DAHI BENDI ದಹಿ ಬೆಂಡಿ
ಬೆಂಡೆಕಾಯಿಯಿಂದ ಮಾಡಬಹುದಾದ ರುಚಿಯಾದ, ಸುಲಭವಾದ ರೆಸಿಪಿ ಇಲ್ಲಿದೆ. ರುಬ್ಬುವ, ಪುಡಿ ಮಾಡುವ ಗೋಜಿಲ್ಲ. ಫಟಾಫಟ್ ಮಾಡಬಹುದು!
ಮಾಡುವ ವಿಧಾನ:-
ಎಳೆಯದಾದ ಅರ್ಧ ಕೇಜಿ ಬೆಂಡೆಕಾಯಿ ಒಂದು ಇಂಚು ಅಳತೆಗೆ ಹೆಚ್ಚಿ ಹುರಿದಿಡಿ / ಕಾದ ಎಣ್ಣೆಯಲ್ಲಿ ಕರಿದಿಡಿ. ನಾನು ಎಣ್ಣೆಯಲ್ಲಿ ಕರಿದು ಹಾಕಿದ್ದೇನೆ. ತೀರ ಕೆಂಪಗೆ ಗರಿ ಗರಿಯಾಗಿ ಮಾಡದೆ ಬೆಂಡೆಕಾಯಿ ಸ್ವಲ್ಪ ಬೆಂದ ತಕ್ಷಣ ತೆಗೆಯಬೇಕು.

ಒಂದು ಈರುಳ್ಳಿ, ಸ್ವಲ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.
ಅರ್ಧ ಬಟ್ಟಲು ತಾಜಾ ಗಟ್ಟಿಯಾದ ಮೊಸರು ಕಡೆದು ಅದಕ್ಕೆ ಒಂದು ಚಮಚ ಖಾರದ ಪುಡಿ, ಅರ್ಧ ಚಮಚ ಜೀರಿಗೆ ಪುಡಿ, ಅರ್ಧ ಚಮಚ ಚಾಟ್ ಮಸಾಲಾ, ಅರ್ಧ ಚಮಚ ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಡಿ.

ಬಾಣಲೆಯಲ್ಲಿ ಎರಡು ಚಮಚ ಎಣ್ಣೆ / ತುಪ್ಪ ಹಾಕಿ, ಜೀರಿಗೆ ಈರುಳ್ಳಿ ಹಾಕಿ ಬಾಡಿಸಿ, ಅರ್ಧ ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್ ಹಾಕಿ ಹಸಿ ವಾಸನೆ ಹೋದ ನಂತರ ಮಿಶ್ರ ಮಾಡಿದ ಮೊಸರು ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಬಿಸಿ ಮಾಡಿ, ನಂತರ ಹುರಿದಿಟ್ಟ ಬೆಂಡೆಕಾಯಿ ಹಾಕಿ ಕಡಿಮೆ ಉರಿಯಲ್ಲಿ ಎಣ್ಣೆ ಮೇಲೆ ತೇಲುವರೆಗೆ ಕುದಿಸಿ ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿದರೆ ಬಾಯಲ್ಲಿ ನೀರೂರೀಸುವ ದಹಿ ಬೆಂಡಿ ಸವಿಯಲು ಸಿದ್ಧ !

ಮೊಸರು ತಾಜಾ ಉಪಯೋಗಿಸಬೇಕು. ಹುಳಿ ಬಂದ ಮೊಸರು ಹಾಕಿದರೆ ರುಚಿ ಚೆನ್ನಾಗಿರುವುದಿಲ್ಲ.

ಧನ್ಯವಾದಗಳು 🙏🙏🙏
