OILLESS MASALA PEANUT ಆಯಿಲ್ ಲೆಸ್ ಮಸಾಲ ಪೀನಟ್
ಪೀನಟ್ ಅಂದರೆ ಕಡಲೇ ಬೀಜವನ್ನು ಬಡವರ ಬಾದಾಮಿ ಎಂದೇ ಹೇಳಬಹುದು! ಎಲ್ಲರೂ ಇಷ್ಟ ಪಟ್ಟು ತಿನ್ನುವರು. ಸಿಹಿ ಆಗಲಿ ಖಾರಾ ಆಗಲಿ ಎರಡಕ್ಕೂ ಸೈ! ಎಣ್ಣೆಯೇ ಹಾಕದೆ ಮಾಡುವ ರುಚಿಯಾದ ಮಸಾಲ ಪೀನಟ್ ಮಾಡುವ ರೆಸಿಪಿ ಇಲ್ಲಿದೆ!
Microwave safe ತಟ್ಟೆಯಲ್ಲಿ 1/4 ಕೇಜಿ ಕಡಲೇ ಬೀಜ ಹಾಕಿ, 4 ಚಮಚ ಕಡಲೇ ಹಿಟ್ಟು, 2 ಚಮಚ ಖಾರಾ ಪುಡಿ, ಅರ್ಧ ಚಮಚ ಇಂಗು, 1 ಚಮಚ ಆಮ್ ಚೂರ್ ಪುಡಿ, 1ಚಮಚ ಚಾಟ್, 2 ಚಮಚ ಗಸಗಸೆ, ಉಪ್ಪು ಹಾಕಿ ಕಲೆಸಿ ಕೆಲವೇ ಹನಿಗಳಷ್ಟು ನೀರು ಚಿಮುಕಿಸಿ ಕಲೆಸಿ.

Oven ನಲ್ಲಿ 5 ರಿಂದ 8 ನಿಮಿಷ, ಆಗಾಗ ಫೋರ್ಕ್ ನಿಂದ ಕಾಳು ಬೇರೆ ಬೇರೆ ಆಗುವಂತೆ ಕಲೆಸುತ್ತಾ ಬೇಯಿಸಿ. ಸಂಪೂರ್ಣವಾಗಿ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಬೇಕಾದಾಗ ಸವಿಯಿರಿ.

Microwave ಸಮಯ ಒಂದೊಂದು ಬೇರೆ ಬೇರೆ ಇರಬಹುದು. ನಿಮ್ಮ ಮನೆಯ Oven ಸಮಯ ನೋಡಿ ಕೊಂಡು ಅಡ್ಜಸ್ಟ್ ಮಾಡಿಕೊಳ್ಳಿ.
ಕಡಲೆ ಬೀಜದ ಬದಲು ಗೋಡಂಬಿ ಅಥವಾ ಬಾದಾಮಿ ಹಾಕಿ ಇದೇ ರೀತಿ ಮಾಡಬಹುದು.( ಮನೆಯಲ್ಲಿ ಹೆಚ್ಚು ಇದ್ದರೆ 😛)
ಸಂಜೆ ವೇಳೆಗೆ ಸಿಸಿ ಬಿಸಿ ಕಾಫಿ ಅಥವಾ ಟೀ ಜೊತೆಗೆ ಚೆನ್ನಾಗಿರುತ್ತದೆ.

ಧನ್ಯವಾದಗಳು🙏🙏🙏
