ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು 🎊🎊🎊🎉🎉🎉💐💐💐
GODHI HALWA ಗೋಧಿ ಹಲ್ವಾ
ಗೋಧಿ ಹಿಟ್ಟಿನಿಂದ ಸುಲಭವಾಗಿ ಮಾಡಬಹುದಾದ ಹಲ್ವಾ ರೆಸಿಪಿ ಇಲ್ಲಿದೆ:-
ಒಂದು ಅಳತೆ ಗೋಧಿ ಹಿಟ್ಟಿಗೆ ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ ನಾಲ್ಕು ಅಳತೆ ನೀರು ಹಾಕಿ ಎರಡು ಗಂಟೆ ನೆನೆಸಿ, ನಂತರ ಚೆನ್ನಾಗಿ ಕೈಯಿಂದ ಕಿವುಚಿ ಗೋಧಿ ಹಾಲು ಬಂದ ಮೇಲೆ ಅದನ್ನು ಜರಡಿ ಹಿಡಿದು ಗಟ್ಟಿ ಭಾಗವನ್ನು ತೆಗೆದು ಹಾಕಿ ತಿಳಿ ಭಾಗವನ್ನು ತೆಗೆದಿಡಿ.


ಒಂದು ಅಳತೆ ಬೆಲ್ಲ ಪುಡಿ ಮಾಡಿ ಅದು ಮುಳುಗುವಷ್ಟು ನೀರು ಹಾಕಿ ಬೆಲ್ಲ ಕರಗಿದ ಮೇಲೆ ಸೋಸಿ ಬೆಲ್ಲದ ನೀರು ಸೇರಿಸಿ ಗೋಧಿ ಮಿಶ್ರಣವನ್ನು ಗಂಟಿಲ್ಲದ ಹಾಗೆ ಕಲೆಸಿ, ಗಟ್ಟಿ ತಳದ ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ, ಕೈ ಬಿಡದಂತೆ ಗೋಧಿ ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೆ ಕಲೆಸುತ್ತಿರಿ.





ಕೈ ಬಿಟ್ಟರೆ ಗಂಟಾಗುವುದು. ಮಿಶ್ರಣ ಗಟ್ಟಿ ಆದ ಮೇಲೆ ಎರಡು ಚಮಚ ತುಪ್ಪ, ಏಲಕ್ಕಿ ಪುಡಿ, ಸಣ್ಣಗೆ ಹೆಚ್ಚಿದ ಗೋಡಂಬಿ ಬಾದಾಮಿ ಹಾಕಿ ಚೆನ್ನಾಗಿ ಕಲೆಸಿ ತುಪ್ಪ ಸವರಿದ ತಟ್ಟೆಗೆ ಸುರಿದು ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿದರೆ, ಬಾಯಲ್ಲಿಟ್ಟರೆ ಕರಗುವ ರುಚಿಯಾದ ಗೋಧಿ ಹಲ್ವಾ ಸಿದ್ಧ.
ನಿಮಗೆ ಸಮಯ ಇದ್ದಲ್ಲಿ ಗೋಧಿ ಅಥವಾ ಗೋಧಿ ನುಚ್ಚು ರಾತ್ರಿ ನೆನೆಸಿ ನೆನೆಸಿ ರುಬ್ಬಿ ಹಾಲು ತೆಗೆದು ಮಾಡಬಹುದು.

ಧನ್ಯವಾದಗಳು 🙏🙏🙏
