ಬೇಸನ್ ಲಡ್ಡು ಜನಪ್ರಿಯ ಸಿಹಿ. ಸಾಮಾನ್ಯವಾಗಿ ಎಲ್ಲರೂ ಸಕ್ಕರೆ ಹಾಕಿ ಮಾಡುವುದು! ಒಂದು ಸಲ ಬೆಲ್ಲ ಹಾಕಿ ಮಾಡಿ ನೋಡಿ! ಖಂಡಿತಾ ಇನ್ನು ಮುಂದೆ ಯಾವಾಗ ಮಾಡಿದರೂ ಬೆಲ್ಲ ಹಾಕಿಯೇ ಮಾಡ್ತೀರ! ಅಷ್ಟು ರುಚಿಕರ, ಆರೋಗ್ಯಕರ. ಮಾಡುವುದು ಕೂಡ ಬಹಳ ಸುಲಭ!
ಮಾಡುವ ವಿಧಾನ:-
1/2 ಅಥವಾ 3/4 ಅಳತೆ ಬೆಲ್ಲ ಪುಡಿ ಮಾಡಿಡಿ. ಜೊತೆಗೆ 4 ಏಲಕ್ಕಿ ಸಿಪ್ಪೆ ತೆಗೆದು ಪುಡಿ ಮಾಡಲು ಹಾಕಿ. (ಬೆಲ್ಲ ಪುಡಿ ಮಾಡಿದ ಮೇಲೆ ಅಳತೆ ಮಾಡಿ). ಸಿಹಿ ನಿಮ್ಮ ರುಚಿಗೆ ತಕ್ಕಷ್ಟು ಹಾಕಬಹುದು.

ಸ್ವಲ್ಪ ಗೋಡಂಬಿ ತುಪ್ಪದಲ್ಲಿ ಹುರಿದಿಡಿ.
1 ಅಳತೆ ಕಡಲೇ ಹಿಟ್ಟನ್ನು ತುಪ್ಪ ಹಾಕದೆ, ದಪ್ಪ ತಳದ ಬಾಣಲೆಯಲ್ಲಿ ಹಾಕಿ ಕಡಿಮೆ ಉರಿಯಲ್ಲಿ ಕೆಂಪಗೆ ಘಮ್ ಎಂದು ವಾಸನೆ ಬರುವವರೆಗೆ ಹುರಿದಿಡಿ. ಹೆಚ್ಚು ಕಡಿಮೆ 8 ರಿಂದ 10 ನಿಮಿಷ ಹುರಿಯಬೇಕು.

ಚಿಕ್ಕ ಬಾಣಲೆಯಲ್ಲಿ 1/2 ಅಳತೆ ತುಪ್ಪ ಕರಗಲು ಇಡಿ.
ಹುರಿದ ಕಡಲೇ ಹಿಟ್ಟನ್ನು ಒಲೆಯಿಂದ ತೆಗೆದು, ಬೆಲ್ಲದ ಪುಡಿ, ಹುರಿದ Dry fruits, ತುಪ್ಪ ಹಾಕಿ ಚೆನ್ನಾಗಿ ಕಲೆಸಿ.
ಸ್ವಲ್ಪ ಬೆಚ್ಚಗೆ ಆದ ಮೇಲೆ ನಿಮಗೆ ಬೇಕಾದ ಅಳತೆಯ ಉಂಡೆ ಮಾಡಿಡಿ.
ಧನ್ಯವಾದಗಳು![]()
![]()
![]()