ಕೆಲವು ತರಕಾರಿಗಳನ್ನು ಹಸಿಯಾಗೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು! ಹಾಗೆ ಮೊಳಕೆ ಕಾಳು ಸಹ! ಇದರೆಡನ್ನು ಸೇರಿಸಿ ಮಾಡುವ ಆರೋಗ್ಯಕರವಾದ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ :-
1 ಲೋಟ ಹೆಸರು ಕಾಳು ತೊಳೆದು ನೆನೆಸಿ ನೀರು ಸೋರಿ ಹಾಕಿ ಬಟ್ಟೆಯಲ್ಲಿ ಕಟ್ಟಿ ಮೊಳಕೆ ಬರಲು ಬಿಡಿ.

1 ಸೌತೇ ಕಾಯಿ ಕಹಿ, ಸಿಪ್ಪೆ ತೆಗೆದು ಎರಡು ಇಂಚು ಉದ್ದದ ತುಂಡುಗಳನ್ನಾಗಿ ಕತ್ತರಿಸಿ ಒಳಗಿನ ಭಾಗವನ್ನು ಎಚ್ಚರಿಕೆಯಿಂದ ತೆಗೆದಿಡಿ. ಅಂದರೆ ಅದು ಲೋಟದ ಆಕಾರದಲ್ಲಿ ಇರುವಂತೆ ನೋಡಿಕೊಳ್ಳಿ.
ಇದೇ ತರಹ ಟೋಮೇಟೋ ಮಧ್ಯದಲ್ಲಿ ಕತ್ತರಿಸಿ ಒಳಗಿನ ಭಾಗ ತೆಗೆದಿಡಿ.
1 ಕ್ಯಾರೆಟ್ ಸಿಪ್ಪೆ ತೆಗೆದು ತುರಿದಿಡಿ. 1/4 ಭಾಗದಷ್ಟು ಸೌತೇಕಾಯಿ, 1 ಟೋಮೇಟೋ ಸಣ್ಣಗೆ ಹೆಚ್ಚಿಡಿ. ಸ್ವಲ್ಪ ದಾಳಿಂಬೆ ಕಾಳು ಬಿಡಿಸಿಡಿ.
1 ಹಿಡಿ ಪುದೀನ, 1 ಹಿಡಿ ಕೊತ್ತಂಬರಿ ಸೊಪ್ಪು, 2 ಹಸಿ ಮೆಣಸಿನಕಾಯಿ, ಚೂರು ಶುಂಠಿ, 1/2 ಹೋಳು ನಿಂಬೆ ರಸ, ಉಪ್ಪು ಹಾಕಿ ನುಣ್ಣಗೆ ರುಬ್ಬಿ ಹಸಿರು ಚಟ್ನಿ ಮಾಡಿಡಿ.

ಹಸಿ ಕರ್ಜೂರ ನೆನೆಸಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಸಿಹಿ ಚಟ್ನಿ ಮಾಡಿಡಿ.

ಮೊಳಕೆ ಹೆಸರು ಕಾಳಿಗೆ ಹೆಚ್ಚಿದ ಸೌತೆಕಾಯಿ, ಟೋಮೇಟೋ, ದಾಳಿಂಬೆ, ಕ್ಯಾರೆಟ್ ತುರಿ, ಕೊತ್ತಂಬರಿ ಸೊಪ್ಪು, 1/2 ಚಮಚ ಖಾರದ ಪುಡಿ, ಉಪ್ಪು, 1 ಚಮಚ ಹಸಿರು ಚಟ್ನಿ, 1 ಚಮಚ ಸಿಹಿ ಚಟ್ನಿ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲೆಸಿ, ಸೌತೆಕಾಯಿ ಮತ್ತು ಟೋಮೇಟೋ ಕಪ್ ಗಳಲ್ಲಿ ತುಂಬಿ ಸವಿಯಿರಿ!
ಈ ರೀತಿ ನಾಲ್ಕು ಕಪ್ ತಿಂದರೆ ಹೊಟ್ಟೆ ತುಂಬಿ ಹೋಗುತ್ತದೆ! ಆರೋಗ್ಯಕ್ಕೆ ಒಳ್ಳೆಯದು ಕೂಡ!
ಧನ್ಯವಾದಗಳು ![]()
![]()
![]()