ಬೆಳಿಗ್ಗೆ ಮಾಡಿದ ಅನ್ನ ತುಂಬಾ ಮಿಕ್ಕಿದ್ದರೆ, ಚಿತ್ರಾನ್ನ ತಿನ್ನಲು ಬೇಸರವಾದರೆ, ರಾತ್ರಿ ಊಟಕ್ಕೆ ಹೀಗೆ ಮಾಡಿ ನೋಡಿ! ಮಿಕ್ಕ ಅನ್ನದಿಂದ ಬೇಕಾದರೂ ಮಾಡಬಹುದು ಅಥವಾ ಕೆಲವೊಮ್ಮೆ ಮಾಡಿದ ಅನ್ನ ಸ್ವಲ್ಪ ಮೆತ್ತಗೆ ಆದಾಗಲೂ ಮಾಡಬಹುದು!
ಮಾಡುವ ವಿಧಾನ :-
ಅನ್ನವನ್ನು ಸ್ವಲ್ಪ ಬಿಸಿ ಮಾಡಿ ಚೆನ್ನಾಗಿ Smash ಮಾಡಿಡಿ.
2 ಈರುಳ್ಳಿ ಸಣ್ಣಗೆ ಹೆಚ್ಚಿಡಿ.

ಸ್ವಲ್ಪ ಕೊತ್ತಂಬರಿ, ಕರಿಬೇವು, ಮೆಂತ್ಯ ಸೊಪ್ಪು ಹೆಚ್ಚಿಡಿ.
4 ಚಮಚ ಕಾಯಿ ತುರಿದಿಡಿ.
1 ಚಮಚ ಹಸಿ ಮೆಣಸಿನಕಾಯಿ ಪೇಸ್ಟ್ ಮಾಡಿಡಿ.
1 ಕ್ಯಾರೆಟ್ ಸಿಪ್ಪೆ ತೆಗೆದು ತುರಿದಿಡಿ.

Smash ಮಾಡಿದ ಅನ್ನಕ್ಕೆ ಹೆಚ್ಚಿದ ಈರುಳ್ಳಿ, ಸೊಪ್ಪು, ಕಾಯಿ ತುರಿ, ಹಸಿ ಮೆಣಸಿನಕಾಯಿ ಪೇಸ್ಟ್, ಅದಕ್ಕೆ ಹಿಡಿಸುವಷ್ಟು ಅಕ್ಕಿ ಹಿಟ್ಟು, 1 ಚಮಚ ಜೀರಿಗೆ, 1 ಚಮಚ ಬಿಳಿ ಎಳ್ಳು, ಚಿಟಿಕೆ ಇಂಗು,1 ಚಮಚ ಎಣ್ಣೆ, ಕ್ಯಾರೆಟ್ ತುರಿ, ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ. ನೀರು ಸ್ವಲ್ಪ ಬೇಕಾದರೆ ಸೇರಿಸಿ. ಅನ್ನದಲ್ಲಿರುವ ನೀರಿನಂಶವೇ ಸಾಕಾಗುವುದು!
ನಂತರ ತೆಳ್ಳಗೆ ರೊಟ್ಟಿ ತಟ್ಟಿ ಸ್ವಲ್ಪ ಎಣ್ಣೆ ಹಾಕಿ ತಟ್ಟೆ ಮುಚ್ಚಿ ಕಡಿಮೆ ಉರಿಯಲ್ಲಿ ಎರಡೂ ಕಡೆ ಬೇಯಿಸಿ, ನಿಮಗಿಷ್ಟವಾದ ಚಟ್ನಿಯೊಂದಿಗೆ ಸವಿಯಿರಿ!
ಧನ್ಯವಾದಗಳು ![]()
![]()
![]()