CARROT N BADAM MILKSHAKE
ಕ್ಯಾರೆಟ್ & ಬಾದಾಮ್ ಮಿಲ್ಕ್ ಶೇಕ್
ಕ್ಯಾರೆಟ್ ಮತ್ತು ಬಾದಾಮಿ ಎರಡೂ ಆರೋಗ್ಯಕ್ಕೆ ಒಳ್ಳೆಯದು. ಈ ಎರಡು ಆರೋಗ್ಯಕರ ಸಾಮಗ್ರಿಗಳನ್ನು ಹಾಕಿ ಮಾಡುವ ಮಿಲ್ಕ್ ಶೇಕ್ ಮತ್ತೂ ಆರೋಗ್ಯಕರ, ರುಚಿ ಕರ!
ಮಾಡುವ ವಿಧಾನ:-



ಒಂದು ಕ್ಯಾರೆಟ್ ಬೇಯಿಸಿ, ಸಿಪ್ಪೆ ತೆಗೆದ ಇಪ್ಪತ್ತು ಬಾದಾಮಿ ಜೊತೆಗೆ ಸ್ವಲ್ಪ ಹಾಲು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಇನ್ನೂ ಸ್ವಲ್ಪ ತಣ್ಣಗಿರುವ ಹಾಲು, ಚಿಕ್ಕ ಚಮಚ ಸಕ್ಕರೆ, ಒಂದು ಚಮಚ ಐಸ್ ಕ್ರೀಮ್ ಹಾಕಿ ಎರಡು ಸುತ್ತು ಮಿಕ್ಷಿಯಲ್ಲಿ ಸುತ್ತಿ ಒಂದು ಲೋಟಕ್ಕೆ ಹಾಕಿ ಅದರ ಮೇಲೆ ಇನ್ನೊಂದು ಚಮಚ ಐಸ್ ಕ್ರೀಮ್, ಸಣ್ಣಗೆ ಹೆಚ್ಚಿದ ಬಾದಾಮಿ ಹಾಕಿ ಸವಿಯಿರಿ!

ಧನ್ಯವಾದಗಳು 🙏🙏🙏
