ಸಿಹಿ ತಿನಿಸುಗಳು

BREAD CRUMBS ಬ್ರೆಡ್ ಕ್ರಂಬ್ಸ್

ನಾವು ಸಾಧಾರಣವಾಗಿ ಕಟ್ಲೆಟ್, ರೋಲ್ಸ್, ಕಬಾಬ್ ಮಾಡುವಾಗ ಗರಿ ಗರಿಯಾಗಿ ಬರಲೆಂದು ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ ಕರಿಯುತ್ತೇವೆ.

ದೊಡ್ಡ ದೊಡ್ಡ ನಗರಗಳಲ್ಲಿ ರೆಡಿ ಮೇಡ್ ಬ್ರೆಡ್ ಕ್ರಂಬ್ಸ್ ಸಿಗುತ್ತದೆ! ಚಿಕ್ಕ ಚಿಕ್ಕ ಊರುಗಳಲ್ಲಿ ಸಿಗುವುದಿಲ್ಲ! ಅದಕ್ಕಾಗಿ ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ವಿಧಾನ ಇಲ್ಲಿದೆ ನೋಡಿ! Sandwich ಮಾಡುವಾಗ ಬ್ರೆಡ್ ನ ಅಂಚುಗಳನ್ನು ಕತ್ತರಿಸಿ ಕಸದ ಬುಟ್ಟಿಗೆ ಎಸೆಯುವ ಬದಲು ಹೀಗೆ ಮಾಡಿ ನೋಡಿ! ( ಸಾಲ್ಟ್ ಬ್ರೆಡ್ ಉಪಯೋಗಿಸಿದರೆ ಒಳ್ಳೆಯದು! )

ಮಾಡುವ ವಿಧಾನ :-

ಬ್ರೆಡ್ ನ ಅಂಚುಗಳನ್ನು ಕತ್ತರಿಸಿ ತೆಗೆದು ಒಂದು ತಟ್ಟೆಯಲ್ಲಿ ಹಾಕಿಡಿ.

ಕಾದ ಕಾವಲಿಯ ಮೇಲೆ ಹಾಕಿ ಕಡಿಮೆ ಉರಿಯಲ್ಲಿ ಆಗಾಗ ಕಲೆಸುತ್ತಾ ಮೂರ್ನಾಲ್ಕು ನಿಮಿಷ ಬೇಯಿಸಿ ಸಂಪೂರ್ಣವಾಗಿ ತಣ್ಣಗಾದ ಮೇಲೆ ಪುಡಿ ಮಾಡಿ Fridge ನಲ್ಲಿಟ್ಟು ಬೇಕಾದಾಗ ಉಪಯೋಗಿಸಬಹುದು!

ಇದನ್ನು Micro oven ನಲ್ಲಿ ಕೂಡ ಮಾಡಬಹುದು. Microwave safe ತಟ್ಟೆಯಲ್ಲಿ ಹರಡಿ, ಮೂರ್ನಾಲ್ಕು ನಿಮಿಷ ಆಗಾಗ ತಿರುಗಿಸುತ್ತಾ ತಣ್ಣಗಾದ ಮೇಲೆ ಪುಡಿ ಮಾಡಬಹುದು! ನಾನು Oven ನಲ್ಲಿಯೇ ಮಾಡಿರುವುದು!

ಧನ್ಯವಾದಗಳು

Leave a Reply

Your email address will not be published.