Tindi Tinisu

PEPPER NIPPATTU ಪೆಪ್ಪರ್ ನಿಪ್ಪಟ್ಟು

PEPPER NIPPATTU ಪೆಪ್ಪರ್ ನಿಪ್ಪಟ್ಟು

ನಿಪ್ಪಟ್ಟು ಎಲ್ಲರಿಗೂ ಇಷ್ಟವಾಗುವ ಕುರುಕಲು ತಿಂಡಿ. ಅದರ ಖಾರ, ರುಚಿ, ಗರಿ ಗರಿ ಯಾರಿಗೆ ಇಷ್ಟ ಆಗೋಲ್ಲ ಹೇಳಿ!?

ಮಾಡುವ ವಿಧಾನ:-

ದೋಸೆ ಅಕ್ಕಿಯನ್ನು ನಾಲ್ಕೈದು ಸಲ ಚೆನ್ನಾಗಿ ತೊಳೆದು, ನೀರು ಸೋರಿ ಹಾಕಿ, ನೆರಳಿನಲ್ಲಿ ಹತ್ತಿ ಬಟ್ಟೆಯ ಮೇಲೆ ಚೆನ್ನಾಗಿ ಒಣಗಿಸಿ ನಂತರ ನುಣ್ಣಗೆ ಹಿಟ್ಟು ಮಾಡಿಸಿಡಿ.

ಎರಡು ಚಮಚ ಕಡಲೆ ಬೇಳೆ ಎರಡು ಗಂಟೆ ನೀರಿನಲ್ಲಿ ನೆನೆಸಿ ನೀರು ಸೋರಿ ಹಾಕಿಡಿ.

ಒಂದು ಚಮಚ ಕರಿ ಮೆಣಸು , ಒಂದು ಚಮಚ ಜೀರಿಗೆ ಹುರಿದು ತರಿ ತರಿಯಾಗಿ ಪುಡಿ ಮಾಡಿಡಿ.

ಒಂದು ದೊಡ್ಡ ಚಮಚ ಉದ್ದಿನ ಬೇಳೆ ಕಡಿಮೆ ಉರಿಯಲ್ಲಿ ಕೆಂಪಗೆ ಹುರಿದು, ಒಂದು ಚಮಚ ಹುರಿಗಡಲೆ ಜೊತೆಗೆ ನುಣ್ಣಗೆ ಪುಡಿ ಮಾಡಿಡಿ.

ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಬಿಸಿ ಮಾಡಿ. ಒಂದು ಕಪ್ ಅಕ್ಕಿ ಹಿಟ್ಟು, ಇಂಗು, ಉದ್ದಿನ ಬೇಳೆ ಹಿಟ್ಟು, ಉಪ್ಪು, ಸಣ್ಣಗೆ ಹೆಚ್ಚಿದ ಕರಿಬೇವು, ಬಿಳಿ ಎಳ್ಳು, ನೆನೆಸಿದ ಕಡಲೆ ಬೇಳೆ, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲೆಸಿ. ಕಾದ ಎಣ್ಣೆ ಹಾಕಿ ಚೆನ್ನಾಗಿ ಕಲೆಸಿ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ , ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಆದಷ್ಟೂ ತೆಳ್ಳಗೆ ತಟ್ಟಿ ಕಾದ ಎಣ್ಣೆಯಲ್ಲಿ ಕಡಿಮೆ ಉರಿಯಲ್ಲಿ ಗರಿ ಗರಿಯಾಗಿ ಬೇಯಿಸಿದರೆ ಬಾಯಲ್ಲಿ ನೀರು ಊರಿಸುವ ಗರಿ ಗರಿ, ಖಾರಾ ಖಾರಾ ನಿಪ್ಪಟ್ಟು ಸವಿಯಲು ಸಿದ್ಧ!

ಧನ್ಯವಾದಗಳು 🙏🙏🙏

Leave a Reply

Your email address will not be published.