ಉಪಹಾರ

PALAK CHOLE ಪಾಲಾಕ್ ಚೋಲೆ

ಬೆಳಿಗ್ಗೆಯ ತಿಂಡಿಗೆ ಪೂರಿ, ಚಪಾತಿಯೊಂದಿಗೆ ಸುಲಭವಾಗಿ, ರುಚಿಯಾಗಿ ಮಾಡಬಹುದಾದ ಇನ್ನೊಂದು ರೆಸಿಪಿ ಇಲ್ಲಿದೆ!

ಪೂರ್ವ ತಯಾರಿ :- 10 ನಿಮಿಷ
ಕುಕಿಂಗ್ ಸಮಯ :- 10 ನಿಮಿಷ

ಬೇಕಾಗುವ ಸಾಮಗ್ರಿಗಳು

ಕಾಬೂಲ್ ಕಡಲೇ ಕಾಳು – 1/4 ಕೇಜಿ
ಪಾಲಾಕ್ ಸೊಪ್ಪು – 4 ಕಟ್ಟು
ಟೋಮೇಟೋ – 4
ಈರುಳ್ಳಿ – 2
ಗೋಡಂಬಿ – 10
ಖಾರಾದ ಪುಡಿ – 1 ಚಮಚ
ಚೋಲೆ ಮಸಾಲ – 1 ಚಮಚ
ಜಿಂಜರ್ ಗಾರ್ಲಿಕ್ ಪೇಸ್ಟ್ – 1 ಚಮಚ
ಗರಂ ಮಸಾಲ – 1/2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – 2 ಟೇಬಲ್ ಚಮಚ
ಜೀರಿಗೆ – 1 ಟೀ ಚಮಚ
ಅರಿಷಿಣ – 1/2 ಟೀ ಚಮಚ
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ :-

ಕಾಬೂಲ್ ಕಡಲೇ ಕಾಳನ್ನು ರಾತ್ರಿ ಪೂರ ನೆನೆಸಿ ಬೆಳಿಗ್ಗೆ ಬೇಯಿಸಿಡಿ.

ಟೋಮೇಟೋ ಹಣ್ಣನ್ನು ಬಿಸಿ ನೀರಿಗೆ ಹಾಕಿ, ಸಿಪ್ಪೆ ತೆಗೆದು ಗೋಡಂಬಿ ಜೊತೆಗೆ ರುಬ್ಬಿಡಿ.

ಈರುಳ್ಳಿ, ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿಡಿ.

ಪಾಲಾಕ್ ಸೊಪ್ಪು ಬಿಡಿಸಿ ತೊಳೆದು ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ ಎಣ್ಣೆ ಹಾಕಿ ಜೀರಿಗೆ, ಅರಿಷಿಣ, ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ಹೆಚ್ಚಿದ ಪಾಲಾಕ್ ಸೊಪ್ಪು ಹಾಕಿ ಬಾಡಿಸಿ. ನಂತರ ಜಿಂಜರ್ ಗಾರ್ಲಿಕ್ ಪೇಸ್ಟ್, ಚೋಲೆ ಮಸಾಲ, ಖಾರದ ಪುಡಿ, ಉಪ್ಪು, ರುಬ್ಬಿದ ಟೋಮೇಟೋ ಮಿಶ್ರಣ ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಬಾಡಿಸಿ.

ಕೊನೆಯಲ್ಲಿ ಬೇಯಿಸಿದ ಕಡಲೇ ಕಾಳು, ಸ್ವಲ್ಪ ನೀರು ಹಾಕಿ ಕುದಿಯಲು ಇಡಿ.

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಪಾಲಾಕ್ ಚೋಲೆ ಸವಿಯಲು ಸಿದ್ಧ!

ಧನ್ಯವಾದಗಳು

Leave a Reply

Your email address will not be published.