Kannada ಉಪಹಾರ

SABUDANA KICHADI ಸಾಬೂದಾನ ಕಿಚಡಿ

ಕಿಚಡಿ ಆರೋಗ್ಯಕರ ಆಹಾರ. ವಿಭಿನ್ನವಾದ ಕಿಚಡಿ ರೆಸಿಪಿ ನಿಮಗಾಗಿ!ಮಾಡುವ ವಿಧಾನ:-

2 ಬಟ್ಟಲು ಸಾಬುದಾನ ತೊಳೆದು ನೀರಿನಲ್ಲಿ 2 ಘಂಟೆ ನೆನೆಸಿಡಿ.

1 ಬಟ್ಟಲು ಹೆಸರು ಬೇಳೆಯನ್ನು ಕುಕ್ಕರಿನಲ್ಲಿ 1 ವಿಷಲ್ ಕೂಗಿಸಿಡಿ.

2 ಚಮಚ ಕಡಲೇ ಬೀಜ ಹುರಿದು ಸಿಪ್ಪೆ ತೆಗೆದು ಪುಡಿ ಮಾಡಿಡಿ.

2 ಚಮಚ ಕಾಯಿ ತುರಿದಿಡಿ.

  

ಬಾಣಲೆ/ಕುಕ್ಕರಿನಲ್ಲಿ 4 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಚಿಟಿಕೆ ಅರಿಶಿಣ, ಕರಿಬೇವು, ಹೆಚ್ಚಿದ ಶುಂಠಿ, (ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ optional) 5 ಹಸಿ ಮೆಣಸಿನ ಕಾಯಿ, ನೆಂದ ಸಾಬೂದಾನ ಹಾಕಿ, ಸ್ವಲ್ಪ ಹುರಿದು, ಬೆಂದ ಹೆಸರು ಬೇಳೆ, ಹುರಿದು ಪುಡಿ ಮಾಡಿದ ಶೇಂಗಾ ಪುಡಿ, ಸ್ವಲ್ಪ ನೀರು ಹಾಕಿ, ಸಾಬೂದಾನ ಬೆಂದ ಮೇಲೆ, ಉಪ್ಪು, ಕಾಯಿ ತುರಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಚಿಟಿಕೆ ಸಕ್ಕರೆ, ನಿಂಬೆ ರಸ, 1 ಚಮಚ ತುಪ್ಪ ಹಾಕಿ ಕಲೆಸಿ, ಬಿಸಿಯಾಗಿ ಮೊಸರು ಬಜ್ಜಿಯೊಂದಿಗೆ ಬಡಿಸಿ.

  

ಸುಲಭವಾಗಿ ಮತ್ತು ಬೇಗ ಮಾಡಬಹುದು.

ಧನ್ಯವಾದಗಳು.

Leave a Reply

Your email address will not be published.