Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

KALAKAND ಕಲಾಕಂದ್

ಸುಲಭವಾಗಿ ಮಾಡುವ ಸಿಹಿ ರೆಸಿಪಿ!

ಮಾಡುವ ವಿಧಾನ:-

1 ಅಳತೆ ಸಪ್ಪೆ ಖೋವಾ ಪುಡಿ ಮಾಡಿಡಿ.(ಯಾವಾಗಲೂ Room temperature ನಲ್ಲಿರುವ ಖೋವಾ ಬಳಸಿ)

1/2 ಅಳತೆ ಸಕ್ಕರೆ ಪುಡಿ ಮಾಡಿಡಿ.

   

6 ಏಲಕ್ಕಿ ಪುಡಿ ಮಾಡಿಡಿ.

ಗೋಡಂಬಿ, ಬಾದಾಮಿ, ಪಿಸ್ತಾ ಸ್ವಲ್ಪ ಚಿಕ್ಕಚಿಕ್ಕದಾಗಿ ಹೆಚ್ಚಿಡಿ.

   

1 ಅಳತೆ ಸಪ್ಪೆ ಖೋವಾ, 1 ಅಳತೆ ಹಾಲಿನ ಪುಡಿ, 1 ಅಳತೆ ಫ್ರೆಶ್ ಕ್ರೀಂ ಅನ್ನು ದಪ್ಪ ತಳದ ಬಾಣಲೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಕಲೆಸುತ್ತಾ ಇರಿ. ಕೈ ಬಿಟ್ಟರೆ ಗಂಟಾಗುತ್ತೆ. ಮಿಶ್ರಣ ಸ್ವಲ್ಪ ಗಟ್ಟಿಯಾದಾಗ 1/2 ಅಳತೆ ಸಕ್ಕರೆ ಪುಡಿ, 1 ಚಮಚ ತುಪ್ಪ ಹಾಕಿ ಚೆನ್ನಾಗಿ ಕಲೆಸಿ ಕಡಿಮೆ ಉರಿಯಲ್ಲಿ ತಿರುಗಿಸುತ್ತಾ ಇರಿ ‌ಮಿಶ್ರಣ ಬಾಣಲೆಯ ಅಂಚು ಬಿಡುತ್ತಾ ಒಂದೇ ಮುದ್ದೆಯ ಹಾಗೆ ಆದಾಗ ಏಲಕ್ಕಿ ಪುಡಿ ಸೇರಿಸಿ ಕಲೆಸಿ ತುಪ್ಪ ಸವರಿದ ತಟ್ಟೆಗೆ ಹಾಕಿ ಹೆಚ್ಚಿದ ಡ್ರೈ ಫ್ರೂಟ್ಸ್ ಮೇಲೆ ಹಾಕಿ ಸ್ವಲ್ಪ ಒತ್ತಿ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ.

  

ನೀವು ಸಿಹಿ ಖೋವಾ ಹಾಕುವುದಾದರೆ 1/4 ಅಳತೆ ಸಕ್ಕರೆ ಪುಡಿ ಸಾಕು.

ಧನ್ಯವಾದಗಳು.

Leave a Reply

Your email address will not be published.