ಉಪಹಾರ

ULANDOGARE ಉಳಂದೋಗರೆ

ತಮಿಳುನಾಡು ಒಂದು ಸಾಂಪ್ರಾದಾಯಿಕ ಆಹಾರ. ತಮಿಳನಲ್ಲಿ ಉಳಂದು ಪರ್ಪು ಅಂದರೆ ಉದ್ದಿನ ಬೇಳೆ. ಉದ್ದಿನ ಬೇಳೆ ಹಾಕಿ ಮಾಡುವುದರಿಂದ ಈ ರೆಸಿಪಿಗೆ ಉಳಂದೋಗರೆ ಎಂದು ಹೆಸರು!

ಪೂರ್ವ ತಯಾರಿ :- 10 ನಿಮಿಷ

ಕುಕಿಂಗ್ ಸಮಯ :- 5 ನಿಮಿಷ

ಬೇಕಾಗುವ ಸಾಮಗ್ರಿಗಳು :-
ಅಕ್ಕಿ – 1/4 ಕೇಜಿ
ಉದ್ದಿನ ಬೇಳೆ – 1 ಟೇಬಲ್ ಚಮಚ
ತುಪ್ಪ – 2 ಟೇಬಲ್ ಚಮಚ
ಗೋಡಂಬಿ – 1 ಟೇಬಲ್ ಚಮಚ
ಇಂಗು – 1/2 ಟೀ ಚಮಚ
ಕರಿ ಬೇವು – 2 ಎಸಳು
ಒಣ ಕೊಬ್ಬರಿ ತುರಿ – 1 ಟೇಬಲ್ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಹಾಲು – 150 ಮಿ ಲೀ

ಮಾಡುವ ವಿಧಾನ :-

ಅಕ್ಕಿ ತೊಳೆದು ಉದುರುದುರಾಗಿ ಅನ್ನ ಮಾಡಿಡಿ.

ಕೊಬ್ಬರಿ ತುರಿದಿಡಿ.

ಬಾಣಲೆಯಲ್ಲಿ ತುಪ್ಪ ಹಾಕಿ ಉದ್ದಿನ ಬೇಳೆ, ಗೋಡಂಬಿ, ಇಂಗು, ಕರಿಬೇವು ಹಾಕಿ ಬಾಡಿಸಿ ಹಾಲು, ಉಪ್ಪು ಹಾಕಿ ಕಡಿಮೆ ಉರಿಯಲ್ಲಿ ಉದ್ದಿನ ಬೇಳೆ ಮೆತ್ತಗೆ ಆಗುವವರೆಗೆ ಬೇಯಿಸಿ.

ನಂತರ ಅನ್ನ ಹಾಕಿ ಕಲೆಸಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿದರೆ ರುಚಿಯಾದ, ಸುಲಭವಾಗಿ ಮಾಡಬಹುದಾದ ಉಳಂದೋಗರೆ ಸವಿಯಲು ಸಿದ್ಧ!

ಈ ಅನ್ನಕ್ಕೆ ಖಾರಾ ಮತ್ತು ಹುಳಿ ಹಾಕುವುದಿಲ್ಲ.

ಅದರ ಜೊತೆಗೆ ಹುಣಿಸೆ ಗೊಜ್ಜು ಮಾಡಿ ತಿನ್ನಬಹುದು.

 

ಹುಣಿಸೆ ಗೊಜ್ಜು ಮಾಡುವ ವಿಧಾನ :-

ನಿಂಬೆ ಹಣ್ಣು ಗಾತ್ರದ ಹುಣಿಸೆ ಹಣ್ಣು ತೊಳೆದು ನೆನೆಸಿ ರಸ ತೆಗೆದಿಡಿ.

ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಕರಿಬೇವು, ಇಂಗು ಹಾಕಿ ಹುಣಿಸೆ ರಸ, 2 ಚಮಚ ರಸಂ ಪುಡಿ, 1 ಚಮಚ ಖಾರದ ಪುಡಿ, ಉಪ್ಪು, ಚೂರು ಬೆಲ್ಲ ಹಾಕಿ ಕುದಿಸಿದರೆ ಹುಣಿಸೆ ಗೊಜ್ಜು ಸವಿಯಲು ಸಿದ್ಧ!

ಈ ಗೊಜ್ಜು ಪೊಂಗಲ್ ಜೊತೆಗೆ ಕೂಡ ತುಂಬಾ ಚೆನ್ನಾಗಿರುತ್ತದೆ!

ಧನ್ಯವಾದಗಳು

Leave a Reply

Your email address will not be published.