ಸಾಂಬಾರು ಮತ್ತು ಪಲ್ಯಗಳು

HIDUKIDA BELE KURMA ಹಿದುಕಿದ ಬೇಳೆ ಕುರ್ಮ

HIDUKIDA BELE KURMA  ಹಿದುಕಿದ ಬೇಳೆ ಕುರ್ಮ

ಅವರೆ ಕಾಯಿಯ ಇನ್ನೊಂದು ಹೊಸ ರುಚಿ! ಬಾಯಲ್ಲಿ ನೀರೂರಿಸುವ, ಸುಲಭವಾಗಿ ಮಾಡಬಹುದಾದ ರೆಸಿಪಿ.

ಮಾಡುವ ವಿಧಾನ :-

1 ಲೋಟ ಹಿದುಕಿದ ಬೇಳೆ ತೊಳೆದು ಉಪ್ಪು ಹಾಕಿ ಒಂದು ವಿಷಲ್ ಕೂಗಿಸಿ ನೀರು ಸೋರಿ ಹಾಕಿಡಿ. ಅಥವಾ ತೆರೆದ ಬಾಣಲೆಯಲ್ಲಿ ಹಾಗೇ ಬೇಯಿಸಬಹುದು ಕಾಳು Over cook ಮಾಡಬೇಡಿ.

2 ಟೇಬಲ್ ಚಮಚ ಗಸಗಸೆ, 8 ಗೋಡಂಬಿ ಬಿಸಿ ನೀರಿನಲ್ಲಿ ನೆನೆಸಿ ನುಣ್ಣಗೆ ರುಬ್ಬಿಡಿ.

4 ದೊಡ್ಡ ಚಮಚ ಕಾಯಿ ತುರಿದಿಡಿ.

1 ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಅರ್ಧ ಇಂಚು ಶುಂಠಿ, ಬೆಳ್ಳುಳ್ಳಿ 6 ಎಸಳು, 1 ಇಂಚು ಚಕ್ಕೆ, 4 ಲವಂಗ, ರುಬ್ಬಿದ ಗಸಗಸೆ, 6 ಹಸಿ ಮೆಣಸಿನಕಾಯಿ ಇಷ್ಟನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದು ನಂತರ ಕಾಯಿ ತುರಿ, ಗಸಗಸೆ ಮಿಶ್ರಣ, ಸ್ವಲ್ಪ ಕೊತ್ತಂಬರಿ ಸೊಪ್ಪು ಜೊತೆಗೆ ನುಣ್ಣಗೆ ರುಬ್ಬಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಜೀರಿಗೆ ಹಾಕಿ ನಂತರ ರುಬ್ಬಿದ ಮಿಶ್ರಣವನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ ಸ್ವಲ್ಪ ಹುರಿದು, ನಂತರ ಬೇಯಿಸಿದ ಅವರೆ ಕಾಳು, ಉಪ್ಪು ಹಾಕಿ ಕುದಿಸಿ ಕೊನೆಯಲ್ಲಿ ಸ್ವಲ್ಪ ನಿಂಬೆ ರಸ ( ಬೇಕಾದರೆ ) ಹಾಕಿದರೆ ಬಾಯಲ್ಲಿ ನೀರೂರಿಸುವ ಹಿದುಕಿದ ಬೇಳೆ ಕುರ್ಮ ಸವಿಯಲು ಸಿದ್ಧ!

ಈ ಕುರ್ಮ ಪೂರಿ, ಚಪಾತಿ, ದೋಸೆ ಜೊತೆಗೆ ಒಳ್ಳೆಯ ಕಾಂಬಿನೇಶನ್!

ಧನ್ಯವಾದಗಳು 🙏🙏🙏

Leave a Reply

Your email address will not be published.