BABYCORN MANCHOORIAN ಬೇಬಿ ಕಾರ್ನ್ ಮಂಚೂರಿಯನ್
ಎಲ್ಲರಿಗೂ ಬಹಳ ಇಷ್ಟವಾಗುವ ತಿಂಡಿ!
ಮಾಡುವ ವಿಧಾನ:-
ಬೇಬಿ ಕಾರ್ನ್ ಅನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ.
ಬಟ್ಟಲಿನಲ್ಲಿ 4 ಚಮಚ ಕಾರ್ನ್ ಫ್ಲೋರ್, 2 ಚಮಚ ಮೈದಾ, ಉಪ್ಪು, 1 ಚಮಚ ಖಾರದ ಪುಡಿ ಸ್ವಲ್ಪವೇ ನೀರು ಚಿಮುಕಿಸಿ ಗಟ್ಟಿಯಾಗಿ ಕಲೆಸಿ, ಬೇಬಿ ಕಾರ್ನ್ ಗಳನ್ನು ಬಿಡಿ ಬಿಡಿಯಾಗಿ ಕಾದ ಎಣ್ಣೆಯಲ್ಲಿ ಹಾಕಿ ಗರಿ ಗರಿಯಾಗುವಂತೆ ಕರಿದು ತೆಗೆದಿಡಿ.



1 ಈರುಳ್ಳಿ, 1 ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. 4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ. 1 ಇಂಚು ಶುಂಠಿ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.
ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಹಾಕಿ ಸ್ವಲ್ಪ ಬಾಡಿಸಿ, 1 ಚಮಚ ಟೋಮೇಟೋ ಸಾಸ್, 1 ಚಮಚ ಚಿಲ್ಲಿ ಸಾಸ್, 1 ಚಮಚ ವಿನೆಗರ್, 1/2 ಚಮಚ ಸೋಯಾ ಸಾಸ್ ಹಾಕಿ ಚೆನ್ನಾಗಿ ಕಲೆಸಿ.
ನಂತರ 1 ಚಮಚ ಕಾರ್ನ್ ಫ್ಲೋರ್ ಅನ್ನು ಮೂರು ಚಮಚ ನೀರಿಗೆ ಹಾಕಿ ಕಲೆಸಿ ಹಾಕಿ, ಕೊನೆಯಲ್ಲಿ ಕರಿದ ಬೇಬಿ ಕಾರ್ನ್, ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ ಬೇಬಿ ಕಾರ್ನ್ ಮಂಚೂರಿಯನ್ ಸವಿಯಲು ಸಿದ್ಧ!

ಧನ್ಯವಾದಗಳು 🙏🙏🙏
