ಖಾರ ತಿನಿಸುಗಳು

Bread bajji ಬ್ರೆಡ್ ಬಜ್ಜಿ

Bread bajji ಬ್ರೆಡ್ ಬಜ್ಜಿ

ಡಿಸೆಂಬರ್ ತಿಂಗಳ ಚುಮು ಚುಮು ಚಳಿಗೆ ಬಿಸಿ ಬಿಸಿ ಖಾರಾ ಖಾರಾ ಬಜ್ಜಿ ಯಾರಿಗೆ ಇಷ್ಟ ಆಗೋಲ್ಲ ಹೇಳಿ!? ಎಷ್ಟು ವಿಧದ ಬಜ್ಜಿ! ಒಬ್ಬೊಬ್ಬರಿಗೆ ಒಂದೊಂದು ಫೇವರಿಟ್! ಸಾಧಾರಣವಾಗಿ ಎಲ್ಲರ ಮನೆಯಲ್ಲೂ ಬ್ರೆಡ್ ಇರುತ್ತದೆ! ಬ್ರೆಡ್ ನಿಂದ ರುಚಿಯಾದ ಬಜ್ಜಿ ಮಾಡುವ ವಿಧಾನ ಇಲ್ಲಿದೆ:-

ಸ್ಯಾಂಡ್ ವಿಚ್ ಬ್ರೆಡ್ಡನ್ನು ತುದಿಗಳನ್ನು ತೆಗೆದು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಡಿ.

ಕಡಲೆ ಹಿಟ್ಟು, ಒಂದು ಚಮಚ ಅಕ್ಕಿ ಹಿಟ್ಟು, ಒಂದು ಚಮಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಚಮಚ ಇಂಗು , ಕಾಲು ಚಮಚ ಜೀರಿಗೆ, ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲೆಸಿ, ನೀರು ಸೇರಿಸಿ ಬಜ್ಜಿ ಹಿಟ್ಟು ಕಲೆಸಿಡಿ.

ಎರಡು ಹಿಡಿ ಪುದೀನಾ, ಎರಡು ಹಿಡಿ ಕೊತ್ತಂಬರಿ ಸೊಪ್ಪು, ಎರಡು ಹಸಿ ಮೆಣಸಿನ ಕಾಯಿ, ಅರ್ಧ ಚಮಚ ಚಾಟ್ ಮಸಾಲಾ, ಅರ್ಧ ಚಮಚ ಕಾಲಾ ನಮಕ್, ಸ್ವಲ್ಪ ನಿಂಬೆ ರಸ ಸೇರಿಸಿ ನೀರು ಹಾಕದೆ ಚಟ್ನಿ ರುಬ್ಬಿಡಿ.

ಕತ್ತರಿಸಿದ ಎರಡು ಬ್ರೆಡ್ ತುಂಡುಗಳ ಒಂದೊಂದು ಬದಿಗೆ ಬೆಣ್ಣೆ ಸವರಿ ಹಸಿರು ಚಟ್ನಿ ಹರಡಿ ಇನ್ನೊಂದು ಬೆಣ್ಣೆ ಸವರಿದ ಬ್ರೆಡ್ ಭಾಗವನ್ನು ಅದರ ಮೇಲೆ ಇಟ್ಟು ಸ್ವಲ್ಪ ಅದುಮಿ, ಬಜ್ಜಿ ಹಿಟ್ಟಿನಲ್ಲಿ ಮುಳುಗಿಸಿ ಕಾದ ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿದು ನಿಮ್ಮ ಇಷ್ಟದ ಚಟ್ನಿ ಅಥವಾ ಸಾಸ್ ಜೊತೆಗೆ ಸವಿಯಿರಿ!

ಧನ್ಯವಾದಗಳು 🙏🙏🙏

Leave a Reply

Your email address will not be published.