ವರ್ಷ ಪೂರ ಎಲ್ಲಾ ಕಡೆ ಸಿಗುವ ಬಟಾಣಿಯ ರುಚಿಯಾದ ಪಲಾವ್ ಮಾಡುವ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ:-
1 ಲೋಟ ಬಾಸುಮತಿ ಅಕ್ಕಿ 30 ನಿಮಿಷ ನೆನೆಸಿಡಿ.
1 ಲೋಟ ಹಸಿ ಬಟಾಣಿ ಬಿಡಿಸಿ ತೊಳೆದಿಡಿ.
4 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.

1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ, 1 ಚಮಚ ಸೋಂಪು ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.

ಕುಕ್ಕರಿನಲ್ಲಿ 6 ಚಮಚ ಎಣ್ಣೆ ಹಾಕಿ, ಬಟಾಣಿ, ಹಸಿ ಮೆಣಸಿನಕಾಯಿ, 1 ಪಲಾವ್ ಎಲೆ ಹಾಕಿ ಹುರಿದು, ಪುಡಿ ಮಾಡಿದ ಮಸಾಲೆ, ಬಾಸುಮತಿ ಅಕ್ಕಿ, ಉಪ್ಪು ಹಾಕಿ ಸ್ವಲ್ಪ ಹುರಿದು 2 ಲೋಟ ನೀರು ಹಾಕಿ ಚೆನ್ನಾಗಿ ಕಲೆಸಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿದರೆ ರುಚಿಯಾದ ಗ್ರೀನ್ ಪೀಸ್ ಪಲಾವ್ ಸಿದ್ಧ!
ಈ ಪಲಾವ್ ಗೆ ನಾನು ಈರುಳ್ಳಿ, ಬೆಳ್ಳುಳ್ಳಿ ಹಾಕಿಲ್ಲ! ಬೇಕಾದರೆ ನೀವು ಹಾಕಿಕೊಳ್ಳಬಹುದು!
ಧನ್ಯವಾದಗಳು![]()
![]()
![]()