ಮಾವಿನ ಕಾಯಿಯ ರುಚಿಯಾದ ಗೊಜ್ಜಿನ ರೆಸಿಪಿ ಇಲ್ಲಿದೆ!
ಮಾಡುವ ವಿಧಾನ :-
ಒಂದು ತೋತಾಪುರಿ ಮಾವಿನ ಕಾಯಿ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಡಿ. ನಾನು ಹಾಕಿರುವುದು ದೋರೆ ಗಾಯಿ! ಅಂದರೆ ಕಾಯಿಯೂ ಅಲ್ಲದ ಹಣ್ಣು ಅಲ್ಲದ್ದು!
ಕಡಲೇ ಬೇಳೆ – 1 ಟೇಬಲ್ ಚಮಚ
ಉದ್ದಿನ ಬೇಳೆ – 1 ಟೀ ಚಮಚ
ಬಿಳಿ ಎಳ್ಳು – 2 ಟೀ ಚಮಚ
ಕರಿ ಮೆಣಸು – 1/4 ಟೀ ಚಮಚ
ಬ್ಯಾಡಗಿ ಮೆಣಸಿನಕಾಯಿ – 6 ರಿಂದ 8

ಮೇಲೆ ಹೇಳಿರುವ ಅಷ್ಟು ಸಾಮಗ್ರಿಗಳನ್ನು ಎಣ್ಣೆ ಹಾಕದೆ ಹುರಿದಿಡಿ. ಮೆಣಸಿನಕಾಯಿಗೆ ಮಾತ್ರ ಸ್ವಲ್ಪ ಎಣ್ಣೆ ಹಾಕಿ ಹುರಿದಿಡಿ.
ಹುರಿದ ಸಾಮಗ್ರಿಗಳನ್ನು 2 ಚಮಚ ಕಾಯಿ ತುರಿ, 2 ಚಮಚ ಒಣ ಕೊಬ್ಬರಿ ತುರಿ ಜೊತೆಗೆ ನುಣ್ಣಗೆ ರುಬ್ಬಿಡಿ.

ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಇಂಗು, ಚಿಟಿಕೆ ಅರಿಷಿಣ ಹಾಕಿ ನಂತರ ಹೆಚ್ಚಿದ ಮಾವಿನ ಕಾಯಿ ಹಾಕಿ ಸ್ವಲ್ಪ ಬಾಡಿಸಿ.
ಮಾವಿನ ಕಾಯಿ ಸ್ವಲ್ಪ ಬೆಂದ ಮೇಲೆ ರುಬ್ಬಿದ ಮಿಶ್ರಣ, ಉಪ್ಪು, ಸ್ವಲ್ಪ ನೀರು, ಚೂರು ಬೆಲ್ಲ ಹಾಕಿ ಕುದಿಸಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಮಾವಿನ ಕಾಯಿ ಗೊಜ್ಜು ಸಿದ್ಧ!
ಧನ್ಯವಾದಗಳು ![]()
![]()
![]()