ಡೋಕ್ಲಾ ಸಾಮಾನ್ಯವಾಗಿ ಎಲ್ಲರೂ ಕಡಲೇ ಹಿಟ್ಟಿನಲ್ಲಿ ಮಾಡುವುದು! ಚಿರೋಟಿ ರವೆಯಲ್ಲಿ ಮಾಡಿ ನೋಡಿ! ತುಂಬಾ ಚೆನ್ನಾಗಿರುತ್ತದೆ! ಬೆಳಗ್ಗೆಯ ತಿಂಡಿ ಅಥವಾ ಸಂಜೆಯ ತಿಂಡಿ ಯಾವಾಗ ಬೇಕಾದರೂ ಸುಲಭವಾಗಿ ಮಾಡಬಹುದು!
ಮಾಡುವ ವಿಧಾನ :-
1 ಬಟ್ಟಲು ಚಿರೋಟಿ ರವೆಗೆ 1 ಬಟ್ಟಲು ಗಟ್ಟಿಯಾದ ಮೊಸರು ಹಾಕಿ ಚೆನ್ನಾಗಿ ಕಲೆಸಿಡಿ. ರವೆ ಹುರಿಯದೆ ಹಸಿಯಾಗೆ ಸೇರಿಸಿ. 10 ನಿಮಿಷದ ನಂತರ 1/2 ಬಟ್ಟಲು ನೀರು ಹಾಕಿ ಚೆನ್ನಾಗಿ ಕಲೆಸಿ. ಈ ಮಿಶ್ರಣ ಇಡ್ಲಿ ಹಿಟ್ಟಿನ ಹದದಲ್ಲಿರಬೇಕು.

ಹೆಚ್ಚಿದ ಈರುಳ್ಳಿ, ಕ್ಯಾಪ್ಸಿಕಮ್, ಹಸಿ ಬಟಾಣಿ, ಕ್ಯಾರೆಟ್ ತುರಿ, 2 ಚಮಚ ಕಡಲೇ ಹಿಟ್ಟು, ಉಪ್ಪು, ಜೀರಿಗೆ, ಹಸಿ ಮೆಣಸಿನಕಾಯಿ ಪೇಸ್ಟ್, ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿ ಮತ್ತೊಮ್ಮೆ ಕಲೆಸಿ.

ಕುಕ್ಕರಿನಲ್ಲಿ ನೀರು ಬಿಸಿಯಾಗಲು ಇಡಿ. ಕುಕ್ಕರ್ ಬಟ್ಟಲಿಗೆ ತುಪ್ಪ ಚೆನ್ನಾಗಿ ಸವರಿ. ರವೆ ಮಿಶ್ರಣಕ್ಕೆ 1 ಚಮಚ ಬೇಕಿಂಗ್ ಪೌಡರ್ ಹಾಕಿ ಕಲೆಸಿ ಕುಕ್ಕರ್ ಬಟ್ಟಲಿಗೆ ಹಾಕಿ. ಮೇಲೆ ಸ್ವಲ್ಪ ಬಿಳಿ ಎಳ್ಳು ಉದುರಿಸಿ, 15 ರಿಂದ 20 ನಿಮಿಷ ಇಡ್ಲಿಯ ಹಾಗೆ ಬೇಯಿಸಿ.
ನಂತರ ಎಚ್ಚರಿಕೆಯಿಂದ ಬಟ್ಟಲನ್ನು ತಲೆ ಕೆಳಗೆ ಮಾಡಿ, ಸ್ವಲ್ಪ ತಟ್ಟಿ ಬೆಂದ ಮಿಶ್ರಣವನ್ನು ತೆಗೆಯಿರಿ.

ಮೇಲೆ ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ. ಚಿಕ್ಕ ಚಿಕ್ಕದಾಗಿ ಕತ್ತರಿಸಿ, ಚಟ್ನಿಯೊಂದಿಗೆ ಸವಿಯಿರಿ!
ಧನ್ಯವಾದಗಳು ![]()
![]()
![]()