ಸಾಂಬಾರು ಮತ್ತು ಪಲ್ಯಗಳು

MIX VEG HANDI ಮಿಕ್ಸ್ ವೆಜ್ ಹಂಡಿ

ನಿಮಗೆ ಇಷ್ಟವಾದ ತರಕಾರಿಗಳನ್ನು ಹಾಕಿ ಮಾಡಬಹುದಾದ ರುಚಿಯಾದ ರೆಸಿಪಿ.

ಮಾಡುವ ವಿಧಾನ :-

ಮೂರು ಟೋಮೇಟೋ ಬಿಸಿ ನೀರಿನಲ್ಲಿ ಹಾಕಿ ಸಿಪ್ಪೆ ತೆಗೆದಿಡಿ. 8 ಗೋಡಂಬಿ ಬಿಸಿ ನೀರಿನಲ್ಲಿ ಹಾಕಿ ನೆನೆಸಿ ಟೋಮೇಟೋ ಜೊತೆಗೆ ರುಬ್ಬಿಡಿ.

ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ, ಬಟಾಣಿ, ಆಲೂಗೆಡ್ಡೆ, ಗೋಭಿ, ಕ್ಯಾಪ್ಸಿಕಮ್ ತೊಳೆದು ಸಣ್ಣಗೆ ಹೆಚ್ಚಿಡಿ.

ದಪ್ಪ ತಳದ ಬಾಣಲೆಯಲ್ಲಿ 4 ಚಮಚ ಬೆಣ್ಣೆ/ ಎಣ್ಣೆ ಹಾಕಿ ಜೀರಿಗೆ, 1 ಚಮಚ ಜಿಂಜರ್ ಗಾರ್ಲಿಕ್ ಪೇಸ್ಟ್, ಚಿಟಿಕೆ ಅರಿಷಿಣ ಹಾಕಿ ಸ್ವಲ್ಪ ಬಾಡಿಸಿ. ನಂತರ ರುಬ್ಬಿದ ಮಿಶ್ರಣವನ್ನು ಹಾಕಿ, 1 ಚಮಚ ಖಾರದ ಪುಡಿ, 1/2 ಚಮಚ ಧನಿಯ ಪುಡಿ, 1/2 ಚಮಚ ಗರಂ ಮಸಾಲ, ಉಪ್ಪು ಹಾಕಿ ಕಲೆಸಿ ಕಡಿಮೆ ಉರಿಯಲ್ಲಿ ಹುರಿದ ಮಿಶ್ರಣದಿಂದ ಎಣ್ಣೆ ಹೊರಬರುವವರೆಗೆ ಬಾಡಿಸಿ. ನಂತರ ಹೆಚ್ಚಿದ ತರಕಾರಿಗಳು, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲೆಸಿ. ಒಂದು ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಎಲ್ಲಾ ತರಕಾರಿಗಳು ಬೇಯುವವರೆಗೆ ಬೇಯಿಸಿ.

ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು, 2 ದೊಡ್ಡ ಚಮಚ ಫ್ರೆಶ್ ಕ್ರೀಮ್, ಸಣ್ಣಗೆ ಹೆಚ್ಚಿದ 50 ಗ್ರಾಂನಷ್ಟು ಪನ್ನೀರ್,1/2 ನಿಂಬೆ ಹಣ್ಣಿನ ರಸ ಹಾಕಿ ಕಲೆಸಿದರೆ, ರುಚಿಯಾದ, ಬಾಯಲ್ಲಿ ನೀರೂರಿಸುವ ಮಿಕ್ಸ್ ವೆಜ್ ಹಂಡಿ ಸವಿಯಲು ಸಿದ್ಧ!

ಪನ್ನೀರ್ ಮತ್ತು ನಿಂಬೆ ರಸ Optional. ಬೇಕಾದರೆ ಹಾಕಿಕೊಳ್ಳಬಹುದು.

ಧನ್ಯವಾದಗಳು

Leave a Reply

Your email address will not be published.