DRAKSHI KASHAYA ದ್ರಾಕ್ಷಿ ಕಷಾಯ
ಕಷಾಯ ಆರೋಗ್ಯಕರವಾದ ಪೇಯ. ಕಾಫಿ ಟೀ ಬದಲಾಗಿ ಈ ಕಷಾಯ ಕುಡಿದರೆ ಆರೋಗ್ಯ ವೃದ್ಧಿ ಆಗುವುದು. ಬಹಳ ದಿನಗಳಿಂದ ಕಾಡುವ ಅಲರ್ಜಿ, ಒಣ ಕೆಮ್ಮು ಈ ಒಣ ದ್ರಾಕ್ಷಿ ಕಷಾಯ ಕುಡಿಯುವದರಿಂದ ಖಂಡಿತಾ ಕಡಿಮೆ ಆಗುತ್ತದೆ. ಈ ಕಷಾಯ ಕುಡಿಯುವುದರಿಂದ ಯಾವುದೇ ವಿಧವಾದ ಅಡ್ಡ ಪರಿಣಾಮ ಇಲ್ಲ. ಬದಲಾಗಿ ಆರೋಗ್ಯ ಹೆಚ್ಚುತ್ತದೆ.
ಮಾಡುವ ವಿಧಾನ :-
ನಿಮಗೆ ಬೇಕಾಗುವಷ್ಟು ಒಣ ದ್ರಾಕ್ಷಿ ತೊಳೆದು ಒಂದು ಲೋಟ ನೀರು ಹಾಕಿ ನಾಲ್ಕು ಗಂಟೆ ನೆನೆಸಿಡಿ. ನಂತರ ಒಂದು ಲೋಟ ನೀರು ಅರ್ಧ ಆಗುವವರೆಗೆ ಕುದಿಸಿ ಒಲೆಯಿಂದ ಇಳಿಸಿ ದ್ರಾಕ್ಷಿ ಹಣ್ಣನ್ನು ಚೆನ್ನಾಗಿ ಕಿವುಚಿ ಅಥವಾ ಮಿಕ್ಸಿ, ಬ್ಲೆಂಡರ್ ನಲ್ಲಿ ಸ್ವಲ್ಪ ರುಬ್ಬಿ, ದ್ರಾಕ್ಷಿ ಬೆಂದ ನೀರಿಗೆ ಹಾಕಿಡಿ.


ಇನ್ನೊಂದು ಕಡೆ ಅರ್ಧ ಲೋಟ ಹಾಲು ಬಿಸಿ ಆಗಲು ಇಡಿ. ಅರ್ಧ ಚಮಚ ಅರಿಷಿಣ, 1/4 ಟೀ ಚಮಚ ಕರಿ ಮೆಣಸಿನ ಪುಡಿ, 1 ಇಂಚು ಕೆಂಪು ಕಲ್ಲು ಸಕ್ಕರೆ ಹಾಕಿ. ಹಾಲು ಕುದಿದ ನಂತರ ಒಣ ದ್ರಾಕ್ಷಿ ನೀರಿಗೆ ಹಾಕಿ ಚೆನ್ನಾಗಿ ಕಲೆಸಿ ಬಿಸಿಯಾಗಿ ಕುಡಿಯಲು ಕೊಡಿ.

ಹಾಲಿಗೆ ದ್ರಾಕ್ಷಿ ಹಾಕಿ ಕುದಿಯಲು ಇಡಬೇಡಿ. ಹಾಗೆ ಮಾಡುವುದರಿಂದ ಹಾಲು ಒಡೆದು ಹೋಗುವ ಸಾಧ್ಯತೆ ಇದೆ.
ಈ ತರಹ ನಿಮಗೆ ಬೇಕಾಗುವಷ್ಟು ಸಲ ಮಾಡಿ ಕುಡಿಯಬಹುದು. ಕಲ್ಲು ಸಕ್ಕರೆ ಬದಲು ಸಾಧಾರಣ ಸಕ್ಕರೆ ಅಥವಾ ಬೆಲ್ಲ ಅಥವಾ ಜೇನುತುಪ್ಪ ಹಾಕಬಹುದು.

ಧನ್ಯವಾದಗಳು 🙏🙏🙏
