ಚಿಡಿ.    ಮೊದಲು ಡ್ರೈ ಫ್ರೂಟ್ಸ್ Mixie jar ನಲ್ಲಿ ಹಾಕಿ ಪುಡಿ ಮಾಡಿ. ನಂತರ ಕಲ್ಲಂಗಡಿ ಹಣ್ಣಿನ ತುಂಡುಗಳು, 1 ಲೋಟ ತಣ್ಣನೆಯ ಹಾಲು, 2 ಚಮಚ ಜೇನುತುಪ್ಪ ಸೇರಿಸಿ ಇನ್ನೊಂದು ಬಾರಿ ತಿರುವಿದರೆ ರುಚಿಯಾದ ವಾಟರ್ ಮೆಲನ್ ಮಿಲ್ಕ್ ಷೇಕ್ …

Kannada ತಂಪು ಪಾನೀಯಗಳು

OREO MILK SHAKE ಓರಿಯೋ ಮಿಲ್ಕ್ ಷೇಕ್

ಬೇಸಿಗೆಯ ದಿನಗಳಲ್ಲಿ ಕುಡಿಯಲು, ರುಚಿಯಾದ, ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ ಬಹಳ ಸುಲಭ:-    2 ಪ್ಯಾಕೇಟ್ ಓರಿಯೋ ಬಿಸ್ಕತ್, 1 ಲೋಟ ತಣ್ಣನೆ ಹಾಲು, 2 ಕಪ್ ಐಸ್ ಕ್ರೀಮ್, 2 ಚಮಚ ಚಾಕೊಲೇಟ್ ಸಾಸ್ ಹಾಕಿ Mixie jar ನಲ್ಲಿ ಹಾಕಿ ಮೂರ್ನಾಲ್ಕು ನಿಮಿಷ ತಿರುಗಿಸಿದರೆ ಓರಿಯೋ ಮಿಲ್ಕ್ ಷೇಕ್ ಸಿದ್ಧ!    ಐಸ್ ಕ್ರೀಮ್, ಚಾಕೊಲೇಟ್ ಸಾಸ್, ಬಿಸ್ಕತ್ ನಿಮ್ಮ ರುಚಿಗೆ ತಕ್ಕಷ್ಟು ಹಾಕಬಹುದು! ಧನ್ಯವಾದಗಳು

Kannada ತಂಪು ಪಾನೀಯಗಳು

WATERMELON SMOOTHIE ವಾಟರ್ ಮೆಲನ್ ಸ್ಮೂದಿ

ಬೇಸಿಗೆಗೆ ಒಂದು ತಂಪಾದ ಪಾನೀಯ! ವಾಟರ್ ಮೆಲನ್ ಸ್ಮೂದಿ! ಬೇಸಿಗೆಗೆ ತಂಪು ಮಾಡುವ ಕಲ್ಲಂಗಡಿ ಹಣ್ಣಿನ ರುಚಿಯಾದ ಸ್ಮೂದಿಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1/2 ಕಲ್ಲಂಗಡಿ ಹಣ್ಣು ಸಿಪ್ಪೆ, ಬೀಜ ತೆಗೆದು ಸಣ್ಣಗೆ ಹೆಚ್ಚಿಡಿ. 1/2 ಇಂಚು ಶುಂಠಿ ಸಿಪ್ಪೆ ತೆಗೆದು ತುರಿದಿಡಿ.    4 ಪುದೀನಾ ಎಲೆ ತೊಳೆದಿಡಿ ( ಬೇಕಾದರೆ ) ಮಿಕ್ಸರ್ ಜಾರಿಗೆ ಹಣ್ಣಿನ ತುಂಡುಗಳು, ಶುಂಠಿ ತುರಿ, ಪುದೀನಾ ಎಲೆ ಹಾಕಿ ಮೂರ್ನಾಲ್ಕು ನಿಮಿಷ ತಿರುಗಿಸಿ, ಕೊನೆಯಲ್ಲಿ ಐಸ್ ಕ್ಯೂಬ್ …