Kannada Tindi Tinisu ಸಿಹಿ ತಿನಿಸುಗಳು ಹಬ್ಬದ ಅಡುಗೆಗಳು

MAAVINA LADDU ಮಾವಿನ ಲಡ್ಡು

 ಮಾವು ಹಣ್ಣುಗಳ ರಾಜ!!! ಬೇಸಿಗೆಯಲ್ಲಿ ಎಲ್ಲೆಡೆ ಮಾವಿನ ಪರಿಮಳ ತುಂಬಿರುತ್ತದೆ.

ಆ ಮಾವಿನ ಹಣ್ಣಿನ ಲಡ್ಡು ಮಾಡುವ ವಿಧಾನ:-

  

1 ಲೋಟ ಕಾಯಿ ತುರಿಯನ್ನು ಕಡಿಮೆ ಉರಿಯಲ್ಲಿ 7 ರಿಂದ 8 ನಿಮಿಷ ಹುರಿದು ಕೊಳ್ಳಿ, (1 ಲೋಟಕ್ಕಿಂಕ ಸ್ವಲ್ಪ ಹೆಚ್ಚೇ ಹುರಿದು ಕೊಳ್ಳಿ, ಏಕೆಂದರೆ ಕೊನೆಯಲ್ಲಿ ಕೋಟಿಂಗ್ ಮಾಡಲು ಬೇಕು, ಹುರಿದ ನಂತರ ಸ್ವಲ್ಪ ತೆಗೆದಿಡಿ) ಕಾಯಿ ತುರಿಯ ಹಸಿ ವಾಸನೆ ಹೋಗಿ ಗರಿ ಗರಿಯಾಗಿ ಆದಾಗ 1/2 ಲೋಟ ಮಾವಿನ ಹಣ್ಣಿನ ತಿರುಳು ( mixie/ blender ನಲ್ಲಿ ಸ್ವಲ್ಪ ನುಣ್ಣಗೆ ಮಾಡಿ ಇಟ್ಟು ಕೊಂಡಿರಿ), 1/2 ಲೋಟ ಜೋನಿ ಬೆಲ್ಲ ಹಾಕಿ(ಸ್ವಲ್ಪ ಕಡಿಮೆಯಾದರೂ ಪರವಾಗಿಲ್ಲ, ಜೋನಿ ಬೆಲ್ಲ ಸಿಹಿ ಹೆಚ್ಚು)ಕಲೆಸುತ್ತಾ ಇರಿ, ಮಿಶ್ರಣ ಗಟ್ಟಿಯಾಗಿ ಎಲ್ಲಾ ಸೇರಿಸಿ ಒಂದು ಉಂಡೆಯಂತೆ ಆದಾಗ, ಒಲೆಯಿಂದ ತೆಗೆದು ಸ್ವಲ್ಪ ಬೆಚ್ಚಗೆ ಆದಾಗ ಚಿಕ್ಕ ಚಿಕ್ಕ ಉಂಡೆ ಮಾಡಿ, ಹುರಿದ ಕಾಯಿ ತುರಿಯಲ್ಲಿ ಹೊರಳಿಸಿ ತಿನ್ನಲು ಕೊಡಿ. ಜೋನಿ ಬೆಲ್ಲ ಇಲ್ಲದಿದ್ದರೆ, ಸಾಧಾರಣ ಬೆಲ್ಲ ಕರಗಿಸಿ ಹಾಕಬಹುದು (ಪಾಕ ಮಾಡಿ ಅಲ್ಲ) ಬೆಲ್ಲ ಹಾಕಿರುವುದರಿಂದ ಲಡ್ಡುವಿನ ಬಣ್ಣ ಕಪ್ಪಾಗಿದೆ!

   

ಕಾಲಾ ಜಾಮೂನ್ ಅಥವಾ ಡೈ ಜಾಮೂನ್ ಇರಬಹುದು ಎಂದುಕೊಳ್ಳಬೇಡಿ, ಖಂಡಿತಾ ಮಾವಿನ ಲಡ್ಡು ನೇ!!! Taste, texture ಸ್ವಲ್ಪ ಪೇಡಾ ತರಹ ಇರುತ್ತೆ, ಮಾಡುವುದು ಬಹಳ ಸುಲಭ, 20 ನಿಮಿಷದಲ್ಲಿ ಮಾಡಬಹುದು, ಮಾಡಿದ ದಿನವೇ ತಿನ್ನಬೇಕು, ಹಣ್ಣು ಹಾಕಿರುವುದರಿಂದ ಬೇಗನೆ ಹಾಳಾಗುತ್ತದೆ, ರುಚಿ ಮಾತ್ರ ಅದ್ಭುತ!!! ಒಮ್ಮೆ ಮಾಡಿ ನೋಡಿ.

ಧನ್ಯವಾದಗಳು.

Leave a Reply

Your email address will not be published.