ಸಾಂಬಾರು ಮತ್ತು ಪಲ್ಯಗಳು

HUNISE HANNINA PASTE ಹುಣಿಸೆ ಹಣ್ಣಿನ ಪೇಸ್ಟ್

ಪ್ರತಿ ದಿನ ಸಾರು, ಸಾಂಬಾರ್, ಗೊಜ್ಜು, ಚಟ್ನಿ ಮಾಡಲು ಬೇಕಾಗುವ ಹುಣಿಸೆ ಹಣ್ಣನ್ನು ತೊಳೆದು ನೆನೆಸಿ ರಸ ತೆಗೆದು ಹಾಕಬೇಕು. ಹೀಗೆ ಮಾಡಿ Freezer ನಲ್ಲಿಡಿ. ಬೇಕಾದಾಗ ತಕ್ಷಣ ಹಾಕಬಹುದು! ನೆನೆಸುವ, ಕಿವುಚುವ ರಗಳೆ ಇರೋದಿಲ್ಲ!

ಮಾಡುವ ವಿಧಾನ:-

ಹುಣಿಸೆ ಹಣ್ಣು ಸಿಪ್ಪೆ, ನಾರು, ಬೀಜ ತೆಗೆದು ಎರಡು ಮೂರು ಬಾರಿ ತೊಳೆದು ಹಣ್ಣು ಮುಳುಗುವಷ್ಟು ಬಿಸಿ ನೀರು ಹಾಕಿ ನಾಲ್ಕು ಗಂಟೆ ನೆನೆಸಿಡಿ.

ನೆಂದ ಹುಣಿಸೆ ಹಣ್ಣನ್ನು ಚೆನ್ನಾಗಿ ಕಿವುಚಿ ಜಾಲರಿಯಲ್ಲಿ ಸೋರಿ ಹಾಕಿ.

ಕಿವುಚಿದ ಹುಣಿಸೆ ಹಣ್ಣಿಗೆ ಬೇಕಾದರೆ ಇನ್ನು ಸ್ವಲ್ಪ ಬಿಸಿ ನೀರು ಹಾಕಿ ಮತ್ತೊಮ್ಮೆ ಕಿವುಚಿ ಗಟ್ಟಿಯಾದ ರಸ ತೆಗೆದಿಡಿ.

 

ದಪ್ಪ ತಳದ ಬಾಣಲೆ/ ಕುಕ್ಕರಿನಲ್ಲಿ ಹಾಕಿ ಕುದಿಯಲು ಇಡಿ. ದೊಡ್ಡ ಕುದಿ ಬಂದ ನಂತರ ಉರಿ ಮಧ್ಯಮ ಮಾಡಿ ಆಗಾಗ ಕಲೆಸುತ್ತಾ ತಟ್ಟೆ ಮುಚ್ಚಿ ಹುಣಿಸೆ ರಸ ಅದರ ಅರ್ಧದಷ್ಟು ಆಗಿ, Jam ಹದಕ್ಕೆ ಬಂದಾಗ ಒಲೆಯಿಂದ ಇಳಿಸಿ ತಣ್ಣಗಾದ ಮೇಲೆ ಡಬ್ಬದಲ್ಲಿ ಹಾಕಿ Freezer ನಲ್ಲಿಡಿ. ಬೇಕಾದಾಗ ಎಷ್ಟು ಬೇಕೋ ಅಷ್ಟು ಉಪಯೋಗಿಸಿ ಮಿಕ್ಕದ್ದೆಲ್ಲ Freezer ನಲ್ಲಿಡಿ. ಮೂರು ತಿಂಗಳಾದರೂ ಕೆಡುವುದಿಲ್ಲ. Fridge ನಲ್ಲಿಟ್ಟರೆ ಕೆಟ್ಟು ಹೋಗುವ ಸಾಧ್ಯತೆ ಇದೆ! ದಯವಿಟ್ಟು Freezer ನಲ್ಲಿಟ್ಟು ಬೇಕಾದಾಗ ಉಪಯೋಗಿಸಿ.

ಈ ಪೇಸ್ಟ್ ಬದಲು Ice cubes tray ನಲ್ಲಿ ಹಾಕಿ Cubes ಬೇಕಾದರೂ ಮಾಡಿ ಫ್ರೀಝರ್ ನಲ್ಲಿಟ್ಟು ಬೇಕಾದಾಗ ಉಪಯೋಗಿಸಬಹುದು.

 

ಹುಣಿಸೆ ಸಿಪ್ಪೆ ಕಸದ ಬುಟ್ಟಿಗೆ ಎಸೆಯುವ ಬದಲು ಮನೆಯಲ್ಲಿರುವ ದೇವರ ವಿಗ್ರಹಗಳು, ಹಿತ್ತಾಳೆ, ಕಂಚಿನ ಪಾತ್ರೆಗಳನ್ನು ತೊಳೆಯಲು ಉಪಯೋಗಿಸಿ.

ಧನ್ಯವಾದಗಳು🙏🙏🙏

Leave a Reply

Your email address will not be published.