Oota ಉಪಹಾರ

SPICY PANEER & PANEER PARATHA ಸ್ಪೈಸಿ ಪನ್ನೀರ್ & ಪನ್ನೀರ್ ಪರಾಟ

ಸಾಧಾರಣವಾಗಿ ಪನ್ನೀರ್ ಸಪ್ಪೆಯಾಗಿರುತ್ತದೆ. ಇದರಿಂದ ಸಿಹಿ ಅಥವಾ ಖಾರಾ ಯಾವುದಾದರೂ ನಿಮಗಿಷ್ಟವಾದ ಆಹಾರ ಮಾಡಬಹುದು. ಇಲ್ಲಿದೆ ಸ್ಪೈಸಿ ಪನ್ನೀರ್ ಮಾಡುವ ರೆಸಿಪಿ. ಇದರಿಂದ ನೀವು ಖಾರಾ ಪದಾರ್ಥಗಳನ್ನು ಮಾತ್ರ ಮಾಡಬಹುದು.

ಮಾಡುವ ವಿಧಾನ :-

1/2 ಲೀಟರ್ ಗಟ್ಟಿಯಾದ ಹಾಲು ಕಾಯಲು ಇಡಿ. ಹಾಲು ಉಕ್ಕಲು ಆರಂಭವಾದಾಗ ಅದಕ್ಕೆ 2 ದೊಡ್ಡ ಚಮಚ ತಾಜಾ ಮೊಸರು ಹಾಕಿ ಉರಿ ಕಡಿಮೆ ಮಾಡಿ ಚಮಚದಿಂದ ಕಲೆಸುತ್ತಲೇ ಇರಿ. ಹಾಲು ಸಂಪೂರ್ಣವಾಗಿ ಒಡೆದು ಗಟ್ಟಿಯಾದ ಮೇಲೆ ಅದಕ್ಕೆ 1 ಟೀ ಚಮಚ ಉಪ್ಪು, 1/2 ಚಮಚ ಹುರಿದು ತರಿಯಾಗಿ ಪುಡಿ ಮಾಡಿದ ಜೀರಿಗೆ, 1/2 ಚಮಚ ಹುರಿದು ತರಿ ತರಿಯಾಗಿ ಪುಡಿ ಮಾಡಿದ ಕಪ್ಪು ಮೆಣಸು ಹಾಕಿ ಚೆನ್ನಾಗಿ ಕಲೆಸಿ ಒಲೆಯಿಂದ ಇಳಿಸಿ.

ಒಡೆದ ಹಾಲನ್ನು ಬಟ್ಟೆಯಲ್ಲಿ ಸೋರಿ ಹಾಕಿ ಒಂದು ಗಂಟೆಯ ನಂತರ ಗಂಟು ಕಟ್ಟಿ ಅದರ ಮೇಲೆ ಸ್ವಲ್ಪ ಭಾರವಾದ ಕಲ್ಲಿಟ್ಟು, ನಂತರ ಒಂದು ಚಿಕ್ಕ ಚಮಚ ಕಾರ್ನ್ ಫ್ಲೋರ್ ಹಾಕಿ ಮೃದುವಾಗಿ ಕಲೆಸಿ ಒಂದು ತಟ್ಟೆಯಲ್ಲಿ ಹರಡಿ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು ಬೇಕಾದಾಗ ಉಪಯೋಗಿಸಬಹುದು.

 

ಹೀಗೆ ಮಾಡಿದ ಪನ್ನೀರ್ ಅನ್ನು ಪಲಾವ್, ಬಿರಿರಾನಿ, ಗ್ರೇವಿ, ಪರಾಟಗಳಲ್ಲಿ ಉಪಯೋಗಿಸಬಹುದು.

ಪನ್ನೀರ್ ಪರಾಟ ಮಾಡುವ ವಿಧಾನ :-

 

ಸ್ಪೈಸಿ ಪನ್ನೀರ್ 100 ಗ್ರಾಂನಷ್ಟು ಪುಡಿ ಮಾಡಿಡಿ. ಅದಕ್ಕೆ 1/2 ಚಮಚ ಖಾರದ ಪುಡಿ, ಚಿಟಿಕೆ ಉಪ್ಪು, ಸ್ವಲ್ಪ ಹೆಚ್ಚಿದ ಕೊತ್ತಂಬರಿ ಸೊಪ್ಪು, 1/2 ಚಮಚ ಚಾಟ್ ಮಸಾಲ, 1/2 ಚಮಚ ಆಮ್ ಚೂರ್ ಪುಡಿ ಹಾಕಿ ಕಲೆಸಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಡಿ.

 

ಚಪಾತಿ ಲಟ್ಟಿಸಿ ಮಧ್ಯದಲ್ಲಿ ಪನ್ನೀರ್ ಉಂಡೆ ಇಟ್ಟು ಮಡಚಿ ಮೃದುವಾಗಿ ಲಟ್ಟಿಸಿ ಕಾದ ಕಾವಲಿಯ ಮೇಲೆ ಹಾಕಿ ಎರಡೂ ಕಡೆ ಬೇಯಿಸಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಪನ್ನೀರ್ ಪರಾಟ ಸವಿಯಲು ಸಿದ್ಧ!

ಧನ್ಯವಾದಗಳು

Leave a Reply

Your email address will not be published.