ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🙏💕💐
ಬೇಸನ್ ಲಾಡು
ಬಹಳ ಜನಪ್ರಿಯ ಸಿಹಿ. ಮಾಡುವುದು ಕೂಡ ಬಹಳ ಸುಲಭ!
ಮಾಡುವ ವಿಧಾನ:-
1 ಅಳತೆ ಸಕ್ಕರೆ ಪುಡಿ ಮಾಡಿಡಿ. ಜೊತೆಗೆ 4 ಏಲಕ್ಕಿ ಸಿಪ್ಪೆ ತೆಗೆದು ಪುಡಿ ಮಾಡಲು ಹಾಕಿ. (ಸಕ್ಕರೆ ಪುಡಿ ಮಾಡಿದ ಮೇಲೆ ಅಳತೆ ಮಾಡಿ).
ಸ್ವಲ್ಪ ಬಾದಾಮಿ, ಗೋಡಂಬಿ, ದ್ರಾಕ್ಷಿ ತುಪ್ಪದಲ್ಲಿ ಹುರಿದಿಡಿ.
2 ಅಳತೆ ಕಡಲೇ ಹಿಟ್ಟನ್ನು ತುಪ್ಪ ಹಾಕದೆ, ದಪ್ಪ ತಳದ ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಕೆಂಪಗೆ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ. ಹೆಚ್ಚು ಕಡಿಮೆ 8 ರಿಂದ 10 ನಿಮಿಷ ಹುರಿಯಬೇಕು.

ಚಿಕ್ಕ ಬಾಣಲೆಯಲ್ಲಿ 1/2 ಅಳತೆ ತುಪ್ಪ ಕರಗಲು ಇಡಿ.
ಹುರಿದ ಕಡಲೇ ಹಿಟ್ಟನ್ನು ಒಲೆಯಿಂದ ತೆಗೆದು, ಸಕ್ಕರೆ ಪುಡಿ, ಹುರಿದ ಗೋಡಂಬಿ ಬಾದಾಮಿ ದ್ರಾಕ್ಷಿ , ತುಪ್ಪ ಹಾಕಿ ಚೆನ್ನಾಗಿ ಕಲೆಸಿ.
ಸ್ವಲ್ಪ ಬೆಚ್ಚಗೆ ಆದ ಮೇಲೆ ನಿಮಗೆ ಬೇಕಾದ ಅಳತೆಯ ಉಂಡೆ ಮಾಡಿಡಿ.

ಧನ್ಯವಾದಗಳು 🙏🙏🙏
