Showing 23 Result(s)
Kannada Oota ಸಾಂಬಾರು ಮತ್ತು ಪಲ್ಯಗಳು

PINEAPPLE CURRY ಪೈನಾಪಲ್ ಕರ್ರಿ

ಚಪಾತಿ, ಪುಲ್ಕಾ, ರೊಟ್ಟಿ, ಅನ್ನ ಎಲ್ಲದರ ಜೊತೆಗೆ ಚೆನ್ನಾಗಿರುವ ಪೈನಾಪಲ್ ಹಣ್ಣಿನ ಕರ್ರಿ ಮಾಡುವ ವಿಧಾನ ಇಲ್ಲಿದೆ! ಮಾಡುವ ವಿಧಾನ:- 1 ಚಿಕ್ಕ ಪೈನಾಪಲ್ ಸಣ್ಣಗೆ ಹೆಚ್ಚಿಡಿ. ಧನಿಯಾ – 1 ಟೇಬಲ್ ಚಮಚ ಎಳ್ಳು – 1 ಟೇಬಲ್ ಚಮಚ ಚಮಚ ಮೆಂತ್ಯ – 1/2 ಟೀ ಚಮಚ ಮೆಣಸು – 1/4 ಟೀ ಚಮಚ ಜೀರಿಗೆ – 1/2 ಟೀ ಚಮಚ ಬ್ಯಾಡಗಿ ಮೆಣಸಿನಕಾಯಿ – 6 ರಿಂದ 8    ಮೇಲೆ ಹೇಳಿರುವ …

Kannada ಉಪಹಾರ

ADAI ( BELEGALA DOSE ) ಅಡೈ ( ಬೇಳೆಗಳ ದೋಸೆ )

ತಮಿಳಿನಲ್ಲಿ ಅಡೈ ಅಂದರೆ ಮಿಶ್ರ ಬೇಳೆಗಳ ದೋಸೆ ಎಂದು ಅರ್ಥ! ಬೇಳೆಗಳು ತಮ್ಮಲ್ಲಿ ಬೇಕಾದಷ್ಟು ಆರೋಗ್ಯಕರವಾದ ಅಂಶಗಳನ್ನು ತುಂಬಿಕೊಂಡಿವೆ! ಎಲ್ಲಾ ಬೇಳೆಗಳನ್ನು ಒಟ್ಟು ಗೂಡಿಸಿ ಮಾಡುವ ಆರೋಗ್ಯಕರವಾದ, ರುಚಿಕರವಾದ ರೆಸಿಪಿ ಇಲ್ಲಿದೆ! ಅಡೈ ಮಾಡುವ ವಿಧಾನ:- ದೋಸೆ ಅಕ್ಕಿ – 1 ಕಪ್ ತೊಗರಿ ಬೇಳೆ – 1/2 ಕಪ್ ಹೆಸರು ಬೇಳೆ – 1/2 ಕಪ್ ಉದ್ದಿನ ಬೇಳೆ – 1/2 ಕಪ್ ಕಡಲೇ ಬೇಳೆ – 1/2 ಕಪ್ ಗಟ್ಟಿ ಅವಲಕ್ಕಿ – 2 ಚಮಚ …

Kannada Tindi Tinisu ಚಾಟ್ಸ್

VADA PAV ವಡಾ ಪಾವ್

ಮುಂಬಯಿಯ ಇನ್ನೊಂದು ಜನಪ್ರಿಯ Street food! ರುಚಿಕರ, ಮಾಡುವುದು ಸುಲಭ ಕೂಡ! ಮಾಡುವ ವಿಧಾನ:- 2 ಆಲೂಗೆಡ್ಡೆ ಬೇಯಿಸಿ ಸಿಪ್ಪೆ ತೆಗೆದು ಪುಡಿ ಮಾಡಿಡಿ. ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ 1 ಇಂಚು ಸಿಪ್ಪೆ ತೆಗೆದು ತುರಿದ ಶುಂಠಿ, ಹಸಿ ಮೆಣಸಿನಕಾಯಿ ಪೇಸ್ಟ್, ಉಪ್ಪು, ಪುಡಿ ಮಾಡಿದ ಆಲೂಗೆಡ್ಡೆ ಹಾಕಿ ಚೆನ್ನಾಗಿ ಕಲೆಸಿ. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, 1/2 ನಿಂಬೆ ರಸ ಹಾಕಿ ಚೆನ್ನಾಗಿ ಕಲೆಸಿ ಚಪ್ಪಟೆಯಾಗಿ ವಡಾ ತಟ್ಟಿಡಿ.   ಬೋಂಡಾ ಹಿಟ್ಟು …

Kannada Tindi Tinisu ಚಾಟ್ಸ್

DAHI BATATA PURI ದಹಿ ಬಟಾಟ ಪುರಿ

ಎಲ್ಲರ ಮೆಚ್ಚಿನ ಚಾಟ್! ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ ಪುರಿ ಮಾಡಲು:- 1/2 ಕಪ್ ಮೈದಾ, 1/2 ಕಪ್ ಚಿರೋಟಿ ರವೆ, ಉಪ್ಪು, 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಪೂರಿ ಹಿಟ್ಟಿನ ಹದಕ್ಕೆ ಹಿಟ್ಟು ಕಲೆಸಿಡಿ.    10 ನಿಮಿಷದ ನಂತರ ಮತ್ತೊಮ್ಮೆ ಚೆನ್ನಾಗಿ ನಾದಿ ದೊಡ್ಡ ದೊಡ್ಡ ಚಪಾತಿಯಂತೆ ತೆಳ್ಳಗೆ ಲಟ್ಟಿಸಿ, ಯಾವುದಾದರೂ ಚಿಕ್ಕ ಡಬ್ಬದ ಮುಚ್ಚಳದಿಂದ ಕಟ್ ಮಾಡಿ ಪುಟ್ಟ ಪುಟ್ಟ …

Kannada Tindi Tinisu ಖಾರ ತಿನಿಸುಗಳು

SABBAKKI SANDIGE ಸಬ್ಬಕ್ಕಿ ಸಂಡಿಗೆ

ಬೇಸಿಗೆ ಕಾಲ ಬಂದೊಡನೆ ಗೃಹಿಣಿಯರಿಗೆ ವರ್ಷಕ್ಕೆ ಬೇಕಾಗುವಷ್ಟು ಹಪ್ಪಳ, ಸಂಡಿಗೆ ಮಾಡಿಡುವ ಕೆಲಸ! ಸುಲಭವಾಗಿ ಮಾಡಬಹುದಾದ ಸಬ್ಬಕ್ಕಿಯ ಸಂಡಿಗೆಯ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1/2 ಕೇಜಿ ಸಬ್ಬಕ್ಕಿಯನ್ನು ತೊಳೆದು ( ಸಾಧಾರಣ ಸಬ್ಬಕ್ಕಿ, ಬೆಳ್ಳಗೆ, ಗುಂಡಗೆ ಇರುವುದು. ನೈಲಾನ್ ಸಾಬೂದಾನ ಅಲ್ಲ) ರಾತ್ರಿ ಪೂರ ನೆನೆಸಿಡಿ. ಸಬ್ಬಕ್ಕಿಯ ಮೇಲೆ ಎರಡು ಇಂಚು ನೀರು ಇರುವಷ್ಟು ಹಾಕಿಡಿ.     ಬೆಳಿಗ್ಗೆ 100 ಗ್ರಾಂ ಹಸಿ ಮೆಣಸಿನಕಾಯಿ ತೊಳೆದು ಮಿಕ್ಸಿಯಲ್ಲಿ ಪುಡಿ ಮಾಡಿಡಿ. ನೆಂದ ಸಬ್ಬಕ್ಕಿಗೆ ಮೆಣಸಿನಕಾಯಿ ಪೇಸ್ಟ್, …

Kannada Oota ಸಾಂಬಾರು ಮತ್ತು ಪಲ್ಯಗಳು

SHAHI PANEER ಶಾಹಿ ಪನ್ನೀರ್

ಪನ್ನೀರ್ ನಿಂದ ಮಾಡುವ ರುಚಿಯಾಗಿ, ಸುಲಭವಾಗಿ ಮಾಡಬಹುದಾದ ರೆಸಿಪಿ ಇಲ್ಲಿದೆ! ಮಾಡುವ ವಿಧಾನ:- 1 ಈರುಳ್ಳಿ, 2 ಟೋಮೋಟೋ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. 100 ಗ್ರಾಂ ಪನ್ನೀರ್ ತುರಿದಿಡಿ/ ಪುಡಿ ಮಾಡಿಡಿ.    ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಜೀರಿಗೆ, ಹೆಚ್ಚಿದ ಈರುಳ್ಳಿ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಚಿಟಿಕೆ ಅರಿಷಿಣ ಹಾಕಿ ಸ್ವಲ್ಪ ಹುರಿಯಿರಿ. ನಂತರ ಟೋಮೇಟೋ ಹಾಕಿ ಸ್ವಲ್ಪ ಬಾಡಿಸಿ, 1 ಚಮಚ ಖಾರದ ಪುಡಿ, 1/2 ಚಮಚ …

Kannada ಉಪಹಾರ ಹಬ್ಬದ ಅಡುಗೆಗಳು

PINEAPPLE KESARI BATH ಪೈನಾಪಲ್ ಕೇಸರಿ ಬಾತ್

ಕೇಸರಿ ಬಾತ್ ಎಲ್ಲರ ಮೆಚ್ಚಿನ ಸಿಹಿ ತಿಂಡಿ! ಅದರಲ್ಲೂ ಪೈನಾಪಲ್ ಹಾಕಿ ಮಾಡಿದ ಕೇಸರಿ ಬಾತ್ ಮತ್ತಷ್ಟು ರುಚಿಕರ! ಮಾಡುವ ವಿಧಾನ :- 1 ಲೋಟ ಚಿರೋಟಿ ರವೆಯನ್ನು 2 ಚಮಚ ತುಪ್ಪ ಹಾಕಿ ಹುರಿದಿಡಿ. 1 ಚಿಕ್ಕ ಪೈನಾಪಲ್ ಸಣ್ಣಗೆ ಹೆಚ್ಚಿಡಿ ಸ್ವಲ್ಪ ಗೋಡಂಬಿ, ಬಾದಾಮಿ ಸಣ್ಣಗೆ ಹೆಚ್ಚಿಡಿ. 4 ಏಲಕ್ಕಿ ಪುಡಿ ಮಾಡಿಡಿ.    ಬಾಣಲೆಯಲ್ಲಿ 1/4 ಲೋಟ ತುಪ್ಪ ಹಾಕಿ. ಗೋಡಂಬಿ, ಬಾದಾಮಿ, ದ್ರಾಕ್ಷಿ ಹುರಿದು ತೆಗೆದಿಡಿ. ಅದೇ ಬಾಣಲೆಯಲ್ಲಿ ಹೆಚ್ಚಿದ ಪೈನಾಪಲ್ …

Kannada Tindi Tinisu ಖಾರ ತಿನಿಸುಗಳು

MANGALORE BONDA ( GODHI HITTU ) ಮಂಗಳೂರು ಬೋಂಡಾ ( ಗೋಧಿ ಹಿಟ್ಟು )

ಮಂಗಳೂರು ಬೋಂಡಾ/ಮಂಗಳೂರು ಬಜ್ಜಿ/ ಗೋಲಿ ಬಜೆ ಹೀಗೆ ಕಲೆಸಿಕೊಳ್ಳುವ ರುಚಿಯಾದ, ಸುಲಭವಾಗಿ ಮಾಡಬಹುದಾದ ತಿಂಡಿಯ ರೆಸಿಪಿ ಇಲ್ಲಿದೆ! ಸಾಧಾರಣವಾಗಿ ಎಲ್ಲರೂ ಮಂಗಳೂರು ಬೋಂಡಾ ಮೈದಾ ಹಿಟ್ಟಿನಲ್ಲಿ ಮಾಡುತ್ತಾರೆ. ನಾನು ಗೋಧಿ ಹಿಟ್ಟಿನ ಮಂಗಳೂರು ಬೋಂಡಾ ಮಾಡಿದ್ದೇನೆ. ಮೈದಾ ಹಿಟ್ಟನ್ನು ಹಾಕಿ ಮಾಡುವ ಬೋಂಡಾದಷ್ಟೇ ಚೆನ್ನಾಗಿ, ಗರಿ ಗರಿಯಾಗಿ ಇರುತ್ತದೆ! ಮಾಡುವ ವಿಧಾನ:- 1 ಅಳತೆ ಗೋಧಿ ಹಿಟ್ಟು, 1/4 ಅಕ್ಕಿ ಹಿಟ್ಟು, 1 ಚಮಚ ಚಿರೋಟಿ ರವೆ, ಉಪ್ಪು, 1 ಟೀ ಚಮಚ ಸಕ್ಕರೆ ಹಾಕಿ ಚೆನ್ನಾಗಿ …

Kannada Oota ಸಾಂಬಾರು ಮತ್ತು ಪಲ್ಯಗಳು

JEERA RICE & DAL FRY ಜೀರಾ ರೈಸ್ & ದಾಲ್ ಫ್ರೈ

ಉತ್ತರ ಭಾರತದ ಜನಪ್ರಿಯ ಆಹಾರ! ಎರಡೂ ಒಳ್ಳೆಯ ಕಾಂಬಿನೇಶನ್! ಸುಲಭವಾಗಿ, ಬೇಗನೆ ಮಾಡಬಹುದಾದ ರೆಸಿಪಿ ಇಲ್ಲಿದೆ! ಜೀರಾ ರೈಸ್ ಮಾಡುವ ವಿಧಾನ:- 1 ಲೋಟ ಬಾಸುಮತಿ ಅಕ್ಕಿ ತೊಳೆದು ನೀರು ಹೆಚ್ಚಾಗಿ ಹಾಕಿ ತೆರೆದ ಬಾಣಲೆಯಲ್ಲಿ/ ಕುಕ್ಕರಿನಲ್ಲಿ ಬೇಯಿಸಿ ನೀರು ಸೋರಿ ಹಾಕಿಡಿ. 1 ಈರುಳ್ಳಿ ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ. 2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ. ಬಾಣಲೆಯಲ್ಲಿ 4 ಚಮಚ ತುಪ್ಪ ಹಾಕಿ 1 ದೊಡ್ಡ ಚಮಚ ಜೀರಿಗೆ, …

Kannada Oota ಸಾಂಬಾರು ಮತ್ತು ಪಲ್ಯಗಳು ಹಬ್ಬದ ಅಡುಗೆಗಳು

SEEME BADANE KOOTU ಸೀಮೆ ಬದನೆ ಕೂಟು

ಸೀಮೆ ಬದನೆ ಕಾಯಿಯ ಒಂದು ರುಚಿಯಾದ ರೆಸಿಪಿ ಇಲ್ಲಿದೆ! ಸೀಮೆ ಬದನೆ ಕೂಟು ಮಾಡುವ ವಿಧಾನ:- 4 ಚಮಚ ಕಡಲೇ ಬೇಳೆಯನ್ನು 2 ಗಂಟೆ ನೆನೆಸಿಡಿ. 1 ಚಮಚ ಕಡಲೇ ಬೇಳೆ, 1 ಚಮಚ ಉದ್ದಿನ ಬೇಳೆ, 1 ಚಮಚ ಧನಿಯಾ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ. 6 ರಿಂದ 8 ಬ್ಯಾಡಗಿ ಮೆಣಸಿನ ಕಾಯಿ ಹುರಿದು ಪುಡಿ ಮಾಡಿಡಿ. 4 ಚಮಚ ಕಾಯಿ ತುರಿದಿಡಿ. ಕಡಲೇ ಬೇಳೆ, ಉದ್ದಿನ ಬೇಳೆ, ಧನಿಯಾ ಪುಡಿ, ಮೆಣಸಿನಕಾಯಿ ಪುಡಿ, …