KASHAYA ಕಷಾಯ
ಮಳೆಗಾಲ, ಚಳಿಗಾಲದಲ್ಲಿ ಎಲ್ಲರನ್ನೂ ಕಾಡುವ ಸಣ್ಣ ನೆಗಡಿ, ಕೆಮ್ಮು, ಗಂಟಲು ನೋವಿಗೆ ಮನೆ ಮಂದಿಯೆಲ್ಲಾ ದಿನ ಎರಡು ಬಾರಿ ಕುಡಿಯಬಹುದಾದ ಆರೋಗ್ಯಕರ, ರುಚಿಕರ ಪೇಯ. ಚಿಕ್ಕ ಮಕ್ಕಳಿಗೂ ಕೊಡಬಹುದು.
ಬೇಕಾಗುವ ಸಾಮಗ್ರಿಗಳು:-
ಧನಿಯಾ – 4 ಟೇಬಲ್ ಚಮಚ
ಜೀರಿಗೆ – 2 ಟೇಬಲ್ ಚಮಚ
ಸೋಂಪು – 1 ಟೇಬಲ್ ಚಮಚ
ಕರಿ ಮೆಣಸು – 1 ಟೇಬಲ್ ಚಮಚ
ಮೆಂತ್ಯ – 1 ಟೇಬಲ್ ಚಮಚ
ಅರಿಶಿನ ಪುಡಿ – 1 ಟೇಬಲ್ ಚಮಚ
ಒಣ ಶುಂಠಿ ಪುಡಿ – 1 ಟೇಬಲ್ ಚಮಚ
ಅತಿ ಮಧುರ ಪುಡಿ – 1 ಟೇಬಲ್ ಚಮಚ
ಚಕ್ಕೆ – ಎರಡು ಇಂಚು
ಏಲಕ್ಕಿ – 10
ಲವಂಗ – 8
ಜಾಕಾಯಿ – ಅರ್ಧ ( ತುರಿದದ್ದು )

ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಮೂರು ಪುಡಿಗಳನ್ನು ಬಿಟ್ಟು ಉಳಿದ ಎಲ್ಲಾ ಸಾಮಗ್ರಿಗಳನ್ನು ಬೇರೆ ಬೇರೆ ಹುರಿದು ತಣ್ಣಗಾದ ಮೇಲೆ ಪುಡಿಗಳನ್ನು ಸೇರಿಸಿ ನುಣ್ಣಗೆ ರುಬ್ಬಿ ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿ ಬೇಕಾದಾಗ ಉಪಯೋಗಿಸಬಹುದು.

ಕಷಾಯ ಮಾಡುವ ವಿಧಾನ:-
ಒಂದು ಲೋಟ ( 100 ಮಿ. ಲೀ. ) ನೀರಿಗೆ ಒಂದು ಟೀ ಚಮಚ ಪುಡಿ ಹಾಕಿ ಕುದಿಯಲು ಇಡಿ. ನೀರು ಕುದಿದು ಅರ್ಧ ಆದಾಗ ಅರ್ಧ ಲೋಟ ಹಾಲು ಸೇರಿಸಿ ಕುದಿಸಿ ಕೊನೆಯಲ್ಲಿ ಸಕ್ಕರೆ ಅಥವಾ ಕಲ್ಲು ಸಕ್ಕರೆ ಸೇರಿಸಿ ಬಿಸಿ ಬಿಸಿಯಾಗಿ ಸವಿಯಿರಿ. ನಿಮಗೆ ಕಷಾಯ ಹೆಚ್ಚು ಗಾಢ ( Strong )ಬೇಕು ಅನ್ನಿಸಿದರೆ ಕಷಾಯದ ಪುಡಿ ತುಸು ಹೆಚ್ಚಿಗೆ ಹಾಕಬಹುದು.

ಬೆಲ್ಲ ಅಥವಾ ಜೇನು ತುಪ್ಪ ಹಾಕುವುದಾದರೆ ಒಲೆಯಿಂದ ಇಳಿಸಿ ಬೆಲ್ಲ ಸೇರಿಸಿ ಕಲೆಸಿ ಕುಡಿಯಬಹದು. ಈ ಅಳತೆಯಲ್ಲಿ ಮಾಡಿದ ಕಷಾಯ ಒಬ್ಬರಿಗೆ ಸಾಕಾಗುವುದು.
ಈ ಕಷಾಯ ಹಾಲು ಸೇರಿಸದೆ ಕುಡಿದರೆ ಉಷ್ಣ ಆಗಬಹುದು. ಹಾಗಾಗಿ ಹಾಲು ಸೇರಿಸಿ ಕುಡಿಯಬೇಕು.

ಧನ್ಯವಾದಗಳು 🙏🙏🙏
