Tindi Tinisu ಸಾಂಬಾರು ಮತ್ತು ಪಲ್ಯಗಳು

SOUTHEKAYI PALYA ಸೌತೇಕಾಯಿ ಪಲ್ಯ

ಸೌತೇಕಾಯಿ ಎಲ್ಲರ ಮೆಚ್ಚಿನ ತರಕಾರಿ. ಇದರ ರುಚಿಯಾದ ಪಲ್ಯ ಮಾಡುವ ರೆಸಿಪಿ ಇಲ್ಲಿದೆ! ಸಾಧಾರಣವಾಗಿ ಉತ್ತರ ಕರ್ನಾಟಕದ ಹೋಟೆಲ್ ಗಳಲ್ಲಿ ಈ ಪಲ್ಯ ಬಡಿಸುತ್ತಾರೆ.

ಮಾಡುವ ವಿಧಾನ :-

ಒಂದು ಸೌತೆಕಾಯಿ ತೊಳೆದು ಕಹಿ, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ.

ಒಂದು ಈರುಳ್ಳಿ ಸಣ್ಣಗೆ ಹೆಚ್ಚಿಡಿ.

ಸ್ವಲ್ಪ ಕೊತ್ತಂಬರಿ, ಕರಿಬೇವು ಸಣ್ಣಗೆ ಹೆಚ್ಚಿಡಿ.

2 ಚಮಚ ಹುಚ್ಚೆಳ್ಳು ಹುರಿದು ಪುಡಿ ಮಾಡಿಡಿ.

4 ಹಸ ಮೆಣಸಿನಕಾಯಿ ಸಣ್ಣಗೆ ಹೆಚ್ಚಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು, ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ.

ನಂತರ ಹೆಚ್ಚಿದ ಸೌತೆಕಾಯಿ, ಉಪ್ಪು ಹಾಕಿ ಕಡಿಮೆ ಉರಿಯಲ್ಲಿ ಸೌತೇಕಾಯಿ ಮೆತ್ತಗಾಗುವವರೆಗೆ ಬೇಯಿಸಿ.

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಹುಚ್ಚೆಳ್ಳು ಪುಡಿ, 4 ಚಮಚ ಕಾಯಿ ತುರಿ ( Optional ), ಸ್ವಲ್ಪ ನಿಂಬೆ ರಸ ಹಾಕಿ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿ.

ಈ ಪಲ್ಯ ಚಪಾತಿ, ಜೋಳದ ರೊಟ್ಟಿ ಜೊತೆಗೆ ತುಂಬಾ ಚೆನ್ನಾಗಿರುತ್ತದೆ.

ಧನ್ಯವಾದಗಳು

Leave a Reply

Your email address will not be published.