Kannada Tindi Tinisu ಸಿಹಿ ತಿನಿಸುಗಳು

STUFFED BANANA ಸ್ಟಫ್ಡ್ ಬನಾನಾ

ಬಾಳೆ ಹಣ್ಣಿನ ರಸಾಯನ ಸಾಮಾನ್ಯವಾಗಿ ಎಲ್ಲರೂ ದೇವರ ನೈವೇದ್ಯಕ್ಕೆ ಮಾಡುತ್ತಾರೆ! ಅದನ್ನೇ ಸ್ವಲ್ಪ Different ಆಗಿ ಮಾಡಿದರೆ ದೇವರಿಗೂ ಇಷ್ಟ ಆಗಬಹುದೇನೋ? ಒಮ್ಮೆ ಹೀಗೆ ಮಾಡಿದರೆ ಹೇಗೆ?!

ಸ್ಟಫ್ಡ್ ಬನಾನಾ ಮಾಡುವ ವಿಧಾನ:-

1/2 ಹೋಳು ತೆಂಗಿನ ಕಾಯಿ ತುರಿದಿಡಿ.

1/2 ಲೋಟ ಬೆಲ್ಲ ತುರಿದಿಡಿ.

ಸ್ವಲ್ಪ ಗೋಡಂಬಿ ದ್ರಾಕ್ಷಿ ಬಾದಾಮಿ ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ ಕಾಯಿ ತುರಿ, ಬೆಲ್ಲದ ಪುಡಿ, Dry fruits ಹಾಕಿ ಸ್ವಲ್ಪ ಹುರಿದಿಡಿ. ಚಿಟಿಕೆ ಏಲಕ್ಕಿ ಪುಡಿ ಬೇಕಾದರೆ ಸೇರಿಸಿ ಕಲೆಸಿಡಿ.

   

ಪಚ್ಚ ಬಾಳೆ ಹಣ್ಣು ಸಿಪ್ಪೆ ತೆಗೆದು 2 ಇಂಚು ಅಳತೆಗೆ ತುಂಡು ಮಾಡಿ. ಮಧ್ಯದಲ್ಲಿ ಎಚ್ಚರಿಕೆಯಿಂದ ಸೀಳಿ, ಕಾಯಿಯ ಮಿಶ್ರಣವನ್ನು ತುಂಬಿ, ಒಂದು ಟೂತ್ ಪಿಕ್ ಚುಚ್ಚಿಡಿ.

   

ಎಲ್ಲಾ ತುಂಡುಗಳನ್ನು ಸಿದ್ಧವಾದ ಮೇಲೆ, ಬಾಣಲೆ/ ತವಾ ಮೇಲೆ 2 ಚಮಚ ತುಪ್ಪ ಹಾಕಿ ಬಾಳೆ ಹಣ್ಣಿನ ತುಂಡುಗಳನ್ನು ಜೋಡಿಸಿ, ಕಡಿಮೆ ಉರಿಯಲ್ಲಿ ಬಾಳೆ ಹಣ್ಣು ಕೆಂಪಗಾಗುವವರೆಗೆ ಬೇಯಿಸಿದರೆ ಸ್ಟಫ್ಡ್ ಬನಾನಾ ಸವಿಯಲು ಸಿದ್ಧ!

   

ಊಟದ ನಂತರ Dessert ನ ಹಾಗೆ ಸವಿಯಲು ತುಂಬಾ ಚೆನ್ನಾಗಿರುತ್ತದೆ!

ಧನ್ಯವಾದಗಳು.

Leave a Reply

Your email address will not be published.